ದಾಂಡೇಲಿ ಬಳಿ ಗ್ರಾಮಕ್ಕೆ ನುಗ್ಗಿದ ಮೊಸಳೆ: ಕಕ್ಕಾಬಿಕ್ಕಿಯಾದ ಜನತೆ..!

* ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿಯ ಕೋಗಿಲಬನ ಗ್ರಾಮ
* ಗ್ರಾಮದ ಜನವಸತಿ ಪ್ರದೇಶಗಳಲ್ಲಿ ಸಂಚರಿಸಿದ ಮೊಸಳೆ 
* ಮೊಸಳೆ ಹಿಡಿದು ಮತ್ತೆ ನದಿಗೆ ಬಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ

People Anxiety for Crocodile Entry to Village at Dandeli in Uttara Kannada grg

ದಾಂಡೇಲಿ(ಜು.02):  ದಾಂಡೇಲಿಯ ಕಾಳಿ ನದಿಯ ದಡದಲ್ಲಿರುವ ಕೋಗಿಲಬನ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಮೊಸಳೆ ಪ್ರತ್ಯಕ್ಷವಾಗಿ ಒಂದು ಗಂಟೆ ಕಾಲ ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಸಿತು.

ಕಾಳಿ ನದಿಯಿಂದ ಹೊರಬಂದ ಮೊಸಳೆ ಗ್ರಾಮದ ಜನವಸತಿ ಪ್ರದೇಶಗಳಲ್ಲಿ ಸಂಚರಿಸಿತು. ಯಾವುದೇ ಜನರಿಗಾಗಲಿ, ಸಾಕು ಪ್ರಾಣಿಗಳಿಗೆ ತೊಂದರೆ ಮಾಡಿಲ್ಲ. ಮೊಸಳೆ ಮನೆಗೆ ನುಗ್ಗಿದರೆ ಹೇಗೆ ಎಂದು ಜನರು ಭಯಭೀತರಾಗಿದ್ದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆ ಹಿಡಿದು ಮತ್ತೆ ನದಿಗೆ ಬಿಟ್ಟು ಗ್ರಾಮದ ಜನರ ಆತಂಕವನ್ನು ದೂರ ಮಾಡಿದರು.

ಜಮಖಂಡಿ: ಎಮ್ಮೆ ಎಳೆದೊಯ್ದ ಮೊಸಳೆ, ವಿಡಿಯೋ ವೈರಲ್‌

ಗ್ರಾಮದ ಪಕ್ಕದಲ್ಲಿ ಕಾಳಿ ನದಿಯಿದ್ದು, ಅಣತಿ ದೂರದಲ್ಲಿ ಮೊಸಳೆ ಪಾರ್ಕ್ ಕೂಡ ಇದ್ದು ನೂತನ ಪಾರ್ಕ್ ಕೂಡ ನಿರ್ಮಾಣ ಹಂತದಲ್ಲಿದೆ. ಇಲ್ಲಿ ನೂರಾರು ಮೊಸಳೆಗಳಿವೆ. ಜನವಸತಿ ಪ್ರದೇಶದಲ್ಲಿ ರಾತ್ರಿ ಕೆಲವೊಮ್ಮೆ ಮೊಸಳೆ ಹೊರ ಬರುತ್ತಿದ್ದವು. ಆದರೆ ಗುರುವಾರ ಬೆಳಗ್ಗೆಯೇ ಮೊಸಳೆ ಗ್ರಾಮದಲ್ಲಿ ನುಗ್ಗಿ ಬಂದು ಜನರಲ್ಲಿ ಆತಂಕ ಹಾಗೂ ಅಚ್ಚರಿಯನ್ನು ಉಂಟುಮಾಡಿದೆ. ಬೆಳ್ಳಂಬೆಳ್ಳಿಗ್ಗೆ ಬಂದ ಮೊಸಳೆಯನ್ನು ಕಣ್ಣು ತುಂಬಿಕೊಂಡ ಜನರು ಅದು ನಡೆದುಕೊಂಡು ಹೋಗುತ್ತಿರುವುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
 

Latest Videos
Follow Us:
Download App:
  • android
  • ios