Asianet Suvarna News Asianet Suvarna News

ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತನಿಗೆ ಸಂಸದನ ಕಪಾಳಮೋಕ್ಷ

ಕೋಲಾರದಲ್ಲಿ ಪೌರತ್ವ ಕಾಯ್ದೆ ಬೆಂಬಲಿಸಿ ನಡೆದ ಸಭೆಯಲ್ಲಿ ಧಿಕ್ಕಾರ ಕೂಗಿದ ಕಾರ್ಯಕರ್ತನಿಗೆ ಸಂಸದ ಎಸ್‌. ಮುನಿಸ್ವಾಮಿ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ. ಕ್ಲಾಕ್ ಟವರ್‌ಗೆ ಕರೆದುಕೊಂಡು ಹೋಗಿಲ್ಲವೆಂದು ಧಿಕ್ಕಾರ ಕೂಗಿದ ಕಾರ್ಯಕರ್ತನಿಗೆ ಸಂಸದ ಕಪಾಳಮೋಕ್ಷ ಮಾಡಿದ್ಧಾರೆ.

MP S Muniswamy slaps bjp worker in kolar
Author
Bangalore, First Published Jan 4, 2020, 2:58 PM IST

ಕೋಲಾರ(ಜ.04): ಕೋಲಾರದಲ್ಲಿ ಪೌರತ್ವ ಕಾಯ್ದೆ ಬೆಂಬಲಿಸಿ ನಡೆದ ಸಭೆಯಲ್ಲಿ ಧಿಕ್ಕಾರ ಕೂಗಿದ ಕಾರ್ಯಕರ್ತನಿಗೆ ಸಂಸದ ಎಸ್‌. ಮುನಿಸ್ವಾಮಿ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ. ಕ್ಲಾಕ್ ಟವರ್‌ಗೆ ಕರೆದುಕೊಂಡು ಹೋಗಿಲ್ಲವೆಂದು ಧಿಕ್ಕಾರ ಕೂಗಿದ ಕಾರ್ಯಕರ್ತನಿಗೆ ಸಂಸದ ಕಪಾಳಮೋಕ್ಷ ಮಾಡಿದ್ಧಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಬೆಂಬಲಿಸಿ ಕೋಲಾರದಲ್ಲಿ ನಡೆದ ಸಭೆಯಲ್ಲಿ ಕ್ಲಾಕ್ ಟವರ್‌ಗೆ ಮೆರವಣಿಗೆ ಕರೆದುಕೊಂಡು ಹೋಗಿಲ್ಲವೆಂದು ಕಾರ್ಯಕರ್ತರು ದಿಕ್ಕಾರಗಳನ್ನ ಕೂಗಿದ್ದಾರೆ.  ಧಿಕ್ಕಾರ ಕೂಗಿದ ಕಾರ್ಯಕರ್ತನಿಗೆ ಸಂಸದರು ಕಪಾಳ ಮೋಕ್ಷ ಮಾಡಿ ಸಮಾಧಾನಪಡಿಸಿದ್ದಾರೆ.

ಕೋಲಾರ: CAA, NRC ಬೆಂಬಲಿಸಿ ಮೆರವಣಿಗೆಯಲ್ಲಿ ಲಾಠಿ ಪ್ರಹಾರ

ಕಾರ್ಯಕರ್ತರು ಹಾಗೂ ಸಂಸದರ ನಡುವೆ ಮಾತಿನ ಚಕಮಕಿ ನಡೆದಿದೆಎ. ಕೋಲಾರದಲ್ಲಿ ಪ್ರತಿಭಟನಕಾರರಿಂದ ಮುತ್ತಿಗೆ ಯತ್ನ ನಡೆದಿದ್ದು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ವೇದಿಕೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ವೇದಿಯಲ್ಲಿದ್ದ ಸಂಸದ ಮುನಿಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ನಮ್ಮನ್ನು ಲಾಠಿ ಚಾರ್ಜ್ ನಡೆದ ಸ್ಥಳದಲ್ಲಿ ಬಿಟ್ಟು ಇಲ್ಲಿಗೆ ಬಂದಿದ್ದೀರ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸಚಿವ ಆರ್.ಅಶೋಕ್ ಮನವಿ ಮಾಡಿದರೂ ಕೇಳದೇ ಪ್ರತಿಭಟನಕಾರರು ಧಿಕ್ಕಾರ ಕೂಗಿದ್ದಾರೆ. ಕಾರ್ಯಕರ್ತರ ಮನವೊಲಿಸಲು ತೆರಳಿದ ಕೋಲಾರ ಸಂಸದ ಮುನಿಸ್ವಾಮಿ ವೇದಿಕೆಯಿಂದ ಕೆಳಗಿಳಿದು ಬಂದಿದ್ದಾರೆ.

ಗಾಂಧಿ ಕನಸಿನಂತೆ ಪೌರತ್ವ ತಿದ್ದುಪಡಿ ಕಾಯ್ದೆ: ನಳಿನ್

ನಗರದ ಎಂ.ಜಿ ರಸ್ತೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಲಾಠಿ ಚಾರ್ಜ್ ನಡೆಸಿದ ಪೊಲೀಸರನ್ನು ಅಮಾನತ್ತು ಮಾಡುವಂತೆ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ವೇದಿಕೆಯಲ್ಲಿ ಸಚಿವ ಅಶೋಕ್, ನಾಗೇಶ್, ಎಂಎಲ್ಸಿ ನಾರಾಯಣಸ್ವಾಮಿ ಹಾಗೂ ಸಂಸದ ಮುನಿಸ್ವಾಮಿ ಇದ್ದರು.

CAA ಪರ ಮೆರವಣಿಗೆ ಸಾಗುವಾಗ ಕೋಲಾರ ಜಿಲ್ಲಾಸ್ಪತ್ರೆ ಮುಂಭಾಗ ಪೊಲೀಸರಿಂದ ಲಾಠಿ ಚಾರ್ಜ್ ನಡೆದಿತ್ತು. ರೂಟ್ ಮ್ಯಾಪ್ ಬಿಟ್ಟು ಮೆರವಣಿಗೆ ಬೇರೆ ಮಾರ್ಗವಾಗಿ ಸಾಗಿಸಲು ಯತ್ನಿಸಿದಕ್ಕೆ ಲಾಠಿ ಚಾರ್ಜ್ ಮಾಡಲಾಗಿದೆ.

Follow Us:
Download App:
  • android
  • ios