ಮಚ್ಚು ಲಾಂಗು ಹಿಡ್ಕೊಂಡು ಹೊಡೆದಾಡುತ್ತೇವೆ ಎಂದರೆ ಇದು ಅಷ್ಘಾನಿಸ್ತಾನವಲ್ಲ: ಮುತಾಲಿಕ್
* ಹಿಂದುಗಳ ಹತ್ಯೆ ಹೀಗೆ ಮುಂದುವರಿದರೆ ನಾವು ಬೀದಿ ಬೀದಿಯಲ್ಲಿ ಉತ್ತರ ಕೊಡಬೇಕಾಗುತ್ತದೆ
* ಕೊಲೆಗಡುಕರನ್ನ ಬಂಧಿಸಿದಕ್ಕೆ ಸರ್ಕಾರಕ್ಕೆ ಅಭಿನಂದನೆ
* ಬಿಜೆಪಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ ಪ್ರಮೋದ್ ಮುತಾಲಿಕ್
ಮೈಸೂರು(ಫೆ.25): ಮಚ್ಚು ಲಾಂಗು ಹಿಡ್ಕೊಂಡು ಹೊಡೆದಾಡುತ್ತೇವೆ ಎಂದರೆ ಇದು ಅಷ್ಘಾನಿಸ್ತಾನವಲ್ಲ(Afghanistan). ಈ ದೇಶದ ಅನ್ನ ತಿನ್ನುವ ನೀವು ಸಂವಿಧಾನದ ಆಧಾರದಲ್ಲಿರಬೇಕು. ದೇಶದಲ್ಲಿ ಸಂವಿಧಾನವಿದೆ, ನ್ಯಾಯಾಲಯವಿದೆ. ನಿಮಗೆ ತೊಂದರೆಯಾದರೆ ನ್ಯಾಯಾಲಯಕ್ಕೆ ಹೋಗಿ ಎಂದು ಪ್ರಮೋದ್ ಮುತಾಲಿಕ್(Pramod Mutalik) ಹೇಳಿದರು.
ಶಿವಮೊಗ್ಗ(Shivamogga) ಹರ್ಷ ಹತ್ಯೆ(Harsha Murder) ಪ್ರಕರಣ ಸಂಬಂಧ ಮೈಸೂರಿನಲ್ಲಿ(Mysuru) ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಗಳ(Hindu) ಹತ್ಯೆ ಹೀಗೆ ಮುಂದುವರಿದರೆ ನಾವು ಬೀದಿ ಬೀದಿಯಲ್ಲಿ ಉತ್ತರ ಕೊಡಬೇಕಾಗುತ್ತದೆ. ಹತ್ಯೆಯಾದ 24 ಗಂಟೆಯೊಳಗೆ ಕೊಲೆಗಡುಕರನ್ನ ಬಂಧಿಸಿದಕ್ಕೆ ಸರ್ಕಾರಕ್ಕೆ ಅಭಿನಂದನೆಗಳು. ನಿರಂತರವಾಗಿ ನಡೆಯುತ್ತಿರುವ ಹಿಂದುಗಳ ಹತ್ಯೆ ಕೊನೆಯಗಬೇಕು. ಮುಂದೆ ಈ ರೀತಿ ಹತ್ಯೆ ಮುಂದುವರಿದರೆ ಸರ್ಕಾರ ಅಥವಾ ಕಾನೂನು ಇಲ್ಲದೆ ಹಿಂದೂ ಸಮಾಜ ಸಿಡಿದು ನಿಲ್ಲಬೇಕಾಗುತ್ತದೆ. ನಾವು ಬೀದಿ ಬೀದಿಯಲ್ಲಿ ಉತ್ತರ ಕೊಡಬೇಕಾಗುತ್ತದೆ. ಬಂಧನವಾಗಿರುವವರು ಕ್ರಿಮಿನಲ್ಸ್ ಇದ್ದಾರೆ, ಅಂತವರನ್ನ ಎನ್‌ಕೌಂಟರ್ ಮಾಡಿಯೇ ಉತ್ತರ ಕೊಡಬೇಕು. ಈ ಘಟನೆಯ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ(Court) ರಚನೆ ಮಾಡಿ, ತುರ್ತಾಗಿ ಸಂಬಂಧಪಟ್ಟ ಪ್ರಕ್ರಿಯೆ ಉಂಟಾಗಬೇಕು ಎಂದು ಅವರು ಆಗ್ರಹಿಸಿದರು.
Hubballi: ಕಾಲೇಜಿಗೆ ಹಿಜಾಬ್ ಧರಿಸಿಯೇ ಬರ್ತೇವೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ: ಮುತಾಲಿಕ್
ರಾಜ್ಯದಲ್ಲಿ(Karnataka) ಗುಪ್ತಚರ ಇಲಾಖೆಯ(Department of Intelligence) ನಿರ್ಲಕ್ಷ್ಯವಿದೆ. ಕ್ರಿಮಿನಲ್ಸ್ ಮೇಲೆ ಕಣ್ಣಿಟ್ಟಿಲ್ಲ. ಹರ್ಷ ಮೇಲೆ ನಾಲ್ಕು ವರ್ಷಗಳಿಂದ ಕಣ್ಣಿಟ್ಟಿದ್ದರೂ ಘಟನೆ ತಡೆಯುವಲ್ಲಿ ವಿಫಲವಾಗಿದೆ. ಈ ವಿಷಯದಲ್ಲಿ ಸರ್ಕಾರವು ಫೇಲ್ ಆಗಿದೆ. ಹಿಂದೂ ಯುವಕನನ್ನು ಪ್ಲಾನ್ ಮಾಡಿ ಹೊಡೆದಿದ್ದಾರೆ. ಇಸ್ಲಾಮಿ(Islamic) ಶಕ್ತಿಗಳು ಬಾಲ ಬಿಚ್ಚಿದರೆ ಇನ್ನು ನಾವು ಸಹನೆಯಿಂದ ಇರಲು ಸಾಧ್ಯವಿಲ್ಲ. ಘಟನೆಯಲ್ಲಿ ಹೊಡೆದಿರುವುದನ್ನ ನೋಡಿದರೆ ಒಂದು ತರಬೇತಿ ಹೊಂದಿರುವ ಗುಂಪು ಷಡ್ಯಂತ್ರ ಇದೆ. ಇದರ ಹಿಂದೆ ಸಂಘಟನೆಯೇ ಇದೆ. ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳನ್ನ ಬ್ಯಾನ್ ಮಾಡಲೇಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿ ಸರ್ಕಾರ(BJP Government) ವಿರುದ್ಧ ವಾಗ್ದಾಳಿ ನಡೆಸಿದ ಪ್ರಮೋದ್ ಮುತಾಲಿಕ್ ಅವರು, ಗೋಹತ್ಯೆ ನಿಷೇಧ ಕಾನೂನು ತಂದ್ರಿ, ಆದ್ರೆ ಗೋ ಕಳ್ಳತನ, ಖಾಸಾಯಿಖಾನೆ, ಗೋಮಾಂಸ ರಪ್ತು ಯಾವುದೂ ನಿಂತಿಲ್ಲ. ಆಗದ್ರೆ ಇದು ಕಣ್ಣೊರೆಸುವ ತಂತ್ರವೆ? ಮತ್ತೆ ನಾವೇ ಹೋರಾಟ ಮಾಡಬೇಕು. ಹಾಗಿದ್ದರೆ ನಿಮ್ಮ ಆಡಳಿತದಲ್ಲಿ ಕೂರಿಸಿದ್ದು ಯಾಕೆ? ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಬೇಡವೆ. ಹಿಂದೂ ಪರ ಕೆಲಸ ಮಾಡಿದ್ದಕ್ಕೆ ನಮ್ಮ ಮೇಲೆ ಶೀಟರ್ ಹಾಕಿದ್ದಾರೆ. ಕೇಸು ಹಾಕಿದ್ದಾರೆ. ಇವೆಲ್ಲವನ್ನು ತೆಗೆಯುವುದು ಬೇಡವೆ? ಕಾಂಗ್ರೆಸ್ ಮಾಡಿದ ನೀಚ ಕೆಲಸವನ್ನ ತೆಗೆಯಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಕಾಂಗ್ರೆಸ್‌ನವರು(Congress) ಮುಸ್ಲಿಂ(Muslim) ವೋಟು ಎಂದ್ರೆ ಜೊಲ್ಲು ಸುರಿಸಿಕೊಂಡು ಹೋಗುವಂತವರು. 1983ರಲ್ಲಿ ಇಂದಿರಾ ಗಾಂಧಿಯವರೇ ಸಮವಸ್ತ್ರ ತಂದದ್ದು. ಹಿಜಾಬ್(Hijab) ಪರವಾಗಿ ನಿಂತು ಒಂದು ವ್ಯವಸ್ಥೆಯನ್ನ ಕುಲಗೆಡಿಸುತ್ತಿದ್ದಾರೆ. ವೋಟ್ ಬ್ಯಾಂಕ್‌ಗೋಸ್ಕರ ಶಿಸ್ತು ಸಮಾನತೆಯನ್ನ ಕಾಂಗ್ರೆಸ್ ಹಾಳು ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಕುಂಕುಮ, ಬಳೆ ವಿಷಯಕ್ಕೆ ಬಂದ್ರೆ ನಾಲಿಗೆ ಸೀಳ್ತೇವೆ: ಮುತಾಲಿಕ್ ಖಡಕ್ ಎಚ್ಚರಿಕೆ
ಬಾಗಲಕೋಟೆ: ಹಿಜಾಬ್(Hijab) ವಿಷಯದ ಜೊತೆಗೆ ಕುಂಕುಮ, ಬಳೆ, ಗಣಪತಿ ಪೂಜೆ, ಸರಸ್ವತಿ ಪೂಜೆ ಬಗ್ಗೆ ಯಾರಾದರೂ ಮಾತನಾಡಿದರೆ ನಾಲಿಗೆ ಸೀಳಬೇಕಾದಿತು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್(Pramod Mutalik) ವಿವಾದಾತ್ಮಕ ಹೇಳಿಕೆ ನೀಡಿದ್ದರು.
Gadag: ಸಿದ್ದರಾಮಯ್ಯ ಮುಸ್ಲಿಮರಿಗೆ ಮಾತ್ರ ಪ್ರತಿಪಕ್ಷ ನಾಯಕರಲ್ಲ: ಪ್ರಮೋದ್ ಮುತಾಲಿಕ್
ಫೆ.19 ರಂದು ಬಾಗಲಕೋಟೆಯಲ್ಲಿ ಮಾತನಾಡಿದ್ದ ಅವರು, ನಮ್ಮ ಹತ್ತಾರು ದೇಶಗಳನ್ನು ನುಂಗಿ ನೀರು ಕುಡಿದಿರುವ ಇಸ್ಲಾಮಿಕ್(Islamic) ಇತಿಹಾಸ ಇದೀಗ ನಮ್ಮ ಸಂಪ್ರದಾಯದ ಭಾಗವಾಗಿರುವ ವಿಷಯಗಳ ಬಗ್ಗೆ ಮಾತನಾಡಿದರೆ ಹೇಗೆ ಸಹಿಸಲು ಸಾಧ್ಯ ಎಂದು ಪ್ರಶ್ನಿಸಿದ್ದರು.
ಆರ್‌ಎಸ್‌ಎಸ್(RSS) ಸಂಘಟನೆ ದೇಶ ಭಕ್ತಿಯ ಸಂಘಟನೆ ಅಂತಹ ಸಂಘಟನೆಯ ಬಗ್ಗೆ ಸಿದ್ದರಾಮಯ್ಯ(Siddaramaiah) ಅವರು ಮಾತನಾಡಬಾರದು. ಅವರು ಬೇಕಾದರೆ ಬಿಜೆಪಿ ಕುರಿತು ಟೀಕೆ ಮಾಡಲಿ ಆರ್‌ಎಸ್‌ಎಸ್ ಬಗ್ಗೆ ಟೀಕೆ ಬೇಡ ಎಂದು ಸಲಹೆ ನೀಡಿದ್ದರು.