ಕೊರೋನಾ ಮಹಾಮಾರಿಗೆ ಔಷಧ ಸೂಚಿಸಿದ ವಿನಯ್ ಗುರೂಜಿ ಗಿಡಮೂಲಿಕೆಯ ಕಷಾಯದ ಮಾಹಿತಿ ನೀಡಿದ ಗುರೂಜಿ ಪಾರಿಜಾತದ ಕಷಾಯ ಸೇವನೆಯಿಂದ ಕೊರೋನಾ ಗುಣಮುಖ

ಚಿಕ್ಕಮಗಳೂರು (ಮೇ.23) : ಮಹಾಮಾರಿ ಕೊರೋನಾ ಎಲ್ಲೆಡೆ ಹರಡುತ್ತಿದ್ದು ಇದೇ ವೇಳೆ ಚಿಕ್ಕಮಗಳೂರು ಜಿಲ್ಲೆ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಇದಕ್ಕೆ ಮದ್ದು ಹೇಳಿದ್ದಾರೆ. 

ಮಹಾಮಾರಿ ಗುಣಪಡಿಸಲು ಅವಧೂತ ವಿನಯ್ ಗುರೂಜಿ ಪಾರಿಜಾತ ಎಲೆಯ ಕಷಾಯ ಕುಡಿಯುವಂತೆ ಸೂಚನೆ ನೀಡಿದ್ದಾರೆ. 

ಅವಧೂತ ವಿನಯ್ ಗುರೂಜಯಿಂದ ಭಕ್ತರಿಗೆ ಸಂದೇಶ ರವಾನೆಯಾಗಿದ್ದು, ಎಲ್ಲರಿಗೂ ಪಾರಿಜಾತ ಎಲೆಯ ಕಷಾಯ ಕುಡಿಯುವಂತೆ ತಿಳಿಸಿದ್ದಾರೆ. ಅಲ್ಲದೇ ಅದನ್ನು ತಯಾರಿಸುವ ವಿಧಾನದ ಬಗ್ಗೆಯೂ ವಿವರಣೆ ನೀಡಿದ್ದಾರೆ. 

DRDOನ ದೇಶಿ ಕೋವಿಡ್‌ ಔಷಧಿ 2ಡಿಜಿ ಬಿಡುಗಡೆ!

ಕೊರೋನಾ ಮಹಾಮಾರಿ ಗುಣಪಡಿಸಲು ಪಾರಿಜಾತ ಎಲೆಯ ಕಷಾಯ ಕುಡಿಯಬೇಕು. ಇದಕ್ಕೆ 5 ಪಾರಿಜಾತದ ಎಲೆ, ಕಾಳು ಮೆಣಸು, ಶುಂಠಿ, ಲಿಂಬೆ ಹಣ್ಣಿನ ರಸ ಹಾಕಿ ಕುದಿಸಿ ಕುಡಿದರೆ ಕೊರೊನಾದಿಂದ ಮುಕ್ತರಾಗಬಹುದು ಎಂದು ಗುರೂಜಿ ತಿಳಿಸಿದ್ದಾರೆ.

ಈಗಾಗಲೇ ವಿಶ್ವದಾದ್ಯಂತ ವಿಜ್ಞಾನಿಗಳು ಮಹಾಮಾರಿ ಸೋಲಿಸಲು ಅನೇಕ ಔಷಧಗಳ ಸಂಶೋಧನೆಯಲ್ಲಿ ತೊಡಗಿದ್ದಾರೆ. ಮುಂಚಿತವಾಗಿ ಈಗ ಲಸಿಕೆ ನೀಡಲಾಗುತ್ತಿದೆ. ಅಲ್ಲದೇ ಡಿಆರ್‌ಡಿಒ ಕೂಡ 2 ಜಿಡಿ ಔಷಧವನ್ನು ಬಿಡುಗಡೆ ಮಾಡಿದೆ. ಆದರೆ ಸಂಪೂರ್ಣ ವಿಶ್ವಾಸಾರ್ಹದವಾದ ಔಷಧ ಕೊರೋನಾ ಮಹಾಮಾರಿಗೆ ಲಭ್ಯವಾಗದ ಹಿನ್ನೆಲೆ ಅನೇಕ ಸಂಶೋಧನೆಗಳು ಮುಂದುವರಿದಿವೆ. 

ಇತ್ತ ಭಾರತೀಯ ಮೂಲದ ಪರಿಣಾಮಕಾರಿ ಆಯುರ್ವೇದ ಔಷಧಗಳ ಸಂಶೋಧನೆಯೂ ನಡೆಯುತ್ತಿದ್ದು, ಈಗಾಗಲೇ ಅನೇಕ ಪ್ರಯೋಗಗಳು ಆಗಿವೆ. ಇದೀಗ ವಿನಯ್ ಗುರೂಜಿ ಔ‍ಷಧವನ್ನು ಸೂಚಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona