ಕೋಲಾರ(ಅ.02): ಕೆಜಿಎಫ್ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಆದೇಶದಂತೆ ಶ್ರೀ ಕೋಟಿಲಿಂಗೇಶ್ವರ ದೇವಾಲಯವನ್ನು ಮಂಗಳವಾರ ಜಿಲ್ಲಾಡಳಿತದ ವಶಕ್ಕೆ ಪಡೆದಿರುವುದಾಗಿ ಜಿಲ್ಲಾಧಿಕಾರಿ ಜಿ.ಮಂಜುನಾಥ್ ಪ್ರಕಟಿಸಿದ್ದಾರೆ.

ದೇವಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ನ್ಯಾಯಾಲಯ ಸೆಪ್ಟಂಬರ್ 19 ರಂದು ಆದೇಶ ಹೊರಡಿಸಿದೆ. 27ರಂದು ಆದೇಶದ ಪ್ರತಿ ನಮಗೆ ಸಿಕ್ಕಿದೆ. ಇದು ಖಾಸಗಿ ಆಸ್ತಿಯಾಗಿದ್ದು, ಡಾ. ಶಿವಪ್ರಸಾದ್ ಮತ್ತು ಕೆ.ವಿ.ಕುಮಾರಿ ನಡುವೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಆದ್ದರಿಂದ ಅದು ಇತ್ಯರ್ಥವಾಗುವ ತನಕ ತಾತ್ಕಾಲಿಕ ಆಡಳಿತ ವ್ಯವಸ್ಥೆಯಾಗಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅಡ್‌ಹಾಕ್ ಸಮಿತಿ ರಚಿಸಬೇಕು:

ದೇವಾ ಲಯದ ನಿರ್ವಹಣೆಗೆ ಅಡ್‌ಹಾಕ್ ಸಮಿತಿ ರಚನೆ ಮಾಡಬೇಕು. ಅದರಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಮತ್ತು ಮೂವರು ಪರಿಣಿತರ ತಂಡ ಇರುತ್ತದೆ. ಮೂವರು ಪರಿಣಿತರ ತಂಡವನ್ನು ಸರ್ಕಾರದ ಜೊತೆ ಸಮಾಲೋಚನೆ ಮಾಡಿ ನೇಮಕ ಮಾಡಿಕೊಳ್ಳಲಾಗುವುದು. ಪ್ರತಿ ತಿಂಗಳು ೫ ನೇ ತಾರೀಕಿನೊಳಗೆ ದೇವಾಲಯದ ಖರ್ಚು ವೆಚ್ಚಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು. ದೇವಾಲಯದ ದೈನಂದಿನ ವ್ಯವಹಾರದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದರು.

ಬ್ಯಾಂಕ್ ಖಾತೆಗೆ ಹಣ ಜಮಾ :

ದೇವಾ ಲಯದ ಹಣವನ್ನು ದುರ್ಬಳಕೆ ಮಾಡಿ ಕೊಳ್ಳಲು ಅವಕಾಶ ಕೊಡುವುದಿಲ್ಲ. ಬ್ಯಾಂಕ್ ಖಾತೆ ಪ್ರಾರಂಭಿಸಿ, ಅದರಲ್ಲಿ ಹುಂಡಿ ಹಣ, 55 ಅಂಗಡಿಗಳ ಬಾಡಿಗೆ, ಪಾರ್ಕಿಂಗ್ ಶುಲ್ಕ ವನ್ನು ಜಮಾ ಮಾಡಲಾಗುವುದು. ಹುಂಡಿ ಯನ್ನು ಸಮಿತಿಯ ಉಪಸ್ಥಿತಿಯಲ್ಲಿ ತೆರೆಯ ಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಡಾ.ಶಿವಪ್ರಸಾದ್ ಅವರಿಗೆ ನ್ಯಾಯಾ ಲಯ ನಿರ್ಬಂಧ ಹೇರಿಲ್ಲ. ಅವರು ದೇವಾ ಲಯಕ್ಕೆ ಬರಬಹುದು. ಆದರೆ ಆಡಳಿತದಲ್ಲಿ ಮಧ್ಯಪ್ರವೇಶಿಸುವ ಹಾಗಿಲ್ಲ. ಅವರು ವಾಸಿ ಸುತ್ತಿರುವ ಮನೆ ಕೂಡ ಖಾಲಿ ಮಾಡಿಸು ವುದಿಲ್ಲ. ಅವರು ನಡೆಸುತ್ತಿರುವ ಕ್ಲಿನಿಕ್ ಬಗ್ಗೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳು ವುದಾಗಿ ಮಂಜುನಾಥ್ ಹೇಳಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಎಸ್.ಮೊಹಮದ್ ಸುಜೀತ, ತಹಶೀಲ್ದಾರ್ ಕೆ.ರಮೇಶ್, ಧರ್ಮಾಧಿಕಾರಿ ಡಾ. ಶಿವಪ್ರಸಾದ್, ಕುಮಾರಿ, ಪಂಚಾಯಿತಿ ಅಧ್ಯಕ್ಷ ನಾಗರಾಜ್ ಮತ್ತಿತರರು ಇದ್ದರು.    

Kotilinga temple added under district administration in kolar