Gadag: ಸಿದ್ದರಾಮಯ್ಯ ಮುಸ್ಲಿಮರಿಗೆ ಮಾತ್ರ ಪ್ರತಿಪಕ್ಷ ನಾಯಕರಲ್ಲ: ಪ್ರಮೋದ್‌ ಮುತಾಲಿಕ್‌

*  ಮೃತ ಯುವಕನ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದ ಸಿದ್ದರಾಮಯ್ಯ
*  ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತ​ಪ​ಡಿ​ಸಿ​ದ ಮುತಾಲಿಕ್‌
*  ಮನೆ ಮನೆಗೆ ಹೋಗಿ ಹಿಂದೂ​ಗ​ಳನ್ನು ಬೆದರಿಸುವ ಪ್ರಯತ್ನ ನಡೆಯು​ತ್ತಿದೆ 
 

Siddaramaiah Is Not  Only the Opposition Leader for Muslims Says Pramod Mutalik grg

ಗದಗ(ಜ.30):  ‘ಸಿದ್ದರಾಮಯ್ಯ... ನೀವು ವಿರೋಧ ಪಕ್ಷದ ನಾಯಕರಾಗಿರುವುದು ಕೇವಲ ಮುಸ್ಲಿಮರಿಗಲ್ಲ, ರಾಜ್ಯದ ಸಮಸ್ತ ಜನತೆಗೆ ಎಂಬು​ದನ್ನು ಅರಿ​ಯ​ಬೇಕು ಅಂತ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌(Pramod Mutalik) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನರಗುಂದ(Nargund) ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ನಾಲ್ವ​ರು ಆರೋಪಿಗಳನ್ನು ಭೇಟಿಯಾಗಲು ಗದಗ(Gadag) ನಗ​ರಕ್ಕೆ ಬಂದಿದ್ದ ಸಂದ​ರ್ಭ​ದಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ ಅವರು, ಜ. 24ರಂದು ನರ​ಗುಂದ ಪಟ್ಟ​ಣಕ್ಕೆ ಭೇಟಿ ನೀಡಿ ಮೃತ ಯುವ​ಕನ ಕುಟುಂಬ​ಕ್ಕೆ ಸಾಂತ್ವಾನ(Condolence) ಹೇಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ವಿರುದ್ಧ ಆಕ್ರೋಶ ವ್ಯಕ್ತ​ಪ​ಡಿ​ಸಿ​ದ್ದಾರೆ. 

Anti Conversion Bill: ಮತಾಂತರ ನಿಷೇಧ ಕಾಯ್ದೆ ವಿರೋಧಿಗಳು ಅಭಿವೃದ್ಧಿ ಕಂಟಕರು: ಮುತಾಲಿಕ್‌

ಈ ಹಿಂದೆ ಹಿಂದೂಗಳ(Hindu) ಮೇಲೆ ಹಲ್ಲೆಯಾದಾಗ(Attack) ಸಿದ್ದ​ರಾ​ಮಯ್ಯ ಎಷ್ಟು ಜನರ ಮನೆಗೆ ಭೇಟಿ ನೀಡಿದ್ದರು? ಅವರು ಈ ಹಿಂದೆ ನಡೆದ ಘಟನೆ ಬಗ್ಗೆಯೂ ಖಂಡಿಸಬೇಕಿತ್ತು. ಆದರೆ ಖಂಡಿ​ಸಿಲ್ಲ. ಕೇವಲ ಹಿಂದೂಗಳನ್ನು ಖಂಡಿಸುವ ಪ್ರಕ್ರಿಯೆಯನ್ನು ನಿಲ್ಲಿಸ​ಬೇಕು. ಈ ರೀತಿ ತಾರತಮ್ಯ ಮಾಡುವುದರಿಂದಲೇ ಕಾಂಗ್ರೆಸ್‌(Congress) ಮೂಲೆಗುಂಪಾಗಿದ್ದು, ಇಂದು ಕಸದ ತೊಟ್ಟಿಗೆ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಇರುವುದೇ ಮುಸ್ಲಿಮರಿಗಾಗಿ(Muslim) ಎಂಬಂತಾ​ಗಿ​ದ್ದು, ಇದನ್ನು ಕಾಂಗ್ರೆಸ್‌ನಲ್ಲಿರುವ ಹಿಂದೂಗಳು ಗಂಭೀರವಾಗಿ ಯೋಚಿಸಬೇಕು. 100 ಕೋಟಿ ಹಿಂದೂಗಳ ಕೊಲೆ ಮಾಡು​ತ್ತೇವೆ ಎಂದು ಓವೈಸಿ ಹೇಳುತ್ತಾನೆ. ಅವನು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನಲ್ಲಿರುವ ಹಿಂದೂಗಳನ್ನು ಬಿಟ್ಟು ಎಂದು ಹೇಳಿಲ್ಲ. ಕಾಂಗ್ರೆಸ್‌ನಲ್ಲಿದ್ದೀರಿ ಎಂದು ಹಿಂದೂಗಳನ್ನು ಬಿಡುವುದಿಲ್ಲ ಎಂದರು.

ನರಗುಂದ ಘಟನೆ ನಡೆ​ಯ​​ಬಾ​ರ​ದಿತ್ತು. ಆದರೆ ನಡೆದು ಹೋಗಿದೆ. ತಪ್ಪಿತಸ್ಥರ ಬಂಧನ ಆಗಿದೆ. ಆದರೆ ಇನ್ನೂ ಯಾರನ್ನಾದರೂ ಬಂಧನ(Arrest)  ಮಾಡಿದರೆ ನರಗುಂದ ಹೊತ್ತಿ ಉರಿಯಲಿದೆ. ಘಟ​ನೆ​ಯಿಂದ ನರಗುಂದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಮನೆ ಮನೆಗೆ ಹೋಗಿ ಹಿಂದೂ​ಗ​ಳನ್ನು ಬೆದರಿಸುವ ಪ್ರಯತ್ನ ನಡೆಯು​ತ್ತಿದೆ. ಹಿಂದೂ ದೇವತೆಗಳನ್ನು ಅವಮಾನ ಮಾಡಿದವರನ್ನು ಯಾಕೆ ಹದ್ದುಬಸ್ತಿನಲ್ಲಿ ಇಟ್ಟಿಲ್ಲ? ಲವ್‌ ಜಿಹಾದ್‌(Love Jihad) ಪ್ರಕರಣದಲ್ಲಿ ಯಾಕೆ ಬಂಧನ ಆಗಿಲ್ಲ? ಹಿಂದೂ ಕಾರ್ಯಕರ್ತರ ಬೆರಳು ತುಂಡು ಮಾಡಿದವರ ಮೇಲೆ ಯಾಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿ​ಸಿದ ಅವರು, ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ನೋಡಿ​ಕೊ​ಳ್ಳ​ಬೇಕು. ಗೋ ಹತ್ಯೆ ನಿಷೇಧವಿದ್ದರೂ ಗೋ ಕಳ್ಳತನವಾಗುತ್ತಿದೆ. ಕಸಾಯಿಖಾನೆಗಳು ಆರಂಭವಾಗಿವೆ. ಲವ್‌ ಜಿಹಾದ್‌ ಹೆಸರಲ್ಲಿ ಹಿಂದೂ ಹುಡುಗಿಯರನ್ನು ಚುಡಾಯಿಸಲಾಗುತ್ತಿದೆ. ಇಂಥ ಕಿಡಿಗೇಡಿಗಳನ್ನು ಸರ್ಕಾರ ಹದ್ದುಬಸ್ತಿನಲ್ಲಿ ಇಡಬೇಕು ಎಂದು ಆಗ್ರ​ಹಿ​ಸಿ​ದರು.

ಭೇಟಿ ಸಾಧ್ಯವಾಗಲಿಲ್ಲ

ನರಗುಂದ ಪಟ್ಟ​ಣ​ದಲ್ಲಿ ನಡೆದ ಕೊಲೆ(Murder Case) ಪ್ರಕರಣದಲ್ಲಿ ಬಂಧಿಯಾದ ನಾಲ್ವರು ಆರೋ​ಪಿ​ಗ​ಳ​ನ್ನು(Accused) ಭೇಟಿಯಾಗಲು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಗದು​ಗಿಗೆ ಭೇಟಿ ನೀಡಿ​ದ್ದ​ರು. ಆದರೆ, ಸ್ಥಳ ಮಹಜರು ಹಿನ್ನೆಲೆಯಲ್ಲಿ ಪೊಲೀ​ಸರು(Police), ಆರೋಪಿಗಳನ್ನು ಗದಗ ಜಿಲ್ಲಾ ಕೇಂದ್ರ ಕಾರಾಗೃಹದಿಂದ ನರಗುಂದ ಪಟ್ಟ​ಣಕ್ಕೆ ಕರೆದುಕೊಂಡು ಹೋಗಿದ್ದರು. ಹಾಗಾಗಿ ಭೇಟಿ ಸಾಧ್ಯವಾಗಲಿಲ್ಲ.

Religious Conversion: ಬಿಜೆಪಿ ಸರ್ಕಾರದಲ್ಲಿಯೇ ಗೋ ಕಳ್ಳತನ, ಮತಾಂತರ ಹೆಚ್ಚು: ಮುತಾಲಿಕ್‌

ಕೋವಿಡ್‌(Covid-19) ನಿಯಮದಡಿ ಕೆಲವು ಹಿಂದೂ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಕಾಂಗ್ರೆಸ್‌ ಪಾದಯಾತ್ರೆ(Congress Padayatra)  ನಡೆದಾಗ ಕೋವಿಡ್‌ ನಿಯಮ ಎಲ್ಲಿ ಹೋಗಿತ್ತು? ಕೋವಿಡ್‌ ನಿಯಮ ಹೆಸರಲ್ಲಿ ಹಿಂದೂ ಕಾರ್ಯಕರ್ತರ ಹಿಂಸೆ ನಡೆಯುತ್ತಿದೆ. ಕೂಡಲೇ ಕೋವಿಡ್‌ ಹೆಸರಲ್ಲಾದ ಎಫ್‌ಐಆರ್‌(FIR) ರದ್ದಾಗಬೇಕು ಅಂತ ಶ್ರೀ​ರಾಮ ಸೇನೆ ರಾಷ್ಟ್ರೀ​​ಯ ಅಧ್ಯ​ಕ್ಷ ಪ್ರಮೋದ್‌ ಮುತಾ​ಲಿಕ್‌ ತಿಳಿಸಿದ್ದಾರೆ. 

ಮುಸ್ಲಿಂ ಯುವಕನ ಕೊಲೆಗೆ ಪೊಲೀಸರ ವೈಫಲ್ಯವೇ ಕಾರಣ: ಸಿದ್ದರಾಮಯ್ಯ

ನರಗುಂದ: ಪೊಲೀಸರ(Police) ವೈಫಲ್ಯದಿಂದ ಮುಸ್ಲಿಂ ಯುವಕನ ಕೊಲೆ ನಡೆದಿದೆ. ಇದನ್ನು ವಿಧಾನಸಭೆ ಅಧಿವೇಶನದಲ್ಲಿ ಸಮಗ್ರ ಚರ್ಚೆಗೆ ಒತ್ತಾಯಿಸುವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದರು. 

ಜ.25 ರಂದು ಪಟ್ಟಣದಲ್ಲಿ ಇತ್ತೀಚೆಗೆ ಕೊಲೆಯಾದ ಮುಸ್ಲಿಂ ಯುವಕ ಸಮೀರ ಶಹಪೂರನ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರನ್ನು ಸಂತೈಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆಯಾದ ಯುವಕನ ಕುಟುಂಬಕ್ಕೆ ಹೆಚ್ಚಿನ ಪರಿಹಾರ(compensation) ನೀಡಲು ಅಧಿವೇಶನದಲ್ಲಿ(Assembly Session) ಆಗ್ರಹಿಸಲಾಗುವುದು. ಪ್ರಕರಣದ ಕುರಿತು ಗದಗ ಎಸ್ಪಿ ಯೊಂದಿಗೆ ಮಾತನಾಡಿದ್ದೇನೆ. ಇದಕ್ಕೆ ಪೊಲೀಸರ ವೈಫಲ್ಯವೇ ಆಗಿದೆ ಎಂದು ತಿಳಿಸಿದ್ದೇನೆ. ಇದರಲ್ಲಿ ಭಾಗಿಯಾದ ಎಲ್ಲರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಲು ಸರ್ಕಾರಕ್ಕೆ ಒತ್ತಾಯಿಸುವೆ. ಜತೆಗೆ ಯಾವುದಾದರೂ ತನಿಖಾ ಸಂಸ್ಥೆಯಿಂದ ಅಥವಾ ಸಿಬಿಐಗೆ ವಹಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಆಡಳಿತ ಪಕ್ಷ ಬಿಜೆಪಿ(BJP) ಬಜರಂಗದಳ, ಸಂಘ ಪರಿವಾರವನ್ನು ಪ್ರೋತ್ಸಾಹಿಸುತ್ತಿರುವುದರಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ಘಟನೆ ನಡೆಯಲು ಪ್ರಚೋದನೆ ನೀಡಿದವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. ಈ ರೀತಿ ಘಟನೆಗಳು ಮರುಕಳಿಸದಂತೆ ಪೊಲೀಸ್‌ ಇಲಾಖೆ(Police Department) ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದ್ದರು.
 

Latest Videos
Follow Us:
Download App:
  • android
  • ios