ಗದಗ(ಏ.19): ನಗರದಲ್ಲಿ ಕೊರೋನಾ 3 ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಗೊಳಿಸಿ ವಾರದಲ್ಲಿ 2 ದಿನ ಮಾತ್ರ ಕಿರಾಣಿ ಸಾಮಗ್ರಿ ಖರೀದಿಗೆ ಅವಕಾಶ ಕಲ್ಪಿಸಿದೆ. 

ಶನಿವಾರ ಬೆಳಗ್ಗೆ ಗದಗ ನಗರದ ಗ್ರೇನ್‌ ಗ್ರೋಸರಿ ಮಾರುಕಟ್ಟೆಯಲ್ಲಿ ಕಿರಾಣಿ ಸಾಮಗ್ರಿಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ನೆರೆದಿದ್ದರು. ಪೊಲೀಸ್‌ ಇಲಾಖೆ ಸಾಮಾಜಿಕ ಅಂತರದ ಆಧಾರದಲ್ಲಿ ಸರದಿ ಸಾಲಿನಲ್ಲಿ ನಿಲ್ಲಿಸಿದ್ದರು. 

ಕೊರೋನಾ ಆತಂಕ: ಕಿರಾಣಿ ಅಂಗಡಿಗಳಿಗೆ ಬೀಗಮುದ್ರೆ

ಆನಂತರ ಹುಯಿಲಗೋಳ ನಾರಾಯಣರಾವ್‌ ವೃತ್ತದಲ್ಲಿ ಜಿಲ್ಲಾಡಳಿತದಿಂದ ನಿರ್ಮಿಸಿರುವ ಸೋಂಕು ನಿವಾರಣಾ ಸುರಂಗದ ಮೂಲಕ ಹಾಯ್ದು ಹೋಗುವುದನ್ನು ಕಡ್ಡಾಯಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರೋಸರಿ ಮಾರುಕಟ್ಟೆಯಿಂದ ಹಳೆಯ ಬಸ್‌ ನಿಲ್ದಾಣದ ವರೆಗೂ ಅರ್ಧ ಕಿಮೀ ವರೆಗೂ ಸಾಲು ಬೆಳೆದಿತ್ತು.