Egg Distribution in School : ಮೊಟ್ಟೆ ಕುರಿತ ನನ್ನ ಹೇಳಿಕೆಯ ತಿರುಚಲಾಗಿದೆ : ಪೇಜಾವರ ಶ್ರೀ

  • ಶಾಲೆಯಲ್ಲಿ ಮೊಟ್ಟೆ ನೀಡುವ ವಿಷಯದಲ್ಲಿ ನನ್ನ ಹೇಳಿಕೆಯನ್ನು ಕೆಲವು ಮಾಧ್ಯಮಗಳು ತಿರುಚಲಾಗಿದೆ
  • ಸಮಾಜವನ್ನು ನನ್ನ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡಿವೆ 
People  Misguide Me on Egg Distribution Issue  Says Pejawara Swamiji  snr

ಉಡುಪಿ (ಡಿ.18): ಶಾಲೆಯಲ್ಲಿ (School) ಮೊಟ್ಟೆ (Egg) ನೀಡುವ ವಿಷಯದಲ್ಲಿ ನನ್ನ ಹೇಳಿಕೆಯನ್ನು ಕೆಲವು ಮಾಧ್ಯಮಗಳು ತಿರುಚಿ, ಸಮಾಜವನ್ನು (Social) ನನ್ನ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡಿವೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಲೆಗಳಲ್ಲಿ (School) ಸಾಮೂಹಿಕವಾಗಿ ಎಲ್ಲರಿಗೂ ಮೊಟ್ಟೆ ವಿತರಿಸಲಾಗುತ್ತಿದೆ ಎಂಬರ್ಥದಲ್ಲಿ ನನ್ನ ಅಭಿಪ್ರಾಯ ಕೇಳಲಾಗಿತ್ತು. ಮೊಟ್ಟೆ ತಿನ್ನುವವರಿಗೆ ಮೊಟ್ಟೆ ಕೊಡುತ್ತಾರೆ, ತಿನ್ನದವರಿಗೆ ಬಾಳೆಹಣ್ಣು ನೀಡುತ್ತಾರೆ ಎಂಬ ವಿಚಾರವನ್ನು ನಮಗೆ ತಿಳಿಸದೇ, ಮೊಟ್ಟೆ ಹಂಚುವ ಕುರಿತು ಅಭಿಪ್ರಾಯವೇನು ಎಂಬ ಅರ್ಧ ಸತ್ಯ ಕೇಳಲಾಗಿತ್ತು. ಅದರಂತೆ ಶಾಲೆಯಲ್ಲಿ (School) ಸಾಮೂಹಿಕವಾಗಿ ಮೊಟ್ಟೆ (Egg) ನೀಡುವುದಕ್ಕೆ ಅಂದು ವಿರೋಧ ವ್ಯಕ್ತಪಡಿಸಿದ್ದೆ. ಆಹಾರದ (Food) ಹಕ್ಕು, ಸ್ವಾತಂತ್ರ್ಯ ಎಲ್ಲರಿಗೂ ಇದೆ. 

ಸಸ್ಯಾಹಾರಿಗಳಿಗೆ ಮೊಟ್ಟೆ (Egg) ತಿನ್ನಿಸುವ ಕೆಲಸ ಆಗಬಾರದು. ಶಾಲೆಯಲ್ಲಿ ಕೆಲವರಿಗೆ ಮೊಟ್ಟೆ ವಿತರಣೆ, ಕೆಲವರಿಗೆ ನೀಡದಿರುವುದು ಮತ ಭೇದಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದೆ ಎಂದಿದ್ದಾರೆ ಪೇಜಾವರ ಶ್ರೀ.

ಆದರೆ, ಅದನ್ನೇ ಇಟ್ಟುಕೊಂಡು ಶಾಲೆಯಲ್ಲಿ (School) ಬಡ, ಆಶಕ್ತ, ದುರ್ಬಲ ಮಕ್ಕಳಿಗೆ ಮೊಟ್ಟೆಕೊಡುವುದನ್ನ ಪೇಜಾವರ ಶ್ರೀಗಳು ವಿರೋಧಿಸುತ್ತಿದ್ದಾರೆ ಎಂಬಂತೆ ಪ್ರಸಾರ ಮಾಡಿ, ಜನಸಮೂಹವನ್ನು ಎತ್ತಿಕಟ್ಟುವ ಕೆಲಸ ನಡೆದಿದೆ. ಸಮಾಜ ಸಂಘಟಿಸುವ ಕಾರ್ಯ ನಡೆಯಬೇಕು ಹೊರತು ಸಮಾಜ ಒಡೆಯುವ ಕೆಲಸ ನಡೆಯಬಾರದು. ಒಂದು ವರ್ಗವನ್ನು ಹೀಯಾಳಿಸುವ ಕೆಲಸ ಮಾಡಬಾರದೆಂದು ಸ್ವಾಮೀಜಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios