ಪಶ್ಚಿಮ ಘಟ್ಟಗಳ ಸಾಲಿನಲ್ಲಿದ್ದ ಮೋಸ್ಟ್ ವಾಟೆಂಡ್ ಕೆಂಪು ಉಗ್ರರು ಶರಣಾಗಿದ್ದಾರೆ. ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಸ್ಥಬ್ದ ಅಂತಿರೋ ಜಿಲ್ಲಾಡಳಿತ ಈಗ ವರದಿ ತಯಾರಿಸೋಕೆ ಮುಂದಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಫೆ.04): ಪಶ್ಚಿಮ ಘಟ್ಟಗಳ ಸಾಲಿನಲ್ಲಿದ್ದ ಮೋಸ್ಟ್ ವಾಟೆಂಡ್ ಕೆಂಪು ಉಗ್ರರು ಶರಣಾಗಿದ್ದಾರೆ. ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಸ್ಥಬ್ದ ಅಂತಿರೋ ಜಿಲ್ಲಾಡಳಿತ ಈಗ ವರದಿ ತಯಾರಿಸೋಕೆ ಮುಂದಾಗಿದೆ. ಶರಣಾಗೋವಾಗ ನಕ್ಸಲರು ಇಟ್ಟಿದ್ದ ಬೇಡಿಕೆಯನ್ನೇ ಅಧರಿಸಿ ಪ್ರತಿ ಇಲಾಖಾವಾರು ಸಮಸ್ಯೆಗಳ ಪಟ್ಟಿಯನ್ನು ಸಿದ್ದಪಡಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಮಲೆನಾಡಿನಲ್ಲಿರುವ ಸಮಸ್ಯೆಗಳನ್ನು ಶರಣಾಗವ ವೇಳೆಯಲ್ಲಿ ನಕ್ಸಲರು ಜಿಲ್ಲಾಡಳಿತದ ಮುಂದೆ ಬೇಡಿಕೆಯನ್ನು ಇಟ್ಟಿದ್ದರು.
ನಕ್ಸಲ್ ಚಟುವಟಿಕೆಯಿಂದ ಮುಕ್ತ: ಪಶ್ಚಿಮ ಘಟ್ಟಗಳ ಸಾಲಿನಲ್ಲಿನಕ್ಸಲ್ ಮುಕ್ತ ನಕ್ಸಲ್ ಮುಕ್ತ ಹೀಗಂತಿರೋ ಸರ್ಕಾರ ಹಾಗೂ ಜಿಲ್ಲಾಡಳಿತ..ಹೌದು ಇದಕ್ಕೆ ಸಾಕ್ಷಿಯಂತೆ ಪೊಲೀಸರ ಮೋಸ್ಟ್ ವಾಟೆಂಟ್ ಲಿಸ್ಟ್ ನಲ್ಲಿದ್ದೋರು ಕೆಲವರು ಶರಣಾಗತಿಯಾದ್ರೆ ಮತ್ತೆ ಕೆಲವರು ಎನ್ ಕೌಂಟರ್, ಅರೆಸ್ಟ್ ಅಗಿದ್ದಾರೆ.ಇನ್ಯಾರು ಪಟ್ಟಿಯಲ್ಲಿಲ್ಲ ಅಂತಿದೆ ಜಿಲ್ಲಾಡಳಿತ..ಈಗಾಗಲೇ ಎನ್ ಕೌಂಟರ್ ಅರೆಸ್ಟ್ ಹೊರ ರಾಜ್ಯದಲ್ಲಿ ಶರಣಾಗತಿಯಾಗಿರೋರನ್ನ ಹೊರತುಪಡಿಸಿದ್ರೆ 22 ಮಂದಿ ಕರ್ನಾಟಕದಲ್ಲಿ ಶರಣಾಗಿದ್ದಾರೆ.ಚಿಕ್ಕಮಗಳೂರು 20, ಶಿವಮೊಗ್ಗ 1 ಹಾಗೂ ಉಡುಪಿಯಲ್ಲಿ ಕೊನೆಯ ಕೊಂಡಿ ತೊಂಬಟ್ಟು ಲಕ್ಷ್ಮೀ ಶರಣಾಗೋ ಮೂಲಕ ರಾಜ್ಯವೂ ನಕ್ಸಲ್ ಚಟುವಟಿಕೆಯಿಂದ ಮುಕ್ತವಾದಂತಾಗಿದೆ
ವರದಿ ತಯಾರಿಸಲು ಸೂಚನೆ: ಇನ್ನೂ ಕೆಂಪು ಉಗ್ರರ ಹೆಜ್ಜೆಯಂತೂ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಇಲ್ಲ.ಅದ್ರೆ ಶರಣಾಗೋ ಸಮಯದಲ್ಲಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.ಆವೆಲ್ಲವೂ ನಕ್ಸಲ್ ಪೀಡಿತ ಪ್ರದೇಶದ ಸಮಸ್ಯೆಗಳು. ಇದಲ್ಲದೆ ಮೂಲಭೂತ ಸೌಕರ್ಯಗಳಿಲ್ಲ ಅನ್ನೋ ಅರೋಪವನ್ನ ಅಲ್ಲಿನ ಜನರು ಮಾಡ್ತಾ ಇದ್ದಾರೆ..ಈಗ ಜಿಲ್ಲಾಡಳಿತ ಅಂದ್ರೆ ಡಿಸಿ ಎಸ್ಪಿ ಇಬ್ಬರು ಎಲ್ಲ ಇಲಾಖೆಗಳಿಗೊಂದು ಸೂಚನೆ ಹೊರಡಿಸಿದ್ದಾರೆ. ಪ್ರತಿಯೊಂದು ಇಲಾಖೆಯಿಂದಲೂ ಸರ್ವೆ ಅಗಬೇಕು..ಅಲ್ಲಿನ ಸಮಸ್ಯೆಗಳ ಬಗ್ಗೆ ಇಂಚಿಂಚೂ ಮಾಹಿತಿ ಬೇಕು..ಅದು ವರದಿ ರೂಪದಲ್ಲಿ ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ನಕ್ಸಲ್ ಮುಕ್ತ: ಕೋಟೆಹೊಂಡ ರವೀಂದ್ರ ಜಿಲ್ಲಾಡಳಿತದೆದುರು ಶರಣಾಗತಿ
ಕೆಲವೇ ವಾರಗಳ ಗಡುವು ನೀಡಿ ಅಧಿಕಾರಿಗಳಿಗೆ ಆದೇಶವನ್ನು ಜಿಲ್ಲಾಡಳಿತ ನೀಡಿದೆ. ಅಧಿಕಾರಿಗಳು ನೀಡಿದ ವರದಿ ಕೈಸೇರಿದ ಮೇಲೆ ಮತ್ತೊಂದು ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸೋಕೆ ಜಿಲ್ಲಾಡಳಿತ ಪ್ಲಾನ್ ಮಾಡಿದೆ .ಒಟ್ಟಾರೆ ಪಶ್ಚಿಮ ಘಟ್ಟಗಳ ಸಾಲಿನಎರಡು ದಶಕದ ಕೆಂಪು ಉಗ್ರರ ಹೆಜ್ಜೆಗೆ ಎಳ್ಳು ನೀರು ಬಿಟಾಯ್ತು.ನಕ್ಸಲ್ ಪೀಡಿತ ಹಣೆ ಪಟ್ಟಿಯಲ್ಲಿರೋ ಗ್ರಾಮಗಳ ಮೂಲಭೂತ ಸೌಕರ್ಯ ದತ್ತ ಈಗ ಜಿಲ್ಲಾಡಳಿತ ತಿಳಿಯೋಕೆ ಮುಂದಾಗಿದ್ದು ವರದಿ ತಯಾರಿಸಲು ಸೂಚನೆಯನ್ನು ನೀಡಿದೆ.ಈ ವರದಿಯಲ್ಲಿ ಬರೋ ಸಮಸ್ಯೆಯನ್ನ ಬಗೆಹರಿಸೋಕೆ ಮುಂದಾದ್ರೆ ಮುಂದೇ ಮತ್ತೆ ನಕ್ಸಲ್ ಅನ್ನೋದೇ ಹುಟ್ಟೋಕ್ಕು ಸಾಧ್ಯವಿಲ್ಲ ಅಂತಿದ್ದಾರೆ ಸ್ಥಳೀಯರು.
