Asianet Suvarna News Asianet Suvarna News

ಸರ್ಕಾರ ಗೋಹತ್ಯೆ ನಿಲ್ಲಿಸದಿದ್ದರೆ, ನಾವು ನಿಲ್ಲಿಸುತ್ತೇವೆ: ಪ್ರಮೋದ್ ಮುತಾಲಿಕ್

*   ಬಲಿಷ್ಠ ರಾಷ್ಟ್ರ ನಿರ್ಮಾಣ ನಮ್ಮೆಲ್ಲರ ಕರ್ತವ್ಯ
*   ಕೇಂದ್ರ ಸರ್ಕಾರ ಹಲಾಲ್ ಸರ್ಟಿಫಿಕೇಟ್ ರದ್ದು ಮಾಡಲಿ
*   ಹಿಂದೂಗಳ ಮೇಲೆ ಕ್ರೂರವಾಗಿ ನಡೆದುಕೊಳ್ಳುವವರ ಮೇಲೆ ಕ್ರಮ ಕೈಗೊಳ್ಳಬೇಕು 
 

Pramod Mutalik Talks Over Cow Slaughter in Karnataka grg
Author
Bengaluru, First Published Nov 1, 2021, 9:47 AM IST
  • Facebook
  • Twitter
  • Whatsapp

ಗಂಗಾವತಿ(ನ.01):  ಹಿಂದು ಬಲಿಷ್ಠ ರಾಷ್ಟ್ರ(Hindu Nation) ನಿರ್ಮಾಣ ನಮ್ಮೇಲರ ಕರ್ತವ್ಯ ಎಂದು ಧಾರವಾಡದ(Dharwad) ಅವಧೂತ ಪರಮಾತ್ಮಜೀ ಮಹಾರಾಜ ಹೇಳಿದರು. ಅವರು ನಗರದ ಚನ್ನಬಸವ ಕಲ್ಯಾಣ ಮಂಟಪದಲ್ಲಿ ಓಂ ಮಿನಿಷ್ಟ್ರಿ ಪ್ರಾಯೋಜಿತ ಹಿಂದುಪರ ಸಂಘಟನೆಗಳ ಹಿಂದು ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿನ ಸಾಧಕ ಬಾಧಕಗಳನ್ನು ಸಂಘಟನೆ ಚರ್ಚಿಸಿದ್ದು, ಪೂರಕವಾದ ಪ್ರಯತ್ನ ವೇದಿಕೆಯಿಂದ ನಡೆಯಲಿದೆ. ಅಲ್ಲದೆ ಹಿಂದು ಸಮಾವೇಶದಲ್ಲಿ(Hindu Convention) ಸುಮಾರು ನಲವತ್ತು ಸಂಘಟನೆಗಳು ಭಾಗವಹಿಸಿದ್ದು ಶುಭ ಸಂದೇಶವಾಗಿದೆ ಎಂದರು.

ಅಭಿನವ ಹಾಲಹಳ್ಳಿ ವೀರಪ್ಪಜ್ಜ ಮಹಾಸ್ವಾಮಿ ಮಾತನಾಡಿ, ಜಾತಿ(Caste) ಮಠಗಳಿಗೆ ಸೀಮಿತವಾಗದೆ ಹಿಂದುತ್ವಕ್ಕಾಗಿ(Hindutva) ಒಗ್ಗಟ್ಟು ಆಗಬೇಕಿದೆ. ಹಿಂದು ಸಮಾಜ ಆರ್ಥಿಕವಾಗಿ ಬಲಗೊಳ್ಳಬೇಕು ಅದಕ್ಕಾಗಿ ಪ್ರಯತ್ನಿಸಬೇಕು. ಹಿಂದು ಸಂಘಟನೆಗೆ(Hindu Organization) ಸಂಪೂರ್ಣ ಸಹಕಾರವಿದೆ ಎಂದರು. 

ಮತಾಂತರ ಕ್ರೌರ್ಯಕ್ಕಿಂತ ಹೀನ ಕೃತ್ಯ: ಪ್ರಮೋದ್‌ ಮುತಾಲಿಕ್‌

ಹಾರಿಕ ಮಂಜುನಾಥ ಮಾತನಾಡಿ, ಹಿಂದುಗಳಿಗೆ ಭಾರತಬೇಕಿದೆ, ಎಲ್ಲ ಧರ್ಮದವರಿಗೆ(Religion) ಬೇರೆ ಬೇರೆ ರಾಷ್ಟ್ರಗಳಿವೆ. ಆದರೆ ನಮಗಿರುವುದು ಭಾರತ(India) ಮಾತ್ರ.ಅಲ್ಲದೆ ಭಾರತದಲ್ಲಿ ಸುಮಾರು 10ರಿಂದ 12ಲಕ್ಷ ಜನರು ಮತಾಂತರಗೊಳ್ಳುತ್ತಿದ್ದಾರೆ(Conversion) ಎಂದರು. 

ಲವ್ ಜಿಹಾದ್‌ಗೆ(Love Jihad) ಸಾವಿರಾರು ಹೆಣ್ಣು ಮಕ್ಕಳು ಬಲಿಯಾಗುತ್ತಿದ್ದಾರೆ. ಇದೆ ರೀತಿ ವ್ಯವಸ್ಥೆ ಆದರೆ ಭಾರತ ಉಳಿಯಲು ಸಾಧ್ಯವಿಲ್ಲ. ಅದಕ್ಕಾಗಿ ನಾವು ಜಾಗೃತಿ(Awareness)  ಗೊಳ್ಳಬೇಕಾಗಿದೆ. ತಂದೆ ತಾಯಿಗಳು ಮೊದಲು ದೇವಸ್ಥಾನಗಳಿಗೆ(Temple) ಹೋಗಬೇಕು, ಎಲ್ಲರ ಮನೆಯಲ್ಲಿ ಭಗವದ್ಗೀತೆ(Bhagavad Gita) ಓದಬೇಕು.ಇದರಿಂದ ಧರ್ಮ ಜಾಗೃತಿಗೊಳ್ಳುತ್ತದೆ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ದೇವಸ್ಥಾನಗಳಿಗೆ ಕರೆದುಕೊಂಡ ಹೋಗುವ ಅಭ್ಯಾಸ ಒಳ್ಳೆಯದು. ಹಿಂದು ಧರ್ಮದಲ್ಲಿನ ಕೆಲವರು ನೆಪ ಮಾತ್ರವಾಗಿದ್ದಾರೆ. ಇದು ಉತ್ತಮ ಬೆಳವಣಿಗೆ ಅಲ್ಲ ಎಂದರು.

ಸಮಾರಂಭದ ವೇದಿಕೆಯಲ್ಲಿ ಪಾಂಚಜನ್ಯ ಎನ್ನುವ ಕೃತಿಯ ಮುಖಪುಟವನ್ನು ಅನಾವರಣಗೊಳಿಸಿದರು. ಈ ವೇಳೆಯಲ್ಲಿ ಪ.ಪೂ. ಪ್ರಭೋದಿನಿ ಭಾರತೀ ಮಹಾಸ್ವಾಮಿ, ಹಾರಿಕಾ ಮಂಜುನಾಥ, ಶಾಸಕ ಪರಣ್ಣ ಮುನವಳ್ಳಿ, ಶಾಸಕ ಗುಳಿಹಟ್ಟಿ ಶೇಖರ, ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ, ಆಂದೋಲನ ಸ್ವಾಮಿ, ಚೈತ್ರಾ ಕುಂದಾಪುರ, ಮಾದಿಗ ದಂಡೋರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಹುಸೇನಪ್ಪ ಸ್ವಾಮಿ, ಶ್ರವಣಕುಮಾರ ರಾಯ್ಕರ್ ಸೇರಿದಂತೆ ಇನ್ನಿತರ ಭಾಗವಹಿಸಿದ್ದರು. 

ಹಿಂದೂ ಸಮಾವೇಶದಲ್ಲಿ ಅವಧೂತ ಪರಮಾತ್ಮಜೀ ಮಹಾರಾಜ ಹಿಂದುತ್ವಕ್ಕಾಗಿ ಒಗ್ಗಟ್ಟು ಅಗ ಮಠಗಳು ಜಾತಿಗೆ ಸೀಮಿತವಾಗದೆ ಹಿಂದುತ್ವಕ್ಕಾಗಿ ಒಗ್ಗಟ್ಟು ಆಗಬೇಕಿದೆ. ಹಿಂದು ಸಮಾಜ ಆರ್ಥಿಕವಾಗಿ ಬಲಗೊಳ್ಳಬೇಕು. ಅದಕ್ಕಾಗಿ ಪ್ರಯತ್ನಿಸಬೇಕು ಎಂದು ಅಭಿನವ ಹಾಲಹಳ್ಳಿ ವೀರಪ್ಪಜ್ಜ ಮಹಾಸ್ವಾಮಿ ತಿಳಿಸಿದ್ದಾರೆ. 

ಸರ್ಕಾರ ಗೋಹತ್ಯೆ ನಿಲ್ಲಿಸದಿದ್ದರೆ, ನಾವು ನಿಲ್ಲಿಸುತ್ತೇವೆ: ಮುತಾಲಿಕ್

ರಾಜ್ಯದಲ್ಲಿ(Karnataka) ಗೋಹತ್ಯೆ(Cow Slaughter) ನಿಷೇಧ ಕಾಯ್ದೆ ಜಾರಿಗೆ ಬಂದರೂ ನಿರಂತರವಾಗಿ ಗೋ ಹತ್ಯೆ ನಡೆಯುತ್ತಿದೆ. ಸರ್ಕಾರ(Government) ಕ್ರಮ ಕೈಗೊಳ್ಳದಿದ್ದರೆ ನಾವು (ಹಿಂದೂ ಸಂಘಟನೆ) ನಿಲ್ಲಿಸುತ್ತೇವೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್(Pramod Mutalik) ಸರ್ಕಾರವನ್ನು ಎಚ್ಚರಿಸಿದರು.

ನಗರದಲ್ಲಿ ಹಿಂದೂ ಸಮಾವೇಶದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗೋಹತ್ಯೆ ಮತ್ತು ಮಾಂಸ ರಫ್ತುMeat Export) ಮಾಡುತ್ತಿದ್ದರೂ ಸರ್ಕಾರ ಗಮನ ಹರಿಸದೆ ಇರುವುದು ಹಿಂದೂ ಜನಾಂಗಕ್ಕೆ ದೊಡ್ಡ ದ್ರೋಹವಾಗಿದೆ ಎಂದರು.

ಹಿಂದೂಗಳು ಗೋಮಾತೆಯನ್ನು(Cow) ಪೂಜೆ ಮಾಡುವ ಮೂಲಕ ಭಗವಂತನನ್ನು(God) ಕಾಣುತ್ತಾರೆ. ಇಂತಹ ಸಂದರ್ಭದಲ್ಲಿ ದಿನ ನಿತ್ಯ ಸಾವಿರಾರು ಗೋವುಗಳನ್ನು ಹತ್ಯೆ ಮಾಡುತ್ತಿದ್ದರೂ ಸರ್ಕಾರ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಕೂಡಲೆ ಸರ್ಕಾರ ಗೋಹತ್ಯೆ ನಿಲ್ಲಿಸಬೇಕು ಎಂದರು.

ಮಸೀದಿಗಳಲ್ಲಿ ಧ್ವನಿ ವರ್ಧಕ ನಿಲ್ಲಿಸಲು ಆಗ್ರಹಿಸಿ ಹೋರಾಟ: ಪ್ರಮೋದ್ ಮುತಾಲಿಕ್

ಬಾಂಗ್ಲಾ, ಪಶ್ಚಿಮ ಬಂಗಾಳ, ದೆಹಲಿ, ಉತ್ತರ ಪ್ರದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ, ಅತ್ಯಾಚಾರ, ಕೊಲೆ, ಲೂಟಿ ನಿರಂತರವಾಗಿ ನಡೆಯುತ್ತಿದೆ. ಇದನ್ನು ಸರ್ಕಾರ ನಿಯಂತ್ರಿಸ ಬೇಕಾಗಿದೆ ಎಂದು ಒತ್ತಾಯಿಸಿದ ಅವರು, ಹಿಂದೂಗಳ ಮೇಲೆ ಕ್ರೂರವಾಗಿ ನಡೆದುಕೊಳ್ಳುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದರು. 

ಹಲಾಲ್ ಕಾಯ್ದೆ ನಿಷೇಧಿಸಿ: 

ಕೇಂದ್ರ ಸರ್ಕಾರ(Central Government) ಮುಸ್ಲಿಮರಿಗೆ(Muslim) ನೀಡಿದ ಹಲಾಲ ಕಾಯ್ದೆ ನಿಲ್ಲಿಸಬೇಕು ಎಂದು ಪ್ರಮೋದ್ ಮುತಾಲಿಕ ಒತ್ತಾಯಿಸಿದರು. ಈ ಕಾಯ್ದೆಯಿಂದ ವ್ಯವಹಾರ ಮಾಡಿ ಬರುವ ಹಣ ಭಯೋತ್ಪಾದಕರಿಗೆ(Terrorists) ಹೋಗುತ್ತದೆ. ಕೂಡಲೆ ಸರ್ಕಾರ ನಿಲ್ಲಿಸಬೇಕೆಂದು ಆಗ್ರಹಿಸಿದರು. ಅಲ್ಲದೇ ಈ ಕಾಯ್ದೆ ಹಲಾಲ್ ಮುಕ್ತ ದೀಪಾವಳಿ(Deepavali) ಆಗ ಬೇಕೆಂದರು. ಈ ಕಾಯ್ದೆ ಮುಂದೆ ಇಟ್ಟುಕೊಂಡು ಮುಸ್ಲಿಮರು ಸಾಕಷ್ಟು ಹಣ ದೋಚುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದೂ ರಾಷ್ಟ್ರ ನಿರ್ಮಾಣ: 

ಹಿಂದು ಸಂಘಟನೆಗಳು ಒಗ್ಗಟ್ಟಾಗುವ ಉದ್ದೇಶದಿಂದ ಹಿಂದು ರಾಷ್ಟ್ರ ನಿರ್ಮಾಣ ಸಂಘ ಅಸ್ತಿತ್ವಕ್ಕೆ ತರಲಾಗುತ್ತದೆ. ಈ ಕಾರಣಕ್ಕೆ ಗಂಗಾವತಿಯಲ್ಲಿ ಪ್ರಥಮ ಸಮಾವೇಶ ಮಾಡಲಾಗಿದ್ದು, 38 ಹಿಂದೂ ಸಂಘಟನೆಗಳು ಘೋಷಣೆ ಮಾಡಿವೆ ಎಂದರು.

ಈ ಸಂದರ್ಭದಲ್ಲಿ ಚೈತ್ರಾ ಕುಂದಾಪುರ, ಕಲಬುರ್ಗಿಯ ಸಿದ್ದಲಿಂಗಸ್ವಾಮಿಗಳು, ಧಾರವಾಡದ ಪರಮಾತ್ಮಾಜೀ ಮಹಾರಾಜ, ಹೂವಿನಹಡಗಲಿಯ ಅಭಿನವ ಹಾಲಸ್ವಾಮಿ, ಮುಂಬಯಿಯ ರಮೇಶ ಶಿಂಧೆ, ಶ್ರವಣಕುಮಾರ ರಾಯ್ಕರ್ ಉಪಸ್ಥಿತರಿದ್ದರು. 
 

Follow Us:
Download App:
  • android
  • ios