ಸಾ.ರಾ. ಮಹೇಶ್‌ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ್ದ ವಿಧಾನ ಪರಿಷತ್ತು ಸದಸ್ಯ ಎಚ್‌. ವಿಶ್ವನಾಥ್‌ ವಿಶ್ವನಾಥ್ ವಿರುದ್ಧ ಕರ್ನಾಟಕ ಪ್ರಜಾ ಪಾರ್ಟಿ ಅಧ್ಯಕ್ಷ ಶಿವಣ್ಣ ಕಿಡಿ ನಿಮ್ಮ ಪುತ್ರನ ವಿರುದ್ಧವೇ ಭೂ ಕಬಳಿಕೆ ಪ್ರಕರಣ ದಾಖಲಾಗಿದೆ ಎಂದು ತಿರುಗೇಟು 

ಮೈಸೂರು (ಜೂ.13):  ಶಾಸಕ ಸಾ.ರಾ. ಮಹೇಶ್‌ ವಿರುದ್ಧ ಭೂ ಕಬಳಿಕೆ ಆರೋಪ ಮಾಡುತ್ತಿರುವ ವಿಧಾನ ಪರಿಷತ್ತು ಸದಸ್ಯ ಎಚ್‌. ವಿಶ್ವನಾಥ್‌ ವಿರುದ್ಧ ಕರ್ನಾಟಕ ಪ್ರಜಾ ಪಾರ್ಟಿ ಅಧ್ಯಕ್ಷ ಶಿವಣ್ಣ ಕಿಡಿಕಾರಿದ್ದು, ನಿಮ್ಮ ಪುತ್ರನ ವಿರುದ್ಧವೇ ಭೂ ಕಬಳಿಕೆ ಪ್ರಕರಣ ದಾಖಲಾಗಿದೆ ಎಂದು ತಿರುಗೇಟು ನೀಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ (ಎಚ್‌. ವಿಶ್ವನಾಥ್‌) ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಆದರೆ, ನೀವು ಬೇರೆಯವರ ತಟ್ಟೆಯಲ್ಲಿ ನೊಣ ಹುಡುಕುತಿದ್ದಿರಾ? ಎಂದು ವಾಗ್ದಾಳಿ ನಡೆಸಿದರು.

ಪ್ರಾದೇಶಿಕ ಆಯುಕ್ತರು - ಸಾ.ರಾ.ನಡುವೆ ಒಳ ಒಪ್ಪಂದ : ಸ್ಫೋಟಕ ಹೇಳಿಕೆ .

ಎಚ್‌. ವಿಶ್ವನಾಥ್‌ ಅವರು ಸಾ.ರಾ. ಮಹೇಶ್‌ ಬಗ್ಗೆ ಆರೋಪ ಮಾಡುವುದಕ್ಕೂ ಮುಂಚೆ ದಾಖಲೆಗಳನ್ನ ಇಟ್ಟುಕೊಳ್ಳಬೇಕು ಎಂದರು.

ಎಚ್‌. ವಿಶ್ವನಾಥ್‌ ಅವರ ಪುತ್ರ ಅಮಿತ್‌ ದೇವರಹಟ್ಟಿಬೇರೆಯವರ ಭೂ ಕಬಳಿಕೆಗೆ ಪ್ರಯತ್ನ ಮಾಡಿದ್ದು, ಈ ಸಂಬಂಧ ಈಗಾಗಲೇ ಎಫ್‌ಐಆರ್‌ ದಾಖಲಾಗಿದೆ. ಹೀಗೆ ತಮ್ಮಲ್ಲೇ ಹುಳುಕು ಇಟ್ಟುಕೊಂಡು ಬೇರೆಯವರ ಮೇಲೆ ಆಪಾದನೆ ಮಾಡಬಾರದು ಎಂದು ಅವರು ಕಿಡಿಕಾರಿದರು.