ಶಿವಮೊಗ್ಗ (ಫೆ.11): ಜನಸಂಪರ್ಕ ಸಭೆ ನಡೆಸಿದ ಪೊಲೀಸರು 'ಕಳ್ಳತನಕ್ಕೆ ಹೆದರಬೇಡಿ..ನಾವಿದ್ದೇವೆ...' ಎಂದು ಹೇಳಿ ಜನಸಂಪರ್ಕ ಸಭೆ ನಡೆಸಿದ ಬೆನ್ನಲ್ಲೇ, ಕಳ್ಳರು ಮತ್ತೊಮ್ಮೆ ತಮ್ಮ ಕೈ ಚಳಕ ತೋರಿಸಿ, ಪೊಲೀಸರಿಗೇ ಸಲು ಎಸೆದಿದ್ದಾರೆ.

ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ವಿಶೇಷ ಕರ್ತವ್ಯಾಧಿಕಾರಿ, ಡೆಪ್ಯೂಟಿ ತಹಶೀಲ್ದಾರ್ ಆಗಿದ್ದ ಕೃಷ್ಣಮೂರ್ತಿಯವರ ಮನೆಯಲ್ಲಿ  ಕಳ್ಳತನವಾಗಿತ್ತು. ಈ ಬೆನ್ನಲ್ಲೇ ಜನಸಂಪರ್ಕ ಸಭೆ ನಡೆಸಿದ ಎಸ್ಪಿ ಅಭಿನವ್ ಖರೆ ಕಳ್ಳರ ಹೆಡೆಮುರಿ ಕಟ್ಟುವುದಾಗಿ ಭರವಸೆ ನೀಡಿದ್ದರು. ಆದರೆ, ಈ ಬೆನ್ನಲ್ಲೆ ಕಳ್ಳರ ಗ್ಯಾಂಗ್ ವಿವೇಕಾನಂದ ಬಡಾವಣೆಯ ಮನೆಯೊಂದರಲ್ಲಿ ಮತ್ತೊಮ್ಮೆ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. 

ನಿಮ್ ಏರಿಯಾದಲ್ಲಿ ಅಪರಾಧ ಕಡಿಮೆಯಾಗಬೇಕೆಂದರೆ ಹೀಗ್ ಮಾಡಿ...

ಕೃಷ್ಣಮೂರ್ತಿ ಅವರ ಮನೆಯಲ್ಲಿ 30 ಗ್ರಾಂ ಬಂಗಾರ ಹಾಗೂ 50 ಸಾವಿರ ರೂ. ನಗದನ್ನು ಕಳ್ಳರ ಗ್ಯಾಂಗ್ ದೋಚಿ ಪರಾರಿಯಾಗಿತ್ತು. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಎಸ್ಪಿ ಜನ ಸಂಪರ್ಕ ಸಭೆಯೂ ನಡೆಸಿದ್ದರು. ಇದೀಗ ಕೃಷ್ಣಮೂರ್ತಿಯವರ ಮನೆಯ ಕೇವಲ ಕೆಲವೇ ಕೆಲವು ಮೀಟರ್ ಅಂತರದಲ್ಲಿ ಮತ್ತೆ ಕಳ್ಳತನವಾಗಿದೆ. 

ಪೊಲೀಸ್ ಬೀಟ್ ಕಡಿಮೆ ಆಯಿತಾ?
ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿ ಹೋಗಿದ್ದ, ಜಿಲ್ಲಾ ರಕ್ಷಣಾಧಿಕಾರಿಗಳಿಗೂ ಇದೊಂದು ಬಹುದೊಡ್ಡ ಸವಾಲೇ ಸರಿ. ಆದರೆ ಈ ಬಡಾವಣೆಗಳಲ್ಲಿ ಪೊಲೀಸ್ ಬೀಟ್ ಕಡಿಮೆಯಾಗಿರುವ ಕಾರಣ ಕಳ್ಳತನ, ಗಾಂಜಾ ಸೇವನೆಗಳಂಥ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ. ಪೊಲೀಸರ ಬಳಿಯೇ ಕಳ್ಳರು ಕಣ್ಣಮುಚ್ಚಾಲೆ ಆಟ ಆರಂಭಿಸಿದ್ದಾರೆ. ಇನ್ನಾದರೂ ಪೊಲೀಸರು ಇರೋ ಸಂಪನ್ಮೂಲಗಳನ್ನೇ ಬಳಸಿ, ಕಳ್ಳರಿಗೆ ಚುರುಕುಮುಟ್ಟಿಸುವರೇ, ಕಾದು ನೋಡಬೇಕು..

ಒಂದೇ ಬಾರಿ 70 ಪೊಲೀಸರನ್ನು ಎತ್ತಂಗಡಿ ಮಾಡಿದ ಅಣ್ಣಾಮಲೈ