ಭದ್ರಾವತಿ (ಜು.12): ಅಕ್ರಮ ನೇಮಕಾತಿಗೆ ಸಂಬಂಧಿ​ಸಿದಂತೆ ಅರಣ್ಯಾ​ಧಿಕಾರಿಗಳ ವಿರುದ್ಧ ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್‌ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆದಿದೆ. ದೂರಿಗೆ ಸಂಬಂಧಿ​ಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಬುಧವಾರ ಆದೇಶಿಸಿದೆ.

ಶಿವಮೊಗ್ಗ ವೃತ್ತದ ಪಶ್ಚಿಮ ಘಟ್ಟಅರಣ್ಯ ಯೋಜನೆಯಡಿಯಲ್ಲಿ ಉಪ ಅರಣ್ಯ ಸಂರಕ್ಷಣಾ​ಕಾರಿಗಳ ಕಚೇರಿಯಲ್ಲಿ ಡಾಟಾ ಎಂಟ್ರಿ ಆಪರೇಟರ್‌ ತಾತ್ಕಾಲಿಕ ಹುದ್ದೆಗೆ ಆಯ್ಕೆಯಾದವರನ್ನು ಅಕ್ರಮವಾಗಿ ಕಾಯಂ ಹುದ್ದೆಗೆ ನೇಮಕಾತಿ ಮಾಡಿರುವ ವಿಚಾರಕ್ಕೆ ಸಂಬಂ​ಧಿಸಿದಂತೆ ಶಿವಕುಮಾರ್‌ ಅವರು ಇಲಾಖೆಯ ಉನ್ನತ ಅಧಿ​ಕಾರಿಗಳಿಗೆ ಸೂಕ್ತ ದಾಖಲೆಗಳ ಮೂಲಕ ಮನವಿ ಸಲ್ಲಿಸಿದ್ದರು.

ಆದರೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಣ್ಯ ಪಡೆ ಮುಖ್ಯಸ್ಥರು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ​ಧಿಕಾರಿ ಪುನಾಟಿ ಶ್ರೀಧರ್‌, ಶಿವಮೊಗ್ಗ ವೃತ್ತ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾ​ಧಿಕಾರಿ ಕೆ.ಎಚ್‌. ನಾಗರಾಜ್‌ ಮತ್ತು ಡಾಟಾ ಎಂಟ್ರಿ ಆಪರೇಟರ್‌ ಸಿ.ಝಡ್‌. ಹಸೀನಾ ಬಾನು ವಿರುದ್ಧ ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾ​ಧೀಶರ ನ್ಯಾಯಾಲಯದಲ್ಲಿ ಮೇ 8ರಂದು ದೂರು ಸಲ್ಲಿಸಿದ್ದರು.

ಮೈಸೂರು ವಿವಿ ಬೋಧಕೇತರ ಸಿಬ್ಬಂದಿ ನೇಮಕಾತಿ ವಜಾ

ದೂರಿನ ವಿಚಾರಣೆ ನಡೆಸಿರುವ ನ್ಯಾಯಾಲಯ ಭ್ರಷ್ಟಾಚಾರ ನಿಗ್ರಹದಳದ ಶಿವಮೊಗ್ಗ ಪೊಲೀಸ್‌ ಉಪಾಧೀಕ್ಷಕರಿಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಅ.24ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

Close