ಇಸ್ರೋ ಲೇಔಟ್ ದೇವರೆಕೆರೆ ಪಾರ್ಕ್ ಸಮೀಪದ ಕೆರೆಯಲ್ಲಿ ವಿದೇಶಿ ತಳಿ| ಇದು ಇತರ ಜಲಚರಗಳಿಗೆ ಮಾರಕ| ದೇವರೆಕೆರೆಯಲ್ಲಿರುವ ಪ್ಲೆಕೋ ಮೀನುಗಳು ಒದ್ದಾಡುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್| ಹೆಚ್ಚಾಗಿ ದಕ್ಷಿಣ ಅಮೆರಿಕದಲ್ಲಿ ಕಂಡುಬರುವ ಪ್ಲೆಕೋ ಮೀನು|
ಬೆಂಗಳೂರು(ಫೆ.05): ನಗರದ ಇಸ್ರೋ ಲೇಔಟ್ ದೇವರೆಕೆರೆ ಪಾರ್ಕ್ ಸಮೀಪದ ಕೆರೆಯಲ್ಲಿ ಅನಾಮಧೇಯರು ವಿದೇಶಿ ತಳಿ ಹಾಗೂ ಜೀವ ವೈವಿಧ್ಯಕ್ಕೆ ಹಾನಿಕಾರಕ ಎನ್ನಲಾದ ಪ್ಲೆಕೋ ಮೀನನ್ನು ಬಿಟ್ಟಿರುವುದು ಪಾಲಿಕೆ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.
ದೇವರೆಕೆರೆ ಪಾರ್ಕ್ ಸಮೀಪದ ಕೆರೆಯನ್ನು ಪಾಲಿಕೆಯ ಕೆರೆ ವಿಭಾಗದ ಅಧಿಕಾರಿಗಳು ಪುನರುಜ್ಜೀವನ ಮಾಡುವ ಉದ್ದೇಶದಿಂದ ಹೂಳು ಎತ್ತುತ್ತಿದ್ದರು. ಈ ವೇಳೆ ಪ್ಲೆಕೋ ಮೀನು ಪತ್ತೆ ಆಗಿದ್ದು, ಸ್ಥಳೀಯರು ತಿಳುವಳಿಕೆ ಕೊರತೆಯಿಂದ ಈ ಮೀನುಗಳನ್ನು ರಕ್ಷಿಸಲು ಟ್ಯಾಂಕರ್ಗಳ ಮೂಲಕ ನೀರು ಬಿಟ್ಟು ಬದುಕಿಸುವ ಯತ್ನ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಪಾಲಿಕೆಯ ಅಧಿಕಾರಿಗಳು ಪ್ಲೆಕೋ ಮೀನುಗಳನ್ನು ತೆರವು ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
'ಇನ್ನೂ 6 ತಿಂಗಳವರೆಗೆ ಬಿಬಿಎಂಪಿ ಚುನಾವಣೆ ನಡೆಯೋದಿಲ್ಲ'
ಪ್ಲೆಕೋ ಮೀನು ಹೆಚ್ಚಾಗಿ ದಕ್ಷಿಣ ಅಮೆರಿಕದಲ್ಲಿ ಕಂಡುಬರುತ್ತವೆ. ಇದು ಸಹ ಕ್ಯಾಟ್‌ಫಿಶ್ ತಳಿ ಮಾದರಿಯಾಗಿದ್ದು, ಇದರಿಂದ ಉಳಿದ ಜಲಚರಗಳಿಗೆ ಹಾನಿಯಾಗುತ್ತದೆ. ಈ ಮೀನುಗಳಿಂದ ಸ್ಥಳೀಯ ಜೀವ ವೈವಿಧ್ಯ ಹಾಳಾಗುತ್ತವೆ. ಈ ಮೀನು ಉಳಿದ ಜಲಚರಗಳಿಗೆ ಹಾನಿಮಾಡಿ ಸಾಯಿಸುತ್ತವೆ. ಇಲ್ಲವೇ ತಿನ್ನುತ್ತವೆ. ಹೀಗಾಗಿ, ಈ ರೀತಿಯ ಮೀನುಗಳ ಸಾಗಾಣಿಕೆ ಹಾಗೂ ಸಾಕುವುದಕ್ಕೆ ಕಡಿವಾಣ ಹಾಕಬೇಕು. ಕಠಿಣ ಕಾನೂನು ರೂಪಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎನ್ನುತ್ತಾರೆ ಪರಿಸರವಾದಿ ಡಾ ಕ್ಷಿತಿಜ್ ಅರಸ್.
ಪರಿಸರ ತಜ್ಞ ವಿಜಯ್ ನಿಶಾಂತ್ ಅವರು, ಪ್ಲೆಕೋ ಮೀನುಗಳು ವಿದೇಶಿ ತಳಿಯಾಗಿದ್ದು, ಸ್ಥಳೀಯರ ತಿಳುವಳಿಕೆ ಕೊರತೆಯಿಂದ ಇವುಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಇದನ್ನು ಅಕ್ವೇರಿಯಂಗಳಲ್ಲಿ ಬಳಸುತ್ತಾರೆ. ಸ್ಥಳೀಯರು ಅಥವಾ ಬೇರೆ ಎಲ್ಲಿಂದಲೂ ಈ ಮೀನನ್ನು ಕೆರೆಗೆ ತಂದುಬಿಟ್ಟಿರುವ ಸಾಧ್ಯತೆ ಇದೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಸಾರ್ವಜನಿಕರ ಮಾಹಿತಿ ಕೊರತೆಯಿಂದ ಸಾಮಾಜಿಕ ಜಾಲತಾಣದಲ್ಲಿ ದೇವರೆಕೆರೆಯಲ್ಲಿರುವ ಪ್ಲೆಕೋ ಮೀನುಗಳು ಒದ್ದಾಡುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 5, 2021, 9:25 AM IST