ಮೈಸೂರು(ಜೂ. 13): ಫ್ರೀ ಫೈರ್‌ ಮೊಬೈಲ್‌ ಗೇಮ್‌ ಆಡುವ ಹವ್ಯಾಸದಿಂದ 14 ವರ್ಷದ ಬಾಲಕನೊಬ್ಬ ಗೇಮಿನಲ್ಲಿ ಹೇಳಿದಂತಹ ಟಾಸ್ಕ್‌ ಪೂರೈಸಲು ಹೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ವಿಶ್ವೇಶ್ವರನಗರದ ನಿವಾಸಿ ಮನೋಹರ್‌ ಎಂಬವರ ಪುತ್ರ ಗೋಕುಲ್‌(14) ಮೃತಪಟ್ಟವನು. ಈತ 9ನೇ ತರಗತಿ ಓದುತ್ತಿದ್ದು, ಯಾವಾಗಲೂ ಮೊಬೈಲ್‌ನಲ್ಲಿ ಗೇಮ್‌ ಆಡುತ್ತಿದ್ದನು.

ಗೇಮ್‌ನಲ್ಲಿ ಬಂದ ಟಾಸ್ಕ್‌ ಪೂರ್ಣಗೊಳಿಸಲು ಹೋದ ಗೋಕುಲ್‌, ಶೆಟರ್‌ ಎಳೆಯುವ ತಂತಿಯೊಂದಿಗೆ ಪ್ರಯೋಗಕ್ಕೆ ಇಳಿದಿದ್ದು, ತಂತಿಯು ಕುತ್ತಿಗೆಗೆ ಸಿಲುಕಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]