Mysuru Palace : ದಿನವೂ ಕೇಳಲಿದೆ ಪೊಲೀಸ್ ಬ್ಯಾಂಡ್

  •  ಮೈಸೂರು ಅರಮನೆಯಲ್ಲಿ ಪೋಲಿಸ್‌  ವಾದ್ಯ 
  •  ಇನ್ನು ನಿತ್ಯ ಸಂಗೀತ ಕಾರ್ಯಕ್ರಮ
Police Band  Programme Starts in Mysuru Palace snr

ಮೈಸೂರು (ಜ.03):  ಮೈಸೂರು ಅರಮನೆ (Mysuru Palace ) ಆವರಣದಲ್ಲಿ ಇನ್ನು ನಿತ್ಯ ಪೊಲೀಸ್‌ ಬ್ಯಾಂಡ್‌ (Police band) ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಪ್ರವಾಸಿಗರನ್ನು ಸೆಳೆಯಲಿದೆ. ಒಂದು ದಿನ ಕರ್ನಾಟಕ ವಾದ್ಯ (Karnataka)  ಸಂಗೀತ ಕೇಳುವ ಅವಕಾಶ ಸಿಕ್ಕರೆ ಮತ್ತೊಂದು ಇಂಗ್ಲೀಷ್‌ ವಾದ್ಯ ಸಂಗೀತ ಕೇಳುವ ಅವಕಾಶ ಸಿಗಲಿದೆ. ಅಂತಹ ಅವಕಾಶವನ್ನು ಅರಮನೆ (Palace) ಆಡಳಿತ ಮಂಡಳಿಯು ಪೊಲೀಸ್‌ ಇಲಾಖೆಯ ಸಹಯೋಗದಲ್ಲಿ ಆರಂಭಿಸಿದ್ದು, ಪ್ರತಿ ದಿನ ಸಂಜೆ 5 ರಿಂದ 6 ಗಂಟೆಯವರೆಗೆ ಆಲಿಸಬಹುದಾಗಿದೆ.

ಭಾನುವಾರ ಅರಮನೆ ಆವರಣದಲ್ಲಿನ ಭವ್ಯ ವೇದಿಕೆಯಲ್ಲಿ ಆರಂಭಗೊಂಡ ಈ ಪೊಲೀಸ್‌ ಬ್ಯಾಂಡ್‌ ವಾದನಕ್ಕೆ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekar) ಬ್ಯಾಂಡ್‌ ಬಾರಿಸುವ ಮೂಲಕ ಚಾಲನೆ ನೀಡಿದರು.

ನಂತರ ಪೊಲೀಸ್‌ ಬ್ಯಾಂಡ್‌ (Police band) ವಾದನದಲ್ಲಿ ಕಲಾ ರಸಿಕರು, ಕರ್ನಾಟಕ (Karnataka)  ವಾದ್ಯವೃಂದಿಂದ ಮಹಾಗಣಪತಿ, ರಘುವಂಶ ಸುಧಾ, ಸದಾಮತಿಂ, ಶರವಣಭವ, ಚಾಮುಂಡೇಶ್ವರಿ ಭಜರೇ, ರಾಗ ರಾಗಿಣಿ ದೇವಿ ಹೀಗೆ ನಾನಾ ಗೀತೆಗಳನ್ನು ನುಡಿಸಿದರು.  ಇಂಗ್ಲೀಷ್‌ ವಾದ್ಯವೃಂದದಿಂದ ಸ್ಲಂ ಡಾಗ್‌ ಮಿಲೇನಿರ್ಯ ಚಿತ್ರದ ಜೈಹೋ ಗೀತೆ ಹೀಗೆ ಹಲವು ಗೀತೆಗಳನ್ನು ನುಡಿಸಿದರು.

ಶಾಸಕ ಎಲ್. ನಾಗೇಂದ್ರ, ಉಪ ಮೇಯರ್‌ ಅನ್ವರ್‌ ಬೇಗ್‌, ಎಂಡಿಎ ಅಧ್ಯಕ್ಷ ಎಚ್‌.ವಿ. ರಾಜೀವ್‌, ಕಾಡಾ ಅಧ್ಯಕ್ಷ ಎನ್‌. ಶಿವಲಿಂಗಯ್ಯ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್‌. ಮಹದೇವಸ್ವಾಮಿ, ಖಾದಿ ಗ್ರಾಮಾದ್ಯೋಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೃಷ್ಣಪ್ಪ ಗೌಡ, ಜಂಗಲ… ಲಾಡ್ಜಸ್‌ ಆ್ಯಂಡ್‌ ರೆಸಾರ್ಟ್‌ ಅಧ್ಯಕ್ಷ ಅಪ್ಪಣ್ಣ, ಮೈಲ್ಯಾಕ್ಸ್‌ ಅಧ್ಯಕ್ಷ ಎನ್‌. ವಿ. ಫಣೀಶ್‌, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ…, ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ಡಿಸಿಪಿ ಪ್ರದೀಪ್‌ ಗುಂಟಿ, ಗೀತಾ ಪ್ರಸನ್ನ, ಜಿಪಂ ಸಿಇಒ ಎ.ಎಂ. ಯೋಗೀಶ್‌, ಎಂಡಿಎ ಆಯುಕ್ತ ಡಾ.ಡಿ.ಬಿ. ನಟೇಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್. ಮಂಜುನಾಥಸ್ವಾಮಿ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್‌. ಸುಬ್ರಹ್ಮಣ್ಯ ಇದ್ದರು.

ಮೈಸೂರು ಅರಮನೆ ಪ್ರವೇಶ ಶುಲ್ಕ ಹೆಚ್ಚಳ  :  

 ವಿಶ್ವವಿಖ್ಯಾತ ಮೈಸೂರು ಅರಮನೆ (Mysuru palace) ಪ್ರವೇಶ ದರವನ್ನು (entrance fee) ಬರೋಬ್ಬರಿ ನಾಲ್ಕು ವರ್ಷದ ಬಳಿಕೆ ಹೆಚ್ಚಿಸಲಾಗಿದ್ದು, ಪರಿಷ್ಕೃತ ದರವನ್ನು ಶನಿವಾರದಿಂದಲೇ ಜಾರಿಗೊಳಿಸಲಾಗಿದೆ. ಈ ಹಿಂದೆ ವಯಸ್ಕರಿಗೆ 70 ರು. ಪ್ರವೇಶ ಶುಲ್ಕವಿತ್ತು. ಈಗ  100 ರು.ಗೆ ಹೆಚ್ಚಿಸಲಾಗಿದೆ. 

ಮಕ್ಕಳಿಗೆ  30 ರು. ರಿಂದ 50 ರು.ಗೆ ಶುಲ್ಕ ಹೆಚ್ಚಳ ಮಾಡಲಾಗಿದೆ. ಶಾಲೆಗಳಿಂದ ಶಿಕ್ಷಕರೊಂದಿಗೆ ಬರುವ ವಿದ್ಯಾರ್ಥಿಗಳಿಗೆ (Students) ತಲಾ 30 ರು. ಶುಲ್ಕ ನಿಗದಿಪಡಿಸಲಾಗಿದೆ. ಪ್ರಮುಖ ಪ್ರವಾಸಿ ತಾಣವಾಗಿರುವ ಮೈಸೂರು ಅರಮನೆಗೆ ಕೊರೋನಾ (Corona) ಲಾಕ್‌ಡೌನ್‌ ಭಾರಿ ನಷ್ಟವನ್ನುಂಟು ಮಾಡಿದೆ. 2020ರ ಜನವರಿವರೆಗೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಅರಮನೆಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಈಗ ಇಳಿಮುಖವಾಗಿದೆ. ಈ ಹಿಂದೆ ವಾರ್ಷಿಕ ಸುಮಾರು 15ರಿಂದ 18 ಕೋಟಿ ರು. ಆದಾಯ ಸಂಗ್ರಹವಾಗುತ್ತಿದ್ದ ಅರಮನೆಗೆ ಈಗ ವಾರ್ಷಿಕ 60 ಲಕ್ಷ ರು.ದಿಂದ 1 ಕೋಟಿ ರು. ಮಾತ್ರ ಸಂಗ್ರಹವಾಗುತ್ತಿದೆ.

"

ಮೈಸೂರು ಸದರಾ : ಅರಮನೆಗೆ ಬೆಳಕು - ಬಣ್ಣದ ಸಿಂಗಾರ ಆರಂಭ

ಇದರಿಂದ ಅರಮನೆಯ ನಿರ್ವಹಣೆ, ಸಿಬ್ಬಂದಿ ವೇತನದ ಹಿನ್ನೆಲೆಯಲ್ಲಿ ಅರಮನೆ ಆಡಳಿತ ಮಂಡಳಿಗೆ ಹೊರೆಯಾಗುತ್ತಿತ್ತು. ಹೊರೆ ತಗ್ಗಿಸುವ ನಿಟ್ಟಿನಲ್ಲಿ ಕಳೆದ 4 ವರ್ಷ ನಂತರ ಅರಮನೆಗೆ ಭೇಟಿ ನೀಡುವ ಪ್ರವಾಸಿಗರ(Tourists) ಪ್ರವೇಶ ಶುಲ್ಕ ಹೆಚ್ಚಿಸಲಾಗಿದೆ.ಅರಮನೆಗೆ ಹೊಸ ಪ್ರವೇಶ ಶುಲ್ಕ: ಸ್ವದೇಶಿ ಮತ್ತು ವಿದೇಶಿ ವಯಸ್ಕರಿಗೆ 100 ರು.

10 ರಿಂದ 18 ವರ್ಷದ ಮಕ್ಕಳಿಗೆ  50 ಶೈಕ್ಷಣಿಕ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ 30 ರು.ಗೆ ಏರಿಕೆ ಮಾಡಲಾಗಿದೆ.

Latest Videos
Follow Us:
Download App:
  • android
  • ios