ಮೈಸೂರಿನಲ್ಲಿ ಐಎಎಸ್ ಅಧಿಕಾರಿ ವೈಮನಸ್ಯಕ್ಕೆ ರಾಜಕಾರಣಿಗಳೇ ಕಾರಣ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಬಿಜೆಪಿ ಮುಖಂಡ ಕೊರೋನಾ ಓಡಿಸಿ ಎಂದರೆ ಇಬ್ಬರು ಉತ್ತಮ ಐಎಎಸ್ ಅಧಿಕಾರಿಗಳನ್ನು ಓಡಿಸಿದರು

ಮೈಸೂರು (ಜೂ.11):  ಡಿಸಿ ಚಪರಾಸಿ ಅಲ್ಲ, ಡಿಸಿ ಬಗ್ಗೆ ಯಾವ ರೀತಿ ಮಾತನಾಡುತ್ತಿದ್ದೇವೆ. ಕೊರೋನಾ ಓಡಿಸಿ ಅಂತಾ ಸಿಎಂ, ಪಿಎಂ ಕರೆ ನೀಡಿದ್ದರು. ಇವರೆಲ್ಲಾ ಸೇರಿಕೊಂಡು ಐಎಎಸ್‌ ಅಧಿಕಾರಿಗಳನ್ನು ಓಡಿಸಿದ್ದಾರೆ. ಶಿಲ್ಪಾ ನಾಗ್‌ ಹೆಗಲ ಮೇಲೆ ಬಂದೂಕು ಇಟ್ಟು ರೋಹಿಣಿ ಸಿಂಧೂರಿಗೆ ಶೂಟ್‌ ಮಾಡಿದ್ದಾರೆ. ಹಾಸನದಿಂದ ಮೈಸೂರಿಗೆ ಬಂದು ಪ್ರೆಸ್‌ಮೀಟ್‌ ಮಾಡುತ್ತಾರೆ. ಏನಾಗಿದೆ ಮೈಸೂರಿಗೆ? ಎಂದು ಬಿಜೆಪಿ ಮುಖಂಡ ಎಚ್ ವಿಶ್ವನಾಥ್ ಪ್ರಶ್ನಿಸಿದರು.

ಮೈಸೂರಿನಲ್ಲಿ ಗುರುವಾರ ಮಾತನಾಡಿದ ವಿಶ್ವನಾಥ್ ರಾಜಕಾಲುವೆ ಮೇಲೆ ಕಲ್ಯಾಣ ಮಂಟಪ ನಿರ್ಮಾಣ ಆಗಿದೆ. ಒಂದು ಗುಂಟೆ ಅಲ್ಲ ಸಾವಿರಾರು ಎಕರೆ ಹೋಗಿದೆ. ಎಲ್ಲಾ ಜನಪ್ರತಿನಿಧಿಗಳು ಒಟ್ಟಾಗಿ ಸೇರಿ ಕೊರೋನಾ ಓಡಿಸುವ ಬದಲು ಅಧಿಕಾರಿಗಳನ್ನು ಓಡಿಸಿದರು. ರೋಹಿಣಿ ಸಿಂಧೂರಿ, ಶಿಲ್ಪಾ ನಾಗ್‌ ಒಳ್ಳೆಯ ಅಧಿಕಾರಿಗಳು. ಇಬ್ಬರು ಐಎಎಸ್‌ ಅಧಿಕಾರಿಗಳನ್ನು ಹೊರ ಹಾಕಿದ್ದು ರಾಜಕಾರಣಿಗಳ ಸ್ವಾರ್ಥ ಎಂದು ಅವರು ತಿಳಿಸಿದರು.

ಭೂಹಗರಣ ತನಿಖೆಗೆ ಸಿಂಧೂರಿ ನೇಮಿಸಿ: ವಿಶ್ವನಾಥ್‌ ...

ಈಗ ರಿಯಲ್‌ ಎಸ್ಟೇಟ್‌ ಇಂಡಸ್ಟ್ರಿಯಾಗಿದೆ. ಸಾ.ರಾ ಮಹೇಶ್‌ ಯಾವ ಇಂಡಸ್ಟ್ರಿಯಲಿಸ್ವ್‌? ಎಂಡಿಎ ಅಧ್ಯಕ್ಷ ಯಾವ ಇಂಡಸ್ಟ್ರಿ ಮಾಡಿದ್ದಾರೆ?ಎಷ್ಟುಜನಕ್ಕೆ ಉದ್ಯೋಗ ನೀಡಿದ್ದಾರೆ? ಶಿಲ್ಪಾ ನಾಗ್‌ ಇಲ್ಲಿ ಬಲಿಪಶುವಾಗಿದ್ದಾರೆ. ತಮ್ಮ ಉದ್ದೇಶದ ಬಗ್ಗೆ ಶಿಲ್ಪಾ ನಾಗ್‌ ಹೇಳಿದ್ದಾರೆ. ನಿಮ್ಮ ಕಮಿಷನ್‌ ಏನು? ರೋಹಿಣಿ ಸಿಂಧೂರಿಯವರ ವರ್ಗಾವಣೆ ನಿಮ್ಮ ಕಮಿಷನ್‌ ಎಂದು ಎಚ್‌. ವಿಶ್ವನಾಥ್‌ ಪ್ರಶ್ನಿಸಿದರು.