ಮೈಸೂರು(ಆ.16): ಕೆ.ಆರ್‌. ನಗರ ಪಟ್ಟಣದ ಪುರಸಭಾ ಬಯಲು ರಂಗಮಂದಿರದ ಆವರಣದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸದೇ ರಾಷ್ಟ್ರೀಯ ಹಬ್ಬದ ಬಗ್ಗೆ ತಮಗಿರುವ ನಿರ್ಲಕ್ಷ್ಯ ಪ್ರದರ್ಶಿಸಿದರು.

ಕಾರ್ಯಕ್ರಮದ ಆಹ್ವಾನಿತರಾಗಿದ್ದ ಸಂಸದೆ ಸುಮಲತಾ ಅಂಬರೀಷ್‌ , ಶಾಸಕ ಸಾ.ರಾ. ಮಹೇಶ್‌ ಸೇರಿದಂತೆ ಯಾವ ಚುನಾಯಿತ ಜನಪ್ರತಿನಿಧಿಗಳೂ ದಿನಾಚರಣೆಗೆ ಬಾರದಿದ್ದದು ವಿದ್ಯಾರ್ಥಿಗಳೂ ಸೇರಿದಂತೆ ಸಮಾರಂಭದಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಅಸಮಾಧಾನ ಉಂಟು ಮಾಡಿತು.

ಮೈಸೂರು: ನೆರೆಯಿಂದ ಆಸ್ತಿ ಹೋಯ್ತು, ಆದ್ರೆ ಜಾತಿ ಹೋಗಿಲ್ಲ

ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಇತರ ಸ್ಥಳೀಯ ಮುಖಂಡರನ್ನು ಹೊರತುಪಡಿಸಿ ಚುನಾಯಿತರು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವುದು ಪಟ್ಟಣಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಯಿತು.