Mysuru : ತಮ್ಮಡಹಳ್ಳಿಯಲ್ಲಿ ವಿದ್ಯುತ್ ಪ್ರಸರಣ ಮಾರ್ಗ: ಸಾರ್ವಜನಿಕರಿಗೆ ಸೂಚನೆ
ತಾಲೂಕು ತಮ್ಮಡಹಳ್ಳಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾಗುತ್ತಿರುವ 220/66 ಕೆ.ವಿ ವಿದ್ಯುತ್ ವಿಸ್ತರಣಾ ಕೇಂದ್ರ ಸಂಪರ್ಕ ಕಲ್ಪಿಸಲು ನೂತನವಾಗಿ ನಿರ್ಮಿಸಿರುವ 220 ಕೆಎ ಪ್ರಸರಣ ಮಾರ್ಗವನ್ನು ಹಾಲಿ ಇರುವ 220 ಕೆಎ ಬಸ್ತಿಪುರ-ಕುಶಾಲನಗರ ಮಾರ್ಗದಿಂದ ಸುಮಾರು 0.243ಕಿ.ಮೀ ಲಿಲೋ ಮಾರ್ಗ ಮಾಡಲಾಗುತ್ತಿರುತ್ತದೆ ಮತ್ತು ಉದ್ದೇಶಿತ 220/ಕೆಎ ಸ್ವೀಕರಣಾ ಕೇಂದ್ರಕ್ಕೆ 6 ಸಂಖ್ಯೆಯ 66 ಕೆ.ಎ ವಿದ್ಯುತ್ ಪ್ರಸರಣ ಮಾರ್ಗಗಳನ್ನು ನಿರ್ಮಾಣ ಮಾಡುತ್ತಿದ್ದು ಸದರಿ ವಿದ್ಯುತ್ ಮಾರ್ಗಗಳನ್ನು ಮಾ. 19 ರಂದು ಅಥವಾ ನಂತರ ಯಾವುದೇ ದಿನಾಂಕದಂದು ಚೇತನಗೊಳಿಸಲಾಗುವುದು (ವಿದ್ಯುತ್ ಹರಿಸಲಾಗುವುದು).
ಹುಣಸೂರು: ತಾಲೂಕು ತಮ್ಮಡಹಳ್ಳಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾಗುತ್ತಿರುವ 220/66 ಕೆ.ವಿ ವಿದ್ಯುತ್ ವಿಸ್ತರಣಾ ಕೇಂದ್ರ ಸಂಪರ್ಕ ಕಲ್ಪಿಸಲು ನೂತನವಾಗಿ ನಿರ್ಮಿಸಿರುವ 220 ಕೆಎ ಪ್ರಸರಣ ಮಾರ್ಗವನ್ನು ಹಾಲಿ ಇರುವ 220 ಕೆಎ ಬಸ್ತಿಪುರ-ಕುಶಾಲನಗರ ಮಾರ್ಗದಿಂದ ಸುಮಾರು 0.243ಕಿ.ಮೀ ಲಿಲೋ ಮಾರ್ಗ ಮಾಡಲಾಗುತ್ತಿರುತ್ತದೆ ಮತ್ತು ಉದ್ದೇಶಿತ 220/ಕೆಎ ಸ್ವೀಕರಣಾ ಕೇಂದ್ರಕ್ಕೆ 6 ಸಂಖ್ಯೆಯ 66 ಕೆ.ಎ ವಿದ್ಯುತ್ ಪ್ರಸರಣ ಮಾರ್ಗಗಳನ್ನು ನಿರ್ಮಾಣ ಮಾಡುತ್ತಿದ್ದು ಸದರಿ ವಿದ್ಯುತ್ ಮಾರ್ಗಗಳನ್ನು ಮಾ. 19 ರಂದು ಅಥವಾ ನಂತರ ಯಾವುದೇ ದಿನಾಂಕದಂದು ಚೇತನಗೊಳಿಸಲಾಗುವುದು (ವಿದ್ಯುತ್ ಹರಿಸಲಾಗುವುದು).
1 ಸಂಖ್ಯೆಯ 220ಕೆ.ಎ ಎದ್ಯುತ್ ಪ್ರಸರಣ ಮಾರ್ಗ ಮತ್ತು 6 ಸಂಖ್ಯೆ 66 ಕೆ.ಎ ವಿದ್ಯುತ್ ಪ್ರಸರಣ ಮಾರ್ಗಗಳು ಈ ಕೆಳಕಂಡ ಗ್ರಾಮಗಳ ಎಲ್ಲೆಯಲ್ಲಿ ಹಾದು ಹೋಗಲಿದೆ ಜಿಲ್ಲೆಯ ಹುಣಸೂರು ತಾಲೂಕಿನ ಬ್ಯಾಡರಹಳ್ಳಿ, ವಡ್ಡರಗುಡಿ, ರಾಮೇನಹಳ್ಳಿ, ಅಡಗನಹಳ್ಳಿ, ಆಸ್ಪತ್ರೆಕಾವಲ್, ನಾಗನಹಳ್ಳಿ, ನಲ್ಲೂರುನಾಲ, ತಮ್ಮಡಹಳ್ಳಿ, ಉದ್ದೂರು ನಾಲ, ಉಮ್ಮತ್ತೂರು, ಮಾದಾಪುರ, ಕೆರೆಯೂರು, ಚಿಕ್ಕಾಡಿಗನಹಳ್ಳಿ, ಹಂಚ್ಯಾ, ಹೊನ್ನೇನಹಳ್ಳಿ, ಜಾಬಗೆರೆ, ಮನುಗನಹಳ್ಳಿ, ಮೊದ್ದೂರು (ಸಣ್ಣೆಹಳ್ಳಿ ಕಾವಲ್), ಮೈಲಂಬೂರು, ತಿಪ್ಪಲಾಪುರ, ಗೋವಿಂದಹಳ್ಳಿ ನಾಲ, ಕಟ್ಟೆಮಳವಾಡಿ, ನಿಲುಲಾಗಿಲು ಕಾವಲ್, ವಾರಾಂಚಿ, ಗಾವಡಗೆರೆ, ಮತ್ತು ಎಚ್.ಡಿ. ಕೋಟೆ ತಾಲೂಕಿನ ಬೆಳತೂರು, ಬಿಳಿಗೆರೆ, ಮಂಚಭಾಯನಹಳ್ಳಿ, ಮುಸ್ಕರೆ, ಸವ್ವ ಪಡುಕೋಟೆ, ಪಡುಕೋಟೆ ಕಾವಲ್ ಮತ್ತು ಎಚ್.ಡಿ. ಕೋಟೆ ಗ್ರಾಮಗಳ ಎಲ್ಲೆಯಲ್ಲಿ ಹಾದು ಹೋಗಲಿದೆ.
ಆದ್ದರಿಂದ ಸಾರ್ವಜನಿಕರು ಗೋಪುರಗಳಿಗೆ ದನಕರುಗಳನ್ನು ಕಟ್ಟುವುದಾಗಲೀ, ಲೋಹದ ಪಟ್ಟಿಯನ್ನು ತೆಗೆಯುವುದಾಗಲೀ, ಗೋಪುರಗಳನ್ನು ಹತ್ತುವುದಾಗಲಿ ತಂತಿಗಳನ್ನು ಮುಟ್ಟುವುದಾಗಲಿ, ಗೋಪುರಗಳ ಕೆಳಗಡೆ ಮರಗಿಡಗಳನ್ನು ನೆಡುವುದಾಗಲೀ, ಗೋಪುರಗಳಿಗೆ ಬಳ್ಳಿ ಮತ್ತು ಹಗ್ಗ ಮುಂತಾದುವುಗಳನ್ನು ಎಸೆಯುವುದಾಗಲೀ, ಗಾಳಿಪಟವನ್ನು ಗೋಪುರದ ಹತ್ತಿರ ಹಾರಿಸುವುದಾಗಲೀ ಮಾಡುವುದು ತುಂಬಾ ಅಪಾಯಕಾರಿ ಹಾಗೂ ಪ್ರಾಣ ಹಾನಿಯಾಗುತ್ತದೆಂದು ಈ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ.
ಈ ಸೂಚನೆ ಉಲ್ಲಂಘಿಸಿದಲ್ಲಿ ಉಂಟಾಗುವ ಯಾವುದೇ ರೀತಿಯ ಅಪಘಾತ ಅಥವಾ ಪ್ರಾಣ ಹಾನಿಗೆ ಕೆಪಿಟಿಸಿಎಲ್ ಜವಬ್ದಾರರಲ್ಲ ಎಂದು ಬೃಹತ್ ಕಾಮಗಾರಿ ವಿಭಾಗದ ಇಇ ತಿಳಿಸಿದ್ದಾರೆ.
ವೇತನ ಹೆಚ್ಚಳ
ಬೆಂಗಳೂರು (ಮಾ.15): ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮತ (ಕೆಪಿಟಿಸಿಎಲ್) ಹಾಗೂ ಎಲ್ಲ ಎಸ್ಕಾಂ ನೌಕರರು, ಶೇ.20 ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಾಳೆಯಿಂದ ಕೆಲಸವನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದರು. ಆದರೆ, ಹೋರಾಟಕ್ಕೂ ಮೊದಲೇ ಸರ್ಕಾರ ಶೇ.20 ವೇತನವನ್ನು ಹೆಚ್ಚಳ ಮಾಡಿ ಆದೇಶವನ್ನು ಹೊರಡಿಸಿದೆ.
ರಾಜ್ಯದಲ್ಲಿ ಈಗಾಗಲೇ ಸುಮಾರು 10 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಸರ್ಕಾರಿ ನೌಕರರು ತಮ್ಮ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಮುಂದಾಗಿದ್ದರು. ಕೆಲಸ ಸ್ಥಗಿತಗೊಳಿಸಿದಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಆಗುವುದನ್ನು ಮನಗಂಡಿದ್ದ ಸರ್ಕಾರ ಎಲ್ಲ ನೌಕರರಿಗೆ 7ನೇ ವೇತನ ಆಯೋಗ ಜಾರಿಯೊಂದಿಗೆ ಶೇ.17 ವೇತನವನ್ನು ಹೆಚ್ಚಳ ಮಾಡಿತ್ತು. ಈ ಬಗ್ಗೆ ವೇತನ ಪರಿಷ್ಕರಣೆ ಮಾಡಿ ಜಾರಿ ಮಾಡುವುದಾಗಿ ಆದೇಶವನ್ನೂ ಹೊರಡಿಸಿತ್ತು. ಆದರೆ, ಈಗ ಅದೇ ಮಾದರಿಯಲ್ಲಿ ಕೆಪಿಟಿಸಿಎಲ್ ನೌಕರರು ಕೂಡ ಶೇ.20 ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮುಷ್ಕರಕ್ಕೆ ಮುಂದಾಗಿದ್ದರು.
ಯುಗಾದಿಗೆ KSRTC ಬಸ್ ಡೌಟ್,ಮಾರ್ಚ್ 21ರಿಂದ ಸಾರಿಗೆ ನೌಕರರ ಮುಷ್ಕರ
ಹೋರಾಟಕ್ಕೂ ಮುನ್ನವೇ ಮಣಿದ ಸರ್ಕಾರ: ಈಗ ನೌಕರರು ಮುಷ್ಕರ ಆರಂಭಿಸುವ ಮುನ್ನವೇ ಸರ್ಕಾರ ಬೇಡಿಕೆಯನ್ನು ಈಡೇರಿಸಿದ್ದು, ಶೇ.20 ವೇತನ ಪರಿಷ್ಕರಣೆ ಮಾಡಿ ನೀಡುವುದಾಗಿ ಆದೇಶವನ್ನು ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಹೋರಾಟ ಆರಂಭಕ್ಕೂ ಮುನ್ನವೇ ನೌಕರರಿಗೆ ಜಯ ಲಭಿಸಿದ್ದು, ರಾಜ್ಯದ್ಯಂತ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಮುಷ್ಕರವನ್ನು ನೌಕರರು ವಾಪಸ್ ಪಡೆದುಕೊಂಡಿದ್ದಾರೆ.
ಇನ್ನು ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಿಲ್ಲ: ಕೆಪಿಟಿಸಿಎಲ್‌ನ ಎಲ್ಲ ಸಿಬ್ಬಂದಿ ಮತ್ತು ನೌಕರರು ಅನಿರ್ಧಿಷ್ಠಾವಧಿ ಮುಷ್ಕರ ಮಾಡಲು ಮುಮದಾಗಿದ್ದರಿಂದ ರಾಜ್ಯದ್ಯಂತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಎಲ್ಲ ಸಾಧ್ಯತೆಗಳಿದ್ದವು. ಯಾವುದೇ ತಾಂತ್ಇಕ ತೊಂದರೆಗಳು ಕಂಡುಬಂದರೂ, ತಮ್ಮ ಬೇಡಿಕೆ ಈಡೇರುವವರೆಗೂ ತಾವು ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಸರ್ಕಾರಕ್ಕೆ ತಿಳಿಸಿದ್ದರು. ಆದರೆ, ಈಗ ವೇತನ ಪರಿಷ್ಕರಣೆಯಲ್ಲಿ ನಾಳೆಯಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಭೀತಿಯಿತ್ತು. ಆದರೆ, ಈಗ ಸರ್ಕಾರವೇ ಪರಿಷ್ಕೃತ ವೇತನ ಜಾರಿ ಮಾಡುವುದಾಗಿ ಒಪ್ಪಿಕೊಂಡಿದ್ದರಿಂದ ಮುಷ್ಕರ ಹಿಂಪಡೆಯಲಾಗಿದೆ. ಇದರಿಂದ ವಿದ್ಯುತ್ ಪೂರೈಕೆ ವ್ಯತ್ಯಯದ ಆತಂಕವೂ ದೂರವಾಗಿದೆ.