ಕೋಲಾರದಲ್ಲಿ ಲಾಠಿ ಚಾರ್ಜ್: ಏನಂದ್ರು ಐಜಿಪಿ..?
ಭಾರತೀಯ ಹಿತ ರಕ್ಷಣಾ ವೇದಿಕೆ ಆಶ್ರಯದಲ್ಲಿ ಜನಜಾಗೃತಿ ರ‍್ಯಾಲಿ ನಡೆಸುವುದಾಗಿ ಸಮಿತಿಯ ತಿಮ್ಮರಾಯಪ್ಪ ಮತ್ತಿರತರರು ಜಿಲ್ಲಾ ಪೊಲೀಸ್ ಇಲಾಖೆಗೆ ಅನುಮತಿ ಕೋರಿದ್ದರು. ಅದರಂತೆ ನಿಗದಿತ ಮಾರ್ಗದಲ್ಲೇ ರ‍್ಯಾಲಿ ಸಾಗಬೇಕು ಎಂಬ ಷರತ್ತುಗಳನ್ನು ಹಾಕಿ ಅನುಮತಿ ನೀಡಲಾಗಿತ್ತು. ನಿಗದಿತ ಮಾರ್ಗ ಬದಲಿಸಿದವರ ಮೇಲೆ ಲಘು ಲಾಠಿಚಾರ್ಜ್ ಮಾಡಲಾಗಿದೆ ಎಂದು ಕೇಂದ್ರವಲಯ ಐಜಿಪಿ ಶರತ್‌ಚಂದ್ರ ಸ್ಪ್ವಷ್ಟಪಡಿಸಿದ್ದಾರೆ.
ಕೋಲಾರ(ಜ.05): ಶಾಂತಿ, ಸುವ್ಯವಸ್ಥೆ ದೃಷ್ಟಿಯಿಂದ ನಿಗದಿತ ಮಾರ್ಗ ಬದಲಿಸಿದವರ ಮೇಲೆ ಲಘು ಲಾಠಿಚಾರ್ಜ್ ಮಾಡಲಾಗಿದೆಯೇ ಹೊರತು ಯಾವುದೇ ದುರುದ್ದೇಶವಿರಲಿಲ್ಲ ಎಂದು ಕೇಂದ್ರವಲಯ ಐಜಿಪಿ ಶರತ್‌ಚಂದ್ರ ಸ್ಪ್ವಷ್ಟಪಡಿಸಿದ್ದಾರೆ.
ಶುಕ್ರವಾರ ಪೌರತ್ವ ತಿದ್ದುಪಡಿ ಕಾಯಿದೆ ಬೆಂಬಲಿಸಿ ಭಾರತೀಯ ಹಿತ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಜನಜಾಗೃತಿ ಮೆರವಣಿಗೆ ಸಂದರ್ಭದಲ್ಲಿ ನಡೆದ ಲಾಠಿಚಾರ್ಜ್ ಕುರಿತಂತೆ ಮಾಧ್ಯಮದವರ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.
ಮೆರವಣಿಗೆಗೆ ಷರತ್ತು ಅನ್ವಯ:
ಭಾರತೀಯ ಹಿತ ರಕ್ಷಣಾ ವೇದಿಕೆ ಆಶ್ರಯದಲ್ಲಿ ಜನಜಾಗೃತಿ ರ‍್ಯಾಲಿ ನಡೆಸುವುದಾಗಿ ಸಮಿತಿಯ ತಿಮ್ಮರಾಯಪ್ಪ ಮತ್ತಿರತರರು ಜಿಲ್ಲಾ ಪೊಲೀಸ್ ಇಲಾಖೆಗೆ ಅನುಮತಿ ಕೋರಿದ್ದರು. ಅದರಂತೆ ನಿಗದಿತ ಮಾರ್ಗದಲ್ಲೇ ರ‍್ಯಾಲಿ ಸಾಗಬೇಕು ಎಂಬ ಷರತ್ತುಗಳನ್ನು ಹಾಕಿ ಅನುಮತಿ ನೀಡಲಾಗಿತ್ತು. 2006 ರಿಂದ ಕೋಲಾರ ನಗರದಲ್ಲಿ ಶಾಂತಿ, ಸುವ್ಯವಸ್ಥೆ ದೃಷ್ಟಿಯಿಂದ ಕೆಲವು ಮಾರ್ಗಗಳಲ್ಲಿ ಕೆಲವೊಂದು ಸಮುದಾಯಗಳ ರ‍್ಯಾಲಿ ನಿಷೇಧಿಸಲಾಗಿದೆ. ಅದರಂತೆ ಪೊಲೀಸ್ ಇಲಾಖೆ ಆಸ್ಪತ್ರೆ ವೃತ್ತದಿಂದ ಎಂ.ಜಿ.ರಸ್ತೆಗೆ ರಾರಯಲಿ ಸಾಗಲು ಅನುಮತಿ ನೀಡಿತ್ತು ಎಂದಿದ್ದಾರೆ.
ಮೋದಿ, ಶಾ ಕೂಡ ಜೈಲಿಗೆ ಹೋಗ್ತಾರೆ ಎಂದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ
ಆದರೆ ರಾರಯಲಿಯಲ್ಲಿದ್ದವರು ಕ್ಲಾಕ್ ಟವರ್ ಕಡೆ ಹೋಗಲು ಬ್ಯಾರಿಕೇಡ್‌ಗಳನ್ನು ಮುರಿದು ನುಗ್ಗಿದ್ದರಿಂದಾಗಿ ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ್ದಾರೆ. ಇದರಲ್ಲಿ ಯಾವುದೇ ಪಿತೂರಿ ಇಲ್ಲ. ಈ ಸಂಬಂಧ ತನಿಖೆ ನಡೆಸಿ ಪೊಲೀಸರಿಂದ ತಪ್ಪಾಗಿದ್ದರೆ ಕ್ರಮ ಜರುಗಿಸಲಾಗುವುದು. ಅಲ್ಲದೆ ಟವರ್ ಸಮೀಪ ಮತ್ತೊಂದು ಕೋಮಿನ ನೂರಾರು ಮಂದಿ ಗುಂಪು ಸೇರಿದ್ದರ ಕುರಿತು ತನಿಖೆಗೆ ಸೂಚಿಸಲಾಗಿದೆ. ಕಾರಣ ತಿಳಿದ ನಂತರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚನ್ನಣ್ಣನವರ್, ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಮತ್ತಿತರರಿದ್ದರು.