ಕೋಲಾರ(ಜ.05): ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ನಗರದಲ್ಲಿ ಶನಿವಾರ ನಡೆದ ರಾರ‍ಯಲಿಯ ಸಂದರ್ಭದಲ್ಲಿ ಕ್ಲಾಕ್‌ ಟವರ್‌ ಬಳಿ ನೂರಾರು ಮಂದಿ ಜಮಾಯಿಸಿದ ಪೋಟೋ ತೆಗೆಯಲು ತೆರಳಿದ್ದ ಪತ್ರಿಕಾ ಛಾಯಾಗ್ರಾಹಕ ಸರ್ವಜ್ಞಮೂರ್ತಿ ಎಂಬುವರ ಮೇಲೆ ಗುಂಪೊಂದು ದಾಳಿ ನಡೆಸಿದ ಪ್ರಕರಣದ ತನಿಖೆ ನಡೆಸುವುದಾಗಿ ಕೇಂದ್ರವಲಯ ಐಜಿಪಿ ಶರತ್‌ಚಂದ್ರ ಹೇಳಿದ್ದಾರೆ.

ಘಟನೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಐಜಿಪಿ ಅವರು, ಸ್ಥಳದಲ್ಲಿರುವ ಸಿಸಿ ಕ್ಯಾಮರಾ ಗಮನಿಸಿ, ತನಿಖೆ ನಡೆಸಿ ಪತ್ರಿಕಾ ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.

ಕೋಲಾರದಲ್ಲಿ ಲಾಠಿ ಚಾರ್ಜ್: ಏನಂದ್ರು ಐಜಿಪಿ..?.

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ಬೆಂಬಲಿಸಿ ಕೋಲಾರದಲ್ಲಿ ನಡೆದ ಸಭೆಯಲ್ಲಿ ಪತ್ರಕತ್ರರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಕಾಯ್ದೆ ಬೆಂಬಲಿಸಿ ನಡೆದ ಮೆರವಣಿಗೆಯಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಈ ಸಂದರ್ಭ ಫೋಟೋ ಜರ್ನಲಿಸ್ಟ್ ಒಬ್ಬರು ಹಲ್ಲೆಗೊಳಗಿದ್ದಾರೆ.

ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತನಿಗೆ ಸಂಸದನ ಕಪಾಳಮೋಕ್ಷ