Mysuru : ಶಿಕ್ಷಕರು ಜೀನ್ಸ್ , ಟೀ ಶರ್ಟ್ ಹಾಕುವಂತಿಲ್ಲ
- ಮೈಸೂರು ಜಿಲ್ಲೆಯಲ್ಲಿ ಶಿಕ್ಷಕರು ಜೀನ್ಸ್ ಪ್ಯಾಂಟ್ ಹಾಕುವಂತಿಲ್ಲ
- ಕರ್ತವ್ಯದಲ್ಲಿ ಇರುವಾಗ ಸಿಬ್ಬಂದಿಗಳ್ಯಾರು ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸದಂತೆ ಆದೇಶ
ಮೈಸೂರು (ನ.07): ಮೈಸೂರು (Mysuru) ಜಿಲ್ಲೆಯಲ್ಲಿ ಶಿಕ್ಷಕರು (Teachers) ಜೀನ್ಸ್ ಪ್ಯಾಂಟ್ (Jeans ) ಹಾಕುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಕರ್ತವ್ಯದಲ್ಲಿ ಇರುವಾಗ ಸಿಬ್ಬಂದಿಗಳ್ಯಾರು ಟೀ ಶರ್ಟ್ (T Shirt) ಹಾಗೂ ಜೀನ್ಸ್ ಪ್ಯಾಂಟ್ ಧರಿಸದಂತೆ ಆದೇಶ ನೀಡಲಾಗಿದೆ.
ಮೈಸೂರು ಜಿಲ್ಲೆಯಲ್ಲಿ ಹೊರಡಿಸಿದ ಈ ಆದೇಶ ಇದೀಗ ವಿವಾದಕ್ಕೆ ಒಳಗಾಗುವಂತಿದೆ. ಡಿಡಿಪಿಯು ಶ್ರೀನಿವಾಸ್ ಮೂರ್ತಿ (DDPU Shrinivas murthy) ಆದೇಶ ನೀಡಿದ್ದು ಕರ್ತವ್ಯದ ವೇಳೆ ಜೀನ್ಸ್, ಟೀ ಶರ್ಟ್ ಧರಿಸದಿರಲು ಸೂಚಿಸಲಾಗಿದೆ.
ಜಿಲ್ಲಾ ಉಪನಿರ್ದೇಶಕರ ಕಚೇರಿ ಮತ್ತು ಕಾಲೇಜುಗಳಲ್ಲಿ (College) ಪ್ರಾಂಶುಪಾಲರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗೆ ಈ ಹೊಸ ಆದೇಶ ಅನ್ವಯವಾಗಲಿದೆ.
ಕರ್ತವ್ಯದ ವೇಳೆ ಟಿ - ಶರ್ಟ್ ಹಾಗು ಜೀನ್ಸ್ ಪ್ಯಾಂಟ್ ಗಳನ್ನು ಧರಿಸುವುದು ನಿರ್ಭಂಧಿತ. ಆದ್ದರಿಂದ ಶಿಕ್ಷಣ ಸಂಸ್ಥೆಗಳ (Education Institute) ಬೋಧಕ-ಬೋಧಕೇತರ ಸಿಬ್ಬಂದಿ ಈ ಆದೇಶ ಪಾಲಿಸಬೇಕೆಂದು ಸೂಚಿಸಲಾಗಿದೆ.
ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ (DC Bagadi Goutham) ಅವರು ಮೌಖಿಕವಾಗಿ ಸೂಚನೆ ನೀಡಿದ್ದು, ಈ ಸೂಚನೆ ಮೇರೆಗೆ ಆದೇಶ ಹೊರಡಿಸಲಾಗಿದೆ.
ವಿಧಾನಸಭಾ ಸಚಿವಾಲಯದಿಂದ ಜೀನ್ಸ್ ಟೀ ಶರ್ಟ್ ನಿಷೇಧ
ವಿಧನಾಸಭಾ (Assembly) ಸಚಿವಾಲಯ ಕಚೇರಿ ಸಿಬ್ಬಂದಿ, ನೌಕರರಿಗೆ ವಸ್ತ್ರಸಂಹಿತೆ (Dress Code) ಜಾರಿ ಮಾಡಲಾಗಿದೆ. ಉತ್ತರ ಪ್ರದೇಶದ (Uttara pradesh) ವಿಧಾನಸಭಾ ಸಚಿವಾಲಯದ ನೌಕರರು, ಸಿಬ್ಬಂದಿಗಳು ಜೀನ್ಸ್ ಹಾಗೂ ಟೀ ಶರ್ಟ್ ಧರಿಸಿ ಕಚೇರಿಗೆ ಬರುವಂತಿಲ್ಲ. ಕರ್ತವ್ಯಕ್ಕೆ ಹಾಜರಾಗುವವರಿಗೆ ಜೀನ್ಸ್ ಹಾಗೂ ಟೀ ಶರ್ಟ್ ನಿಷೇಧಿಸಲಾಗಿದೆ.
ನೂತನ ಆದೇಶವನ್ನು ವಿಧಾನಸಭಾ ಸಚಿವಾಲಯದ ಜಂಟಿ ಕಾರ್ಯದರ್ಶಿ ನರೇಂದ್ರ ಕುಮಾರ್ ಮಿಶ್ರಾ ಹೊರಡಿಸಿದ್ದಾರೆ. ಉತ್ತರ ಪ್ರದೇಶ ಅಸೆಂಬ್ಲಿ ಸೆಕ್ರೆಟರಿಯಟ್ ಕಚೇರಿಯ ಘನತೆ ಕಾಪಾಡಿಕೊಳ್ಳಬೇಕು. ಹೀಗಾಗಿ ಈ ನಿಯಮ ಜಾರಿಗೆ ತರಲಾಗುತ್ತಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ನೂತನ ಆದೇಶದ ಪ್ರಕಾರ ಜೀನ್, ಟೀ ಶರ್ಟ್ ಅಥವಾ ಕ್ಯಾಶ್ಯುಯೆಲ್ ಉಡುಗೆ ಧರಿಸಿ ಸಚಿವಾಲಯ ಪ್ರವೇಶಿಸುವಂತಿಲ್ಲ. ಈ ನಿಯಮ ಸಚಿವಾಲಯದ ಸಿಬ್ಬಂದಿಗಳು, ಉದ್ಯೋಗಿಗಳಿಗೆ ಅನ್ವಯವಾಗಲಿದೆ. ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಅಧಿಕಾರಿಗಳು ಸಿಬ್ಬಂದಿಗಳಲ್ಲಿ ಶಿಸ್ತು ಅಗತ್ಯ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಜೀನ್ಸ್ ಧರಿಸಿದ ಕಾರಣಕ್ಕೆ ಕುಟುಂಬದವರಿಂದ ಯುವತಿ ಮೆಲೆ ಹಲ್ಲೆ
ಪ್ರತಿಯೊಬ್ಬರಿಗೆ ತಮಗಿಷ್ಟದ ಉಡುಪು ಧರಿಸುವ ಸ್ವಾತಂತ್ರ್ಯವಿದೆ. ಆದರೆ ದೇಶದಲ್ಲಿ ಹಲವು ಬಾರಿ ಮಹಿಳೆಯ ಉಡುಗೆ ತೊಡುಗೆ ಭಾರಿ ಚರ್ಚೆಯಾಗಿದೆ, ವಿವಾದ ಸೃಷ್ಟಿಸಿದೆ. ಇದೀಗ ಉಡುಗೆ ತೊಡುಗೆ ಪ್ರಕರಣಕ್ಕೆ ಮತ್ತೊಂದು ಭೀಕರ ಘಟನೆಯೂ ಸೇರಿಕೊಂಡಿದೆ. ಜೀಂಟ್ಸ್ ಪ್ಯಾಂಟ್ ಧರಿಸಿದ ಕಾರಣಕ್ಕೆ 17ರ ಯುವತಿಯನ್ನು ಕೋಲಿನಿಂದ ಬಡಿದು ಕೊಂದ ಘಟನೆ ನಡೆದಿದೆ.
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ದಿಯೋರಿಯಾ ಜಿಲ್ಲೆಯಲ್ಲಿ. 17ರ ಬಾಲಕಿಯ ಉಡುಗು ತೊಡೆಗುಗೆ ಪೋಷಕರ ವಿರೋಧವಿರಲಿಲ್ಲ. ಆದರೆ ಅಜ್ಜ ಸೇರಿದಂತೆ ಕುಟುಂಬಸ್ಥರು ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಮಂಗಳವಾರ(ಜು.20) ಕುಂಟಬಸ್ಥರ ಎಚ್ಚರಿಕೆ ಕಡೆಗಣಿಸಿ ಜೀನ್ಸ್ ಪ್ಯಾಂಟ್ ಧರಿಸಿದ ಕಾರಣಕ್ಕೆ ಕುಟುಂಬಸ್ಥರು ಬಾಲಕಿಗೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ.
ತೀವ್ರವಾಗಿ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆ ಸಾಗಿಸೋ ನೆಪ ಹೇಳಿ ಕುಟುಂಬಸ್ಥರು ಮನೆಯಿಂದ ಕರೆದೊಯ್ದಿದ್ದಾರೆ. ಮಾರ್ಗ ಮಧ್ಯೆ ಬಾಲಕಿ ಸಾವನ್ನಪ್ಪಿದ್ದಾಳೆ. ಪ್ರಕರಣ ಮುಚ್ಚಿಹಾಕಲು ಸೇತುವೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕತೆ ಕಟ್ಟಲಾಗಿದೆ ಎಂದು ಯವತಿ ತಾಯಿ ಆರೋಪಿಸಿದ್ದಾರೆ.
ಘಟನೆ ರಾತ್ರಿ ಜೀನ್ಸ್ ಪ್ಯಾಂಟ್ ಧರಿಸಿದ ಬಾಲಕಿ, ಪೂಜೆಗೆ ತೆರಳುವುದಾಗಿ ಪಂಜಾಬ್‌ನಲ್ಲಿ ವಲಸೆ ಕಾರ್ಮಿಕರಾಗಿರುವ ತಂದೆಗೆ ಫೋನ್ ಮೂಲಕ ತಿಳಿಸಿದ್ದಾಳೆ. ಜೀನ್ಸ್ ಪ್ಯಾಂಟ್ ತೆಗೆಯಲು ಕೂಡು ಕುಟುಂಬದ ಸದಸ್ಯರು ಎಚ್ಚರಿಕೆ ನೀಡಿದ್ದಾರೆ. ಆದರೆ ಎಚ್ಚರಿಕೆ ಸೊಪ್ಪು ಹಾಕದ ಬಾಲಕಿಯ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ದಿಯೋರಿಯಾ ಪೊಲೀಸರು ಬಾಲಕಿಯ ಅಜ್ಜನನ್ನು ಬಂಧಿಸಿದ್ದಾರೆ. ಇತರ ಮೂವರು ಕುಟುಂಬ ಸದಸ್ಯರು ತಲೆಮೆರೆಸಿಕೊಂಡಿದ್ದಾರೆ.