ಮೇ.22ರ ರಿಪೋರ್ಟ್: ರಾಜ್ಯದಲ್ಲಿ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ದುಪ್ಪಟ್ಟು

* ಮೇ.22ರ ಕೊರೋನಾ ರಿಪೋರ್ಟ್
* ರಾಜ್ಯದಲ್ಲಿಂದು ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ದುಪ್ಪಟ್ಟು
* ಕರ್ನಾಟಕದಲ್ಲಿ 31,183 ಜನರಿಗೆ ಸೋಂಕು ದೃಢ, 451 ಜನರು ನಿಧನ
 

31183 New Coronavirus Cases and 61766 recovered In Karnataka On May 22 rbj

ಬೆಂಗಳೂರು, (ಮೇ.22): ಕರ್ನಾಟಕದಲ್ಲಿ ಹೊಸ ಸೋಂಕಿತರ ಪ್ರಮಾಣದಲ್ಲಿ ಕೊಂಚ ಕಡಿಮೆಯಾಗುತ್ತಿದ್ದು, ಹೊಸ ಆಶಾಭಾವನೆ ಮೂಡಿಸಿದೆ. 

 ಹೌದು..ರಾಜ್ಯದಲ್ಲಿಂದು (ಶನಿವಾರ) ಕೋವಿಡ್ ಸೋಂಕಿತರಿಗಿಂತ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ದುಪ್ಪಟ್ಟು ಆಗಿದೆ. ಹೊಸದಾಗಿ 31183 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ರೆ, ಇದೆ ಅವಧಿಯಲ್ಲಿ 61766 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯ ಬಿಡುಗಡೆಯಾಗಿದ್ದಾರೆ.

ಕರ್ನಾಟಕದಲ್ಲಿ ಮೊದಲ ವೈಟ್ ಫಂಗಸ್ ಪತ್ತೆ..! .

ಇನ್ನ ಕರ್ನಾಟಕದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 451 ಜನರು ಮಹಾಮಾರಿ ಸೋಂಕಿನಿಂದ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ಮೂಲಕ ಇಂದಿನವರೆಗೆ ಕೋವಿಡ್-19 ಸೋಂಕಿನಿಂದ ಮೃತ ಪಟ್ಟವರ ಒಟ್ಟು ಸಂಖ್ಯೆ 24658 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಈವರೆಗಿನ ಕೊರೊನಾ ಸೋಂಕಿತರ ಸಂಖ್ಯೆ 23,98,925 ಕ್ಕೆ ಏರಿಕೆಯಾಗಿದೆ. ಈವರೆಗೆ ಸೋಂಕಿತರ ಪೈಕಿ 18,91,042 ಜನರು ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.  ಸದ್ಯ 4,83,204 ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಸಂಖ್ಯೆ
ಬಾಗಲಕೋಟೆ-285, ಬಳ್ಳಾರಿ-2157, ಬೆಳಗಾವಿ-1026, ಬೆಂಗಳೂರು ಗ್ರಾಮಾಂತರ-716,ಬೆಂಗಳೂರು ನಗರ-8214, ಬೀದರ್-58, ಚಾಮರಾಜನಗರ-412, ಚಿಕ್ಕಬಳ್ಳಾಪುರ-720, ಚಿಕ್ಕಮಗಳೂರು-652, ಚಿತ್ರದುರ್ಗ-722, ದಕ್ಷಿಣ ಕನ್ನಡ-913, ದಾವಣಗೆರೆ-478, ಧಾರವಾಡ-973, ಗದಗ-443, ಹಾಸನ-1641,ಹಾವೇರಿ-342,ಕಲಬುರಗಿ-277,ಕೊಡಗು-345,ಕೋಲಾರ-708, ಕೊಪ್ಪಳ-377, ಮಂಡ್ಯ-798, ಮೈಸೂರು-2526, ರಾಯಚೂರು-584, ರಾಮನಗರ-335, ಶಿವಮೊಗ್ಗ-971, ತುಮಕೂರು-1545, ಉಡುಪಿ-849,ಉತ್ತರ ಕನ್ನಡ-1357,ವಿಜಯಪುರ-437, ಯಾದಗಿರಿ-322.

Latest Videos
Follow Us:
Download App:
  • android
  • ios