ಕಾಫಿನಾಡಲ್ಲಿ ಗೋ ಕಳ್ಳತನದ ಆರೋಪದ ನಡುವೇ ಗೋವುಗಳ ಸಾವಿನ ಸರಣಿ ಹೆಚ್ಚಾಗ್ತಿದೆ. ವರ್ಷದಿಂದ ವರ್ಷಕ್ಕೆ ದ್ವಿಗುಣವಾಗ್ತಿರೋ ಸಾವಿನ ಹಿಂದಿನ ರಹಸ್ಯದ ಬೆನ್ನು ಹತ್ತಿದ ಇಲಾಖೆಗೆ ಸಿಕ್ಕಿದ್ದು ಶಾಕಿಂಗ್.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಫೆ.12): ಕಾಫಿನಾಡಲ್ಲಿ ಗೋ ಕಳ್ಳತನದ ಆರೋಪದ ನಡುವೇ ಗೋವುಗಳ ಸಾವಿನ ಸರಣಿ ಹೆಚ್ಚಾಗ್ತಿದೆ. ವರ್ಷದಿಂದ ವರ್ಷಕ್ಕೆ ದ್ವಿಗುಣವಾಗ್ತಿರೋ ಸಾವಿನ ಹಿಂದಿನ ರಹಸ್ಯದ ಬೆನ್ನು ಹತ್ತಿದ ಇಲಾಖೆಗೆ ಸಿಕ್ಕಿದ್ದು ಶಾಕಿಂಗ್. ಅದು ಆಹಾರ ಪದ್ದತಿಯಲ್ಲಿ ಪ್ಲಾಸ್ಟಿಕ್ ನಿಂದಲೇ ಅತೀ ಹೆಚ್ಚು ಜಾನುವಾರು ಮೃತಪಟ್ಟಿರುವ ಆತಂಕಕಾರಿ ಮಾಹಿತಿ ಹೊರಬಂದಿದೆ.
ಜಾನುವಾರಿಗೆ ಕಂಟಕವಾಗ್ತಿರೊ ಪ್ಲಾಸ್ಟಿಕ್: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಗೋವುಗಳ ಸಂಖ್ಯೆ ಏನೂ ಕಮ್ಮಿಯಿಲ್ಲ ಸಾಕಿದ ದನಗಳು.ಬಿಡಾಡಿ ದನಗಳು ಸೇರಿ ಮೂರು ಲಕ್ಷದ ಇಪ್ಪತ್ತೈದು ಸಾವಿರವಿದೆ.ಅದ್ರಲ್ಲಿ ಬಿಡಾಡಿ ದನಗಳನ್ನ ಗೋಕಳ್ಳರು ಕದ್ದೊಯುತ್ತಾರೆ ಅನ್ನೋ ಆರೋಪವಿದೆ.ಆ ಗೋಕಳ್ಳರ ಕೃತ್ಯಕ್ಕೆ ಬಲಿಯಾಗ್ತಿರೋ ಜೊತೆಯಲ್ಲಿ ಮತ್ತೊಂದು ಆತಂಕಕಾರಿ ಸಾವು ಗೋವುಗಳನ್ನ ಕಾಡುತ್ತಿದೆ ಅನ್ನೋ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ.
ಶರಣಾದ ನಕ್ಸಲರ ಬೇಡಿಕೆ ಈಡೇರಿಕೆಗೆ ವರದಿ ತಯಾರಿಗೆ ಮುಂದಾಗಿರುವ ಚಿಕ್ಕಮಗಳೂರು ಜಿಲ್ಲಾಡಳಿತ
ಸ್ವತಃ ಪಶುಸಂಗೋಪನೆ ಇಲಾಖೆಯೇ ಜಾನುವಾರಗಳ ಸಾವಿಗೆ ಪ್ಲಾಸ್ಟಿಕ್ ಸೇವನೆಯೇ ಕಾರಣ ಅನ್ನೋದನ್ನ ಒಪ್ಪಿಕೊಳ್ತಿದೆ. ಜನರು ದಿನನಿತ್ಯ ಬಳಸುವ ವಸ್ತುಗಳನ್ನು ಕಸದ ರಾಶಿಗೆ ಹಾಕುತ್ತಾರೆ. ಆ ಕಸದ ರಾಶಿಯಲ್ಲಿ ಅತೀ ಹೆಚ್ಚು ಪ್ಲಾಸ್ಟಿಕ್ ವಸ್ತುಗಳು ಇರುತ್ತವೆ. ಪ್ಲಾಸ್ಟಿಕ್ ಜೊತೆಗೆ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ಜಾನುವಾರಗಳ ಜೀವಕ್ಕೆ ಕಂಟಕವಾಗುತ್ತಿದೆ.
ವರ್ಷದಿಂದ ವರ್ಷಕ್ಕೆ ಸಾವಿನ ಪ್ರಮಾಣ ಹೆಚ್ಚಳ: ಇನ್ನೂ 2023 ರಲ್ಲಿ 480 ಸಾವನ್ನಪ್ಪಿದ್ರೆ 2024 ರಲ್ಲಿ 863 ಸಾವಾಗಿದೆ ಗೋವುಗಳು.ಈ ಸಾವಿನ ಲೆಕ್ಕವಿರೋದು ಆಹಾರ ಪದ್ದತಿಯಲ್ಲಿ ಅಗಿರೋ ಎಡವಟ್ಟು ಅಂತಿದ್ದಾರೆ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು.ಬಿಡಾಡಿ ದನಗಳು ಆಹಾರ ಸೇವನೆ ಸಮಯದಲ್ಲಿ ಪ್ಲಾಸ್ಟಿಕ್ ಕಂಟೆಂಟ್ ಇರೋದು ದೇಹದೊಳಗೆ ಹೋಗಿ ಹೊಟ್ಟೆ ಉಬ್ಬರದಿಂದ ಸಾವು ಸಂಭವಿಸುತ್ತಿದೆ.
ಚಿಕ್ಕಮಗಳೂರು ಜಿಲ್ಲೆ ನಕ್ಸಲ್ ಮುಕ್ತ: ಕೋಟೆಹೊಂಡ ರವೀಂದ್ರ ಜಿಲ್ಲಾಡಳಿತದೆದುರು ಶರಣಾಗತಿ
ಅತೀ ಹೆಚ್ಚು ಪ್ರವಾಸಿಗರು ಪ್ಲಾಸ್ಟಿಕ್ ಗಳನ್ನ ಎಲ್ಲಂದ್ರಲ್ಲಿ ಬಿಸಾಡ್ತಿರೋದ್ರಿಂದ ಗೋವುಗಳಿಗೆ ಮಾರಕವಾಗ್ತಿದೆ ಅನ್ನೋದು ಸಾವಿನ ಹಿಂದಿನ ಸತ್ಯ ಸರ್ವೆಯಿಂದ ಬಯಲಾಗಿದೆ. ಒಟ್ಟಾರೆ ಮಲೆನಾಡಲ್ಲಿ ಗೋವುಗಳಿಗೆ ದೇವರ ಸ್ಥಾನಮಾನ ನೀಡಿದ್ದಾರೆ.ಅದ್ರೆ ಜನ್ರ ನಿರ್ಲಕ್ಷ್ಯಕ್ಕೆ ಎಲ್ಲಂದ್ರಲ್ಲಿ ಪ್ಲಾಸ್ಟಿಕ್ ಎಸೆದು ಅವುಗಳನ್ನ ಸೇವಿಸಿ ಗೋವುಗಳ ಸಾವು ವರ್ಷದಿಂದ ವರ್ಷಕ್ಕೆ ದ್ವಿಗುಣವಾಗ್ತಿರೋದು ಅತಂಕವೇ ಸರಿ.ಈಗ ಪಶುಸಂಗೋಪನೆ ಇಲಾಖೆಯಿಂದ ಅರಿವು ಮೂಡಿಸಲು ಮುಂದಾಗಿದ್ದಾರೆ.
