Asianet Suvarna News Asianet Suvarna News

ಮತಾಂತರ ಕ್ರೌರ್ಯಕ್ಕಿಂತ ಹೀನ ಕೃತ್ಯ: ಪ್ರಮೋದ್‌ ಮುತಾಲಿಕ್‌

*  ಶ್ರೀರಾಮ ಸೇನೆಯಿಂದ ಗದಗದಲ್ಲಿ ಪಥ ಸಂಚಲನ
*  ಮತಾಂತರ ಬಗ್ಗೆ ರಾಜ್ಯ ಒಂದು ಕಠಿಣ ಕಾನೂನು ಜಾರಿಗೊಳಿಸಬೇಕು 
*  ರಾಜ್ಯದಲ್ಲಿ ಚರ್ಚ್‌ ಕಟ್ಟಲು ಹಾಗೂ ಪ್ರಾರ್ಥನೆಗೆ ಅವಕಾಶ ಕೊಟ್ಟಿದ್ದು ಮತಾಂತರಕ್ಕಲ್ಲ
 

Pramod Mutalik Talks Over Conversion in Karnataka grg
Author
Bengaluru, First Published Oct 18, 2021, 3:39 PM IST

ಗದಗ(ಅ.18): ಮತಾಂತರ ಎನ್ನುವುದು ಕ್ರೌರ್ಯಕ್ಕಿಂತಲೂ ಹೀನವಾದ ಕೃತ್ಯವಾಗಿದ್ದು, ಇದನ್ನು ಶ್ರೀರಾಮ ಸೇನೆ ಮೊದಲಿನಿಂದಲೂ ಬಲವಾಗಿ ವಿರೋಧಿಸುತ್ತಲೇ ಬಂದಿದೆ. ಈಗಲೂ ಅದನ್ನು ಉಗ್ರವಾಗಿ ಖಂಡಿಸುತ್ತೇವೆ, ವಿರೋಧಿಸುತ್ತೇವೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌(Pramod Mutalik) ಹೇಳಿದ್ದಾರೆ. 

ಅವರು ಭಾನುವಾರ ನಗರದಲ್ಲಿ ಶ್ರೀರಾಮ ಸೇನೆಯಿಂದ ಆಯೋಜಿಸಲಾಗಿದ್ದ ಗಣವೇಷಧಾರಿಗಳ ಪಥ ಸಂಚಲನದಲ್ಲಿ ಪಾಲ್ಗೊಳ್ಳಲು(RSS) ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮ ಸಂಘಟನೆಯಿಂದ ಭಾನುವಾರ ಗದಗ(Gadag) ನಗರದಲ್ಲಿ ನಡೆಯುತ್ತಿರುವ ಗಣವೇಷಧಾರಿಗಳ ಪಥ ಸಂಚಲನ ಇದು ಮತಾಂತರದ ವಿರುದ್ಧದ ಪಥ ಸಂಚಲನವಾಗಿದೆ. ನಮ್ಮ ರಾಜ್ಯದಲ್ಲಿ ಚರ್ಚ್‌ ಕಟ್ಟಲು ಹಾಗೂ ಪ್ರಾರ್ಥನೆಗೆ ಅವಕಾಶ ಕೊಟ್ಟಿದ್ದು ಮತಾಂತರಕ್ಕಲ್ಲ, ಇದನ್ನು ಕ್ರಿಶ್ಚಿಯನ್‌(Christian) ಧರ್ಮಕ್ಕೆ(Religion) ಮತಾಂತರ ಮಾಡುತ್ತಿರುವವರು, ಮಾಡಲು ಪ್ರಯತ್ನಿಸುವವರು ಗಮನಿಸಬೇಕು. ಮತಾಂತರ ಮಾಡುವುದು ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುವ ಯತ್ನವಾಗಿದೆ. ಮತಾಂತರ ಬಗ್ಗೆ ರಾಜ್ಯ ಒಂದು ಕಠಿಣ ಕಾನೂನು(Law) ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಹುಬ್ಬಳ್ಳಿ: ಕ್ರೈಸ್ತ ಸಮುದಾಯದದಿಂದ ಮತಾಂತರ, ಚರ್ಚ್‌ಗೆ ನುಗ್ಗಿದ ಹಿಂದೂ ಕಾರ್ಯಕರ್ತರು

ಕರ್ನಾಟಕದಲ್ಲಿ(Karnataka) ಚರ್ಚ್‌ಗಳಲ್ಲಿ(Church) ನಡೆಯುತ್ತಿರುವ ಮತಾಂತರವನ್ನು ಶ್ರೀರಾಮಸೇನೆ ಬಹಳ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಈಗಾಗಲೇ ಹಲವಾರು ಬಾರಿ ಎಚ್ಚರಿಕೆ ನೀಡಲಾಗಿದೆ. ಇದೇ ರೀತಿಯ ಕೃತ್ಯಗಳನ್ನು ಅವರು ಮುಂದುವರಿಸಿದಲ್ಲಿ ಮುಂದಿನ ದಿನಗಳಲ್ಲಿ ಶ್ರೀರಾಮಸೇನೆ ಹಳ್ಳಿ ಹಳ್ಳಿಗಳಲ್ಲಿ ಪಾದ್ರಿಗಳನ್ನು ಒದ್ದು ಓಡಿಸಬೇಕಾಗುತ್ತದೆ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಗೂಳಿಹಟ್ಟಿಶೇಖರ(Goolihatti Shekhar) ಅವರ ತಾಯಿಯನ್ನು ಮತಾಂತರ ಮಾಡಿದ ವಿಷಯದ ಬಗ್ಗೆ ದೊಡ್ಡ ಚರ್ಚೆ ಆಗುತ್ತಿದೆ. ಆದರೆ ನಿರಂತವಾಗಿ ಬಡವರು, ಹಿಂದುಳಿದವರನ್ನು ಗುರಿಯಾಗಿಸಿಕೊಂಡು ಮತಾಂತರ(Conversion) ಮಾಡುತ್ತಾ, ಮುಗ್ಧ ಹಿಂದುಗಳನ್ನು(Hindu) ಮೋಸದಿಂದ ಆಸೆ ಆಮಿಷಗಳಿಗೆ ಒಳಪಡಿಸಲಾಗುತ್ತಿದೆ ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಮತಾಂತರ ತಡೆಗೆ ಶ್ರೀರಾಮಸೇನೆಯಿಂದ(Sriramasena) ಭಾನುವಾರ ಸಂಜೆ ಗದಗ ನಗರದ ಪ್ರಮುಖ ಬೀದಿಗಳಲ್ಲಿ ಗಣವೇಷಧಾರಿಗಳ ಪಥ ಸಂಚಲನ ಜರುಗಿತು. ನಗರದ ವೀರನಾರಾಯಣ ಮಂದಿರದಿಂದ ಆರಂಭಗೊಂಡ ಪಥ ಸಂಚಲನವು, ಚೌಡಿಕೂಟ, ಸೋಮೇಶ್ವರ ದೇವಸ್ಥಾನ ಮೂಲಕ ಮುನ್ಸಿಪಲ್‌ ಗ್ರೌಂಡ್‌ ವರೆಗೂ ಜರುಗಿತು. ಗಣವೇಷಧಾರಿಗಳಿಗೆ ಸ್ಥಳೀಯರು ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು.
 

Follow Us:
Download App:
  • android
  • ios