ಹುಣಸೂರು: ಪುತ್ರನ ಸಾವಿನಲ್ಲೂ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಪೋಷಕರು
ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ವೈದ್ಯರು ಹುಡುಗನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ತಿಳಿಸಿದಾಗ ದುಃಖದ ನಡುವೆಯೂ ಪುತ್ರನ ಅಂಗಾಂಗಳನ್ನು 6 ಮಂದಿಗೆ ದಾನ ಮಾಡಿದ ಪೋಷಕರು
ಹುಣಸೂರು(ಅ.20): ಅಪಘಾತದಲ್ಲಿ ಪುತ್ರನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ತಿಳಿದ ದಂಪತಿ ಪುತ್ರನ ದೇಹದ ಅಂಗಾಂಗಳನ್ನು ದಾನ ಮಾಡುವ ಮೂಲಕ 6 ಮಂದಿಗೆ ಜೀವದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಶ್ಯಾನುಭೋಗನಹಳ್ಳಿಯ ಸೋಮಶೇಖರ್, ಶ್ರೀಮತಿ ದಂಪತಿಯ ಪುತ್ರ ಎಸ್. ಆದಿತ್ಯ ಬಿಳಿಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದ. ವಾರದ ಹಿಂದೆ ರಾಯನಹಳ್ಳಿ ಬಳಿ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ.
ಮಂಗಳೂರು: ಪುತ್ರ ಶೋಕದಲ್ಲೂ ಮಗನ ಅಂಗಾಂಗ ದಾನ, ದಂಪತಿ ಕಾರ್ಯಕ್ಕೆ ಸಚಿವ ಗುಂಡೂರಾವ್ ಶ್ಲಾಘನೆ
ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ವೈದ್ಯರು ಹುಡುಗನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ತಿಳಿಸಿದಾಗ ದುಃಖದ ನಡುವೆಯೂ ಪುತ್ರನ ಅಂಗಾಂಗಳನ್ನು 6 ಮಂದಿಗೆ ದಾನ ಮಾಡಿದ್ದಾರೆ. ಹಣಕ್ಕಾಗಿ ಕಿಡ್ನಿಗಳನ್ನು ಮಾರಾಟ ಮಾಡುತ್ತಿರುವ ಈ ಕಾಲದಲ್ಲಿ ಪುತ್ರನ ಸಾವಿನಲ್ಲೂ ಮಾನವೀಯತೆ ಮೆರೆದ ದಂಪತಿಯನ್ನು ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಕೊಂಡಾಡಿದ್ದಾರೆ.