ಕೋಲಾರ(ನ.24): ಕೋಲಾರದ ಕೋಟಿ ಲಿಂಗೇಶ್ವರಸ್ವಾಮಿ ದೇಗುಲದ ಆವರಣದಲ್ಲಿ ಎರಡು ಬಣಗಳ ಮಧ್ಯೆ ಸಂಘರ್ಷ ಮತ್ತೆ ಶುರುವಾಗಿದ್ದು, ದೇಗುಲದ ನಿರ್ವಹಣೆಯನ್ನು ಹೈಕೋರ್ಟ್‌ ಆದೇಶದಂತೆ ಜಂಟಿಯಾಗಿ ನಿರ್ವಹಿಸಲು ಒಪ್ಪದ ಟ್ರಸ್ಟ್‌ನ ಕಾರ್ಯದರ್ಶಿ ವಿರುದ್ಧ ಧರ್ಮಾಧಿಕಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಹಣಕಾಸು ವ್ಯವಹಾರ ಮತ್ತು ಹೊಣೆಗಾರಿಕೆಗಳ ಬಗ್ಗೆ ಜಿಲ್ಲಾಡಳಿತದ ಆದೇಶದಲ್ಲಿ ಸ್ಪಷ್ಟತೆ ಇಲ್ಲದಿರೋದು ಇವೆಲ್ಲಕ್ಕೂ ಕಾರಣವಾಗಿದೆ ಎನ್ನಲಾಗಿದೆ. ಕೋಲಾರದ ಕಮ್ಮಸಂದ್ರದಲ್ಲಿನ ಕೋಟಿಲಿಂಗೇಶ್ವರಸ್ವಾಮಿ ದೇಗುಲದ ವಿವಾದವು ಇನ್ನು ಮುಗಿಯುವಂತೆ ಕಾಣುತ್ತಿಲ್ಲ. ದೇಗುಲದ ಆಡಳಿತವನ್ನು ನಿರ್ವಹಿಸುವ ವಿಚಾರದಲ್ಲಿ ಕೋರ್ಟ್‌ ಮೆಟ್ಟಿಲೇರಿದ್ದ ಎರಡು ಬಣದ ಮಧ್ಯೆ ಮತ್ತೆ ವಿವಾದ ಶುರುವಾಗಿದೆ.

ಸಿದ್ದು ಆಡಳಿತ ಹಾಡಿ ಹೊಗಳಿದ ಹುಣಸೂರು ಬಿಜೆಪಿ ಅಭ್ಯರ್ಥಿ

ಶುಕ್ರವಾರವಷ್ಟೆದೇಗುಲದ ಆಡಳಿತ ನಿರ್ವಹಣೆ ಹೊಣೆಯನ್ನು ಕಾರ್ಯದರ್ಶಿ ಕೆ.ವಿ.ಕುಮಾರಿಗೆ ವಹಿಸಿ ಜಿಲ್ಲಾಡಳಿತವು ಕೈತೊಳೆದುಕೊಂಡಿತ್ತು. ದೇಗುಲದ ಆಡಳಿತವನ್ನು ಜಂಟಿಯಾಗಿ ನಿರ್ವಹಣೆ ಮಾಡುವಂತೆ ಹೈಕೋರ್ಟ್‌ ಕೊಟ್ಟಿರುವ ಮಧ್ಯಂತರ ಆದೇಶವು ಪಾಲನೆಯಾಗುತ್ತಿಲ್ಲ ಎಂದು ಒಂದು ಬಣ ಪ್ರತಿಭಟನೆ ಶುರು ಮಾಡಿದೆ.

ಕಾರ್ಯದರ್ಶಿ ಕೆ.ವಿ.ಕುಮಾರಿ ಅವರು ದೇಗುಲದ ಅಭಿವೃದ್ಧಿಗೆ ಬದಲಾಗಿ ಇಲ್ಲಿ ಸಿಗುವ ಆದಾಯಕ್ಕಾಗಿ ಆಸಕ್ತಿ ತೋರಿಸುತ್ತಿದ್ದಂತೆ ಕಾಣುತ್ತಿದೆ. ದೇಗುಲದ ಸಿಬ್ಬಂದಿಯನ್ನು ಬೆದರಿಸಿ ದಬ್ಬಾಳಿಕೆ ಮಾಡ್ತಿದ್ದಾರೆ ಅಂತ ದೇಗುಲದ ನೌಕರರು ಆಪಾದಿಸಿದ್ದಾರೆ.

ಕೋಟಿಲಿಂಗೇಶ್ವರದಲ್ಲಿ ಪ್ರಸಾದ ವಿನಿಯೋಗ ರದ್ದು

ದೇಗುಲದ ಮೇಲ್ವಿಚಾರಣೆಯನ್ನು ಟ್ರಸ್ಟ್‌ನ ಕಾರ್ಯದರ್ಶಿಗೆ ವಹಿಸಿದೆ. ಹೈಕೋರ್ಟ್‌ನ ಸೂಚನೆ ಮೇರೆಗೆ ಕಾರ್ಯದರ್ಶಿ ಕೆ.ವಿ.ಕುಮಾರಿ ಅವರಿಗೆ ಬಂಗಾರಪೇಟೆಯ ತಹಸೀಲ್ದಾರ್‌ ಅಧಿಕಾರ ಹಸ್ತಾಂತರ ಮಾಡಿದ್ದರು. ಈ ಮಧ್ಯೆ ಧರ್ಮಾಧಿಕಾರಿ ಡಾ.ಶಿವಪ್ರಸಾದ್‌ ಅವರು ಈ ಪ್ರಕ್ರಿಯೆಯ ಬಗ್ಗೆ ಅತೃಪ್ತಿಯನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ.

ಕೋಟಿಲಿಂಗೇಶ್ವರಸ್ವಾಮಿ ದೇಗುಲವು ದಕ್ಷಿಣ ಭಾರತದಲ್ಲಿಯೇ ಹೆಸರು ಪಡೆದಿದೆ. ದೇಗುಲದ ಸಂಸ್ಥಾಪಕ ಕಮಲಸಾಂಭವ ಶಿವಮೂರ್ತಿಸ್ವಾಮೀಜಿ ಅವರು ಹತ್ತು ತಿಂಗಳ ಹಿಂದೆ ನಿಧನರಾದ ನಂತರ ಇಲ್ಲಿ ಸಮಸ್ಯೆ ಉದ್ಭವಿಸಿದೆ. ಸ್ವಾಮೀಜಿ ಪುತ್ರ ಡಾ.ಶಿವಪ್ರಸಾದ್‌ ಹಾಗೂ ದೇಗುಲದ ಟ್ರಸ್ಟ್‌ ಕಾರ್ಯದರ್ಶಿ ಕೆ.ವಿ.ಕುಮಾರಿ ಮಧ್ಯೆ ದೇಗುಲದ ನಿರ್ವಹಣೆಯ ಅಧಿಕಾರಕ್ಕಾಗಿ ಶುರುವಾದ ವಿವಾದವು ಹೈಕೋರ್ಟ್‌ ಮೆಟ್ಟಿಲೇರಿತ್ತು.

ಕೋಲಾರ: ಕೋಟಿ ಲಿಂಗ ಜಿಲ್ಲಾಡಳಿತದ ತೆಕ್ಕೆಗೆ

ಈ ವಿಚಾರವಾಗಿ ಒಂದು ವಾರದ ಹಿಂದೆ ಮಧ್ಯಂತರ ತೀರ್ಪ ಕೊಟ್ಟಿರುವ ಹೈಕೋರ್ಟ್‌, ಅಂತಿಮ ತೀರ್ಪು ಬರುವವರೆಗೂ ವಾದಿ-ಪ್ರತಿವಾದಿಗಳು ಜೊತೆಯಾಗಿ ದೇಗುಲದ ನಿರ್ವಹಣೆ ಮಾಡಬೇಕು ಅಂತ ಆದೇಶಿಸಿದೆ. ಹೈಕೋರ್ಟ್‌ನ ನಿರ್ದೇಶನದಂತೆ ಬಂಗಾರಪೇಟೆಯ ತಹಸೀಲ್ದಾರ್‌ ರಮೇಶ ಅವರು ಶನಿವಾರ ದೇಗುಲದ ನಿರ್ವಹಣೆಯ ಎಲ್ಲ ಹೊಣೆಯನ್ನು ಕಾರ್ಯದರ್ಶಿ ಕೆ.ವಿ.ಕುಮಾರಿ ಅವರಿಗೆ ವಹಿಸಿದ್ದರು.

ದೇಗುಲದ ಹೊಣೆಯನ್ನು ವಹಿಸಿಕೊಂಡ ಕಾರ್ಯದರ್ಶಿ ಕೆವಿ.ಕುಮಾರಿ ಸಂತಸ ವ್ಯಕ್ತಪಡಿಸಿದ್ದರು. ದಿವಂಗತ ಸ್ವಾಮೀಜಿ ಅವರ ಆಶಯದಂತೆ ನಡೆದುಕೊಳ್ಳುವುದಾಗಿ ಭರವಸೆ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ ಪುತ್ರ ಧರ್ಮಾಧಿಕಾರಿ ಡಾ.ಶಿವಪ್ರಸಾದ ಅವರು ಹೈಕೋರ್ಟ್‌ ಕೊಟ್ಟಿರುವ ಮಧ್ಯಂತರ ಆದೇಶದಂತೆ ನಡೆದುಕೊಳ್ಳುವುದಾಗಿ ಹೇಳಿದ್ದರು. ಕಾರ್ಯದರ್ಶಿ ಕೆವಿ.ಕುಮಾರಿ ಹೊಂದಿಕೊಂಡು ಹೋಗುವುದು ಮುಖ್ಯವಾಗಿದ್ದು, 10-15 ದಿನದಲ್ಲಿ ಎಲ್ಲವೂ ಗೊತ್ತಾಗುತ್ತೆ ಅಂತ ಅವರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದರು.

ಕೋಟಿಲಿಂಗೇಶ್ವರದಲ್ಲಿ ಪೂಜೆ ಸ್ಥಗಿತ

ಅಂತಿಮ ತೀರ್ಪು ಬರುವವರೆಗೂ ಇಲ್ಲಿನ ಗೊಂದಲಗಳು ಮುಂದುವರಿಯುವ ಲಕ್ಷಣಗಳು ಮೇಲ್ನೋಟಕ್ಕೆ ಕಂಡು ಬರುತ್ತಿರುವುದು ಮಾತ್ರ ವಾಸ್ತವದ ಸಂಗತಿಯಾಗಿದೆ. ಈ ನಡುವೆ ದೇವಸ್ಥಾನದ ವ್ಯಾಪ್ತಿಯಲ್ಲಿ ಶಾಂತಿ ಕಾಪಾಡಲು ದೇಗುಲಕ್ಕೆ ಬಿಗಿ ಪೊಲೀಸ್‌ ಬಂದೋಬಸ್‌್ತ ವ್ಯವಸ್ಥೆ ಮಾಡಲಾಗಿದೆ.