Asianet Suvarna News Asianet Suvarna News

Bengaluru Crime: ಬಂಧಿಸಲು ಬಂದ ಪಿಎಸ್‌ಐಗೆ ಚಾಕು ಇರಿದು ದರೋಡೆಕೋರ ಪರಾರಿ

*  ವಿನೋದ್‌ ರಾಥೋಡ್‌ ದಾಳಿಗೊಳಗಾದ ಸಬ್‌ ಇನ್‌ಸ್ಪೆಕ್ಟರ್‌
*  ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ
*  ಈ ಬಗ್ಗೆ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲು 
 

Gangster Escape After Attack on Police While Arrest Him in Bengaluru grg
Author
Bengaluru, First Published Dec 31, 2021, 5:25 AM IST

ಬೆಂಗಳೂರು(ಡಿ.31): ದರೋಡೆ(Robbery) ಪ್ರಕರಣದಲ್ಲಿ ತನ್ನ ಬಂಧಿಸಲು ಬಂದ ಸಬ್‌ ಇನ್‌ಸ್ಪೆಕ್ಟರ್‌ವೊಬ್ಬರ(Sub-Inspector) ಬಲಗೈಗೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಹೆಬ್ಬಾಳ ಮೇಲ್ಸೇತುವೆ ಸಮೀಪ ಬುಧವಾರ ರಾತ್ರಿ ನಡೆದಿದೆ. ಯಶವಂತಪುರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ವಿನೋದ್‌ ರಾಥೋಡ್‌ ದಾಳಿಗೊಳಗಾಗಿದ್ದು(Attack), ಖಾಸಗಿ ಆಸ್ಪತ್ರೆಯಲ್ಲಿ ಪಿಎಸ್‌ಐ ಚಿಕಿತ್ಸೆ(Treatment) ಪಡೆದಿದ್ದಾರೆ. ಈ ಕೃತ್ಯ ಎಸಗಿ ಪರಾರಿಯಾಗಿರುವ ಆರೋಪಿ(Accused) ಪತ್ತೆಗೆ ವಿಶೇಷ ತಂಡ ರಚಿಸಲಾಗಿದ್ದು, ಆದಷ್ಟು ಶೀಘ್ರ ಪ್ರಕರಣ ಪತ್ತೆ ಹಚ್ಚುತ್ತೇವೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್‌ ಪಾಟೀಲ್‌ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಯಶವಂತಪುರ ಠಾಣಾ ವ್ಯಾಪ್ತಿಯ ಎಸ್‌ಬಿಎ ಕಾಲೋನಿಯಲ್ಲಿ ವೃದ್ಧೆ ಮನೆಗೆ ನುಗ್ಗಿ ಬೆದರಿಸಿ ಏಳು ಮಂದಿ ಕಿಡಿಗೇಡಿಗಳು ದರೋಡೆ ನಡೆಸಿದ್ದರು. ಈ ಬಗ್ಗೆ ತನಿಖೆ ನಡೆಸುತ್ತಿದ್ದ ಯಶವಂತಪುರ ಪೊಲೀಸರಿಗೆ, ಹೆಬ್ಬಾಳ-ಭೂಪಸಂದ್ರ ರಸ್ತೆಯ ಪಾಳು ಬಿದ್ದ ತೋಟವೊಂದರಲ್ಲಿ ಬುಧವಾರ ರಾತ್ರಿ ಆರೋಪಿಯೊಬ್ಬನ ಇರುವಿಕೆಗೆ ಬಗ್ಗೆ ಮಾಹಿತಿ ಸಿಕ್ಕಿತು. ತಕ್ಷಣವೇ ಆತನ ಬಂಧನಕ್ಕೆ ಪಿಎಸ್‌ಐ ವಿನೋದ್‌ ರಾಥೋಡ್‌ ಹಾಗೂ ಕಾನ್‌ಸ್ಟೇಬಲ್‌ ಸಾಬ್‌ ವಾಲಿ ತೆರಳಿದ್ದಾರೆ. ತನ್ನನ್ನು ಬಂಧಿಸಲು ಬಂದ ಪೊಲೀಸರ ವಿರುದ್ಧವೇ ತಿರುಗಿ ಬಿದ್ದ ಆರೋಪಿ, ಕಾನ್‌ಸ್ಟೇಬಲ್‌ನನ್ನು ಚೂರಾಗಿ ತಳ್ಳಿದ್ದಾನೆ. ಬಳಿಕ ಪಿಎಸ್‌ಐ ಬಲಗೈಗೆ ಚಾಕುವಿನಿಂದ ಇರಿದು ಆತ ಪರಾರಿಯಾಗಿದ್ದಾನೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Suvarna FIR: ವಿಜಯಪುರ,  ಹಗಲಿಗೆ ಐಪೋನ್ ಜಾರ್ಜರ್‌ ಕೇಳಿ ರಾತ್ರಿ ಮನೆ ದೋಚುತ್ತಾರೆ...!

ಆರು ಮನೆಗಳ ಸರಣಿಗಳ್ಳತನ; ಭಯದಲ್ಲಿ ಜನತೆ

ಸಿಂಧನೂರು:  ಎರಡು ದಿನದಲ್ಲಿ ಆರು ಮನೆಗಳ ಬೀಗ ಮುರಿದು ಸರಣಿ ಕಳ್ಳತನ(Serial Theft) ಮಾಡಿರುವು ಘಟನೆ ರಾಯಚೂರು(Raichur) ಜಿಲ್ಲೆಯ ಸಿಂಧನೂರು(Sindhanur) ನಗರದ ಜನತೆಯಲ್ಲಿ ಭಯದ ವಾತಾವರಣ ಮೂಡಿಸಿದೆ.

ಕಳೆದ ನಾಲ್ಕೈದು ತಿಂಗಳ ಹಿಂದಷ್ಟೇ ನಗರದ ಆದಿಶೇಷ, ಎಪಿಎಂಸಿ ಗಣೇಶ ಗುಡಿ ಸೇರಿದಂತೆ ವಿವಿಧ ದೇವಸ್ಥಾನಗಳ ಕಾಣಿಕೆ ಹುಂಡಿಗಳ ಕಳ್ಳತನ ಸರಣಿಯಾಗಿ ನಡೆದಿದ್ದವು. ಈಗ ಅದೇ ರೀತಿ ಪಟೇಲವಾಡಿ, ಉಪ್ಪಾರವಾಡಿ ಹಾಗೂ ಪ್ರಶಾಂತ ನಗರದಲ್ಲಿ ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಮಧ್ಯೆ ಆರು ಮನೆಗಳು ಕಳ್ಳತನ ಆಗಿರುವ ಘಟನೆ ನಡೆದಿರುವುದು ನಗರದ ನಿವಾಸಿಗಳನ್ನು ಆಶ್ಚರ್ಯಚಕಿತರನ್ನಾಗಿಸಿದೆ.

Gang of Thieves: ಕುಖ್ಯಾತ ರಾಮ್‌ಜೀನಗರ ಗ್ಯಾಂಗ್‌ನ 11 ಮಂದಿ ಬಂಧನ

ಪ್ರಶಾಂತ ನಗರದಲ್ಲಿ ಸುನೀತಾ ಲಕ್ಷ್ಮಿಕಾಂತರೆಡ್ಡಿ ಎಂಬುವರು ಪ್ರವಾಸಕ್ಕೆ ಹೋದದ್ದನ್ನು ಖಚಿತ ಪಡಿಸಿಕೊಂಡ ಕಳ್ಳರ ಗುಂಪು ಬುಧವಾರ ರಾತ್ರಿ ಮನೆಯಲ್ಲಿದ್ದ ಸುಮಾರು 19 ಲಕ್ಷ ಮೌಲ್ಯದ ಬಂಗಾರದ ಆಭರಣಗಳು(Gold) ಹಾಗೂ 50 ಸಾವಿರ ನಗದು(Money) ಹಣವನ್ನು ದೋಚಿಕೊಂಡು ಪರಾರಿಯಾಗಿದೆ. ಮನೆಯಮುಂದಿದ್ದ ಸಿಸಿಟಿವಿ ಕ್ಯಾಮರದಲ್ಲಿ(CC Camera) ಕಳ್ಳರು ಬಂದು ಕಳುವು ಮಾಡಿಕೊಂಡು ಹೋದ ದೃಶ್ಯದ ತುಣುಕುಗಳು ಸಾಮಾಜಿಕ ಜಾಲಾತಾಣದಲ್ಲಿ(Social Media) ವೈರಲ್‌ ಆಗಿವೆ.

ಮನೆಯಲ್ಲಿ ಯಾರು ಇಲ್ಲ ಸಮಯ ನೋಡಿಕೊಂಡು ಕಳ್ಳರು ಮಂಗಳವಾರ ಮಧ್ಯರಾತ್ರಿ 5 ಮನೆಗಳ ಬೀಗ ಮುರಿದು ಬಂಗಾರ ಮತ್ತು ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಪಟೇಲವಾಡಿಯ ಬ್ರಾಹ್ಮಣರ ಓಣಿಯಲ್ಲಿ ಶಂಕರ ಆಚಾರ್ಯ ಮನೆಯಲ್ಲಿ 1 ತೊಲೆ ಬಂಗಾರ ಹಾಗೂ ರು.10 ಸಾವಿರ ನಗದು, ಶರಣು ಮೂರ್ತಿ ಕುಲಕರ್ಣಿ ಮನೆಯಲ್ಲಿ 15 ತೊಲೆ ಬೆಳ್ಳಿ, 8 ಗ್ರಾಂ ಬಂಗಾರ ಹಾಗೂ ರು.3 ಸಾವಿರ ನಗದು, ಉಪ್ಪಾರವಾಡಿಯ ಹನುಮಂತಮ್ಮ ಮನೆಯಲ್ಲಿ 12 ತೊಲೆ ಬಂಗಾರ, ರು.15 ಸಾವಿರ ನಗದು, ಹನುಮಂತಪ್ಪ ನಿವಾಸದಲ್ಲಿ ಅರ್ಧ ತೊಲೆ ಬಂಗಾರ, ರು.7 ಸಾವಿರ ನಗದು ಹಾಗೂ ಪಟೇಲವಾಡಿ ವಾಜಪ್ಪ ಆಚಾರ್‌ ಅವರ ಮನೆಯ ಬಾಗಿಲು ಮುರಿದು ಕಳ್ಳರು ಪರಾರಿಯಾಗಿದ್ದಾರೆ ಎಂದು ಕಳ್ಳತನವಾದ ಮನೆಯವರೇ ಅಳಲು ತೋಡಿಕೊಂಡಿದ್ದಾರೆ.

ಪಟೇಲವಾಡಿ, ಬ್ರಾಹ್ಮಣರ ಓಣಿ ಮತ್ತು ಉಪ್ಪಾರವಾಡಿಗಳಲ್ಲಿ ಕಳ್ಳರ ಗುಂಪು ಬ್ಯಾಟರಿ, ಸುತ್ತಿಗೆ ಸೇರಿದಂತೆ ಮನೆಯ ಬೀಗ ಮುರಿಯುವ ಸಾಮಗ್ರಿಯನ್ನು ಹಿಡಿದುಕೊಂಡು ತಿರುಗಾಡುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
 

Follow Us:
Download App:
  • android
  • ios