ಶಿವಮೊಗ್ಗದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್’ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Feb 2019, 5:46 PM IST
Parked two wheeler burnt by anti social elements in Shivamogga
Highlights

ನ್ಯೂ ಮಂಡ್ಲಿ ಬಡಾವಣೆಯ ಮೊದಲ ತಿರುವಿನ ಬಳಿ ಇರುವ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್’ಗಳಿಗೆ ಬೆಂಕಿ ಹಚ್ಚಲಾಗಿದೆ. ನಾಗರಾಜ್, ರೇಣುಕೇಶ್ ಹಾಗೂ ಯೋಗೀಶ್ ಅವರಿಗೆ ಸೇರಿದ ಬೈಕ್’ಗಳು ತೀವ್ರಹಾನಿಗೊಳಗಾಗಿವೆ.

ಶಿವಮೊಗ್ಗ[ಫೆ.12]: ಮನೆ ಮುಂದೆ ನಿಲ್ಲಿಸಿದ್ದ ಬೈಕ್’ಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆದ ಘಟನೆ ನಗರದ ನ್ಯೂ ಮಂಡ್ಲಿ ಬಡಾವಣೆಯಲ್ಲಿ ನಡೆದಿದೆ. 

ಹೆಡೆಮುರಿ ಕಟ್ತೇವೆ ಎಂದ ಪೊಲೀಸರಿಗೇ ಕಳ್ಳರ ಸವಾಲು!

ಸೋಮವಾರ ತಡರಾತ್ರಿ ದೊಡ್ಡಪೇಟೆ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ 2 ಗಂಟೆಗೆ ಈ ದುರ್ಘಟನೆ ನಡೆದಿದ್ದು, 6 ಬೈಕ್’ಗಳು ಹೊತ್ತಿ ಉರಿದಿವೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಮೂಲಕ ಸ್ಥಳೀಯರ ಆತಂಕವನ್ನು ಕಡಿಮೆ ಮಾಡಿದ್ದಾರೆ.

ಶಿವಮೊಗ್ಗ: ನಟೋರಿಯಸ್ ರೌಡಿಗಳ ಎಣ್ಣೆ ಪಾರ್ಟಿಗೆ ಪೊಲೀಸ್ ಕ್ವಾಟರ್ಸ್ ಅಡ್ಡೆ

ನ್ಯೂ ಮಂಡ್ಲಿ ಬಡಾವಣೆಯ ಮೊದಲ ತಿರುವಿನ ಬಳಿ ಇರುವ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್’ಗಳಿಗೆ ಬೆಂಕಿ ಹಚ್ಚಲಾಗಿದೆ. ನಾಗರಾಜ್, ರೇಣುಕೇಶ್ ಹಾಗೂ ಯೋಗೀಶ್ ಅವರಿಗೆ ಸೇರಿದ ಬೈಕ್’ಗಳು ತೀವ್ರಹಾನಿಗೊಳಗಾಗಿವೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

loader