ಶ್ರೀನಿವಾಸಪುರ(ಜೂ. 13): ಮಹಿಳಾ ಸಿಬ್ಬಂದಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಸರ್ಕಾರಿ ಕಚೇರಿ ಗುಮಾಸ್ತನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಶ್ರೀನಿವಾಸಪುರದ ಎಪಿಎಂಸಿಯಲ್ಲಿ ನಡೆದಿದೆ.

ಸಾರ್ವಜನಿಕರಿಂದ ಧರ್ಮದೇಟು ತಿಂದ ಸರ್ಕಾರಿ ಉದ್ಯೋಗಿ ಎಪಿಎಂಸಿಯಲ್ಲಿ ಕ್ಲರ್ಕ ಆಗಿರುವ ಜಗನಾಥ್‌ ಎಂದು ಗುರುತಿಸಲಾಗಿದೆ. ಇಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿ ಮೇಲೆ ನಿರಂತರವಾಗಿ ಅಸಭ್ಯವಾಗಿ ವರ್ತಿಸುತ್ತಿದ್ದ ಬಗ್ಗೆ ಮಹಿಳಾ ಸಿಬ್ಬಂದಿ ಎಪಿಎಂಸಿ ಅಧ್ಯಕ್ಷ ಮತ್ತು ಕಾರ್ಯದರ್ಶಿಗೆ ಗಮನಕ್ಕೆ ತಂದಿರುತ್ತಾರೆ.

ಫ್ರೀ ಫೈರ್ ಆನ್‌ಲೈನ್‌ ಗೇಮ್‌ಗೆ ಬಾಲಕ ಬಲಿ: ಟಾಸ್ಕ್ ಗೆಲ್ಲಲು ಆತ್ಮಹತ್ಯೆ

ಇದರಂತೆ ಅಧ್ಯಕ್ಷ ರಾಜೇಂದ್ರಪ್ರಸಾದ್‌ ಮತ್ತು ಕಾರ್ಯದರ್ಶಿ ವೇಣುಗೋಪಾಲ್‌ ಇತರೆ ಸದಸ್ಯರ ಸಮ್ಮಖದಲ್ಲಿ ಆರೋಪಿ ಜಗನಾಥನನ್ನು ಕರೆಯಿಸಿ ವಿಚಾರಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿ ಪೋಷಕರು ಮತ್ತು ಸಾರ್ವಜನಿಕರು ಅಧ್ಯಕ್ಷರ ಕೊಠಡಿಗೆ ಏಕಾಏಕಿ ನುಗ್ಗಿ ಜಗನಾಥನಿಗೆ ಧರ್ಮದೇಟು ನೀಡಿ ಎಚ್ಚರಿಸಿರುತ್ತಾರೆ ಈ ವಿಡಿಯೋ ತುಣಕು ಈಗ ಎಲ್ಲಡೆ ಹರಡಿದೆ.

ಕೊಡಗು ರೆಸಾರ್ಟ್‌ನಲ್ಲಿ ಎಚ್ಡಿಕೆ ಕುಟುಂಬ ವಿಶ್ರಾಂತಿ

ಘಟನೆ ನಂತರ ಮಹಿಳಾ ಸಿಬ್ಬಂದಿ ತಮ್ಮ ವಿರುದ್ಧ ಆರೋಪಿ ಜಗನಾಥ್‌ ಅಸಭ್ಯ ವರ್ತನೆ ತೊರಿದ್ದಾರೆ ಎಂದು ಎಪಿಎಂಸಿ ಕಾರ್ಯದರ್ಶಿಗೆ ಲಿಖಿತವಾಗಿ ದೂರು ನೀಡಿರುತ್ತಾರೆ. ಈ ಬಗ್ಗೆ ಪೂರ್ಣ ತನಿಖೆ ನಡೆಸಿ ಎಪಿಎಂಸಿ ಹಿರಿಯ ಅಧಿ​ಕಾರಿಗಳಿಗೆ ವರದಿ ಸಲ್ಲಿಸುವಂತೆ ಅಧ್ಯಕ್ಷ ರಾಜೇಂದ್ರಪ್ರಸಾದ್‌ ಕಾರ್ಯದರ್ಶಿಗೆ ಸೂಚಿಸಿದ್ದಾರೆ.