ಪಲ್ಸರ್ ಬೈಕ್ ಮಾತ್ರ ಕಳ್ಳತನ ಮಾಡೋ ವಿಶೇಷ ಕಳ್ಳರಿವರು!
- ಪಲ್ಸರ್ ಬೈಕ್ ಮಾತ್ರ ಕಳ್ಳತನ ಮಾಡೋ ವಿಶೇಷ ಕಳ್ಳರಿವರು
- ಕದ್ದ 35 ಬೈಕ್ ಗಳ ಪೈಕಿ 30 ಬೈಕ್ ವಿಶೇಷ ವಿನ್ಯಾಸ ಮಾಡಿ ಪಲ್ಸರ್ ಬೈಕ್
- ಲೈಫ್ ಮಜಾ ಮಾಡಲು ಬೈಕ್ ಕದ್ದು ಮಾರಾಟ ಮಾಡ್ತಿದ್ರು.
- ಮೂವತ್ತೈದು ಲಕ್ಷ ಮೌಲ್ಯದ 35 ಬೈಕ್ ಕಳ್ಳತನ ಮಾಡಿದ ಭೂಪರು
ಬಳ್ಳಾರಿ (ಜು.21) ::ಇವರು ಅಂತಿಂತ ಕಳ್ಳರಲ್ಲ. ಬೈಕ್ ಗಳನ್ನು ಕದ್ದು ಮಾರಾಟ ಮಾಡಿ ಮಜಾ ಮಾಡೋದೇ ಇವರ ಉದ್ಯೋಗ. ಆದ್ರೇ, ಇವರು ಕದಿಯೋ ಬೈಕ್ ನಲ್ಲೂ ಒಂದಷ್ಟು ವಿಶೇಷತೆಯನ್ನು ಅಳವಡಿಸಿಕೊಂಡಿದ್ದಾರೆ. ಅದೇನೆಂದ್ರೇ, ಕೇವಲ ಪಲ್ಸರ್ ಬೈಕ್ ಮಾತ್ರ ಇವರು ಕಳ್ಳತನ ಮಾಡುತ್ತಾರೆ. ಇದಕ್ಕೆ ವಿಶೇಷ ಕಾರಣವೂ ಇದೆ. ಆದೇನೆದ್ರೇ, ವಿಶೇಷವಾಗಿ ವಿನ್ಯಾಸ ಮಾಡಿದ ಬೈಕ್ ಗಳನ್ನೇ ಟಾರ್ಗೇಟ್ ಮಾಡಿ ಕದ್ದು, ಬೈಕ್ ಮೇಲೆ ನಾಲ್ಕಾರು ದಿನ ಮಜಾ ಮಾಡೋದು ಕೈಯಲ್ಲಿ ಕಾಸು ಖಾಲಿಯಾದ ಕೂಡಲೇ ಬಂದಷ್ಟು ಹಣಕ್ಕೆ ಈ ಬೈಕ್ ಗಳನ್ನು ಮಾರಾಟ ಮಾಡ್ತಿದ್ರು. ಕಳೆದ ಆರು ತಿಂಗಳಿಂದ ಇದೇ ಕೆಲಸ ಮಾಡಿ ಮೂವತ್ತೈದು ಲಕ್ಷ ಮೌಲ್ಯದ ಮೂವತ್ತೈದು ಬೈಕ್ ಕದ್ದ ಖದೀಮರನ್ನು ಬಳ್ಳಾರಿ ಕೌಲ್ ಬಜಾರ್ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
18 ರಿಂದ 20 ವಯಸ್ಸಿನ ಯುಕವರಿಂದಲೇ ಬೈಕ್ ಕಳ್ಳತನ: ಇನ್ನೂ ಆಗ ತಾನೇ ಮುಖದ ಮೇಲೆ ಮೀಸೆ ಮೂಡೋ ವಯಸ್ಸು. ಓದಿಲ್ಲ ಬರೆದಿಲ್ಲ. ಹೇಳೋರು ಕೇಳೋರು ಯಾರು ಇಲ್ಲ. ಹೀಗಾಗಿ ಸಂಬಂಧಿಕರಾಗಿಯೇ ಇರೋ ನಾಲ್ವರು ಯುವಕರು ಕಳೆದ ಆರು ತಿಂಗಳ ಹಿಂದೆ ಷೋಕಿ ಮಾಡಲು ಬೈಕ್(Bike) ವೊಂದನ್ನು ಕದ್ದರು. ನಂತರ ಅದರಿಂದ ಒಂದಷ್ಟು ಊರನ್ನು ಸುತ್ತಿದ ಈ ಯುವಕರು ನಂತರದ ಅದನ್ನು ಮಾರಾಟ(Sale) ಮಾಡಿದ ಹಣದಿಂದ ಕುಡಿದು ತಿಂದು ಮಜಾ ಮಾಡಿದ್ರು. ಆರಂಭದಲ್ಲಿ ಶೋಕಿಗಾಗಿ ಮಾಡಿದ ಕೃತ್ಯ ನಂತರ ಇವರಿಗೆ ಅದೇ ಹವ್ಯಾಸವಾಗಿ ಬಿಟ್ಟಿತು. ಒಂದರ ನಂತರ ಮತ್ತೊಂದು ಬೈಕ್ ಕದಿಯೋ ಮೂಲಕ ಸರಿಸುಮಾರ ಮೂವತ್ತೈದು ಬೈಕ್ ಕದ್ದು, ಮಾರಾಟ ಮಾಡೋ ಮೂಲಕ ನಿತ್ಯವೂ ಬಳ್ಳಾರಿ, ಹೊಸಪೇಟೆ ಸೇರಿದಂತೆ ಆಂಧ್ರದಲ್ಲೂ ಓಡಾಟ ಮಾಡಿ ಲೈಫ್ ಎಂಜಾಯ್ ಮಾಡಿದ್ದಾರೆ.
ಪೊಲೀಸರ ಸೋಗಿನಲ್ಲಿ ಬಂದು ಚಿನ್ನಾಭರಣ ಕದ್ದು ಪರಾರಿಯಾದ ಖದೀಮರು!
ಕದ್ದ 35 ಬೈಕ್ಗಳ ಪೈಕಿ 30 ಪಲ್ಸರ್ ಬೈಕ್ ಗಳು: ಕಳೆದ ಮೂರ್ನಾಲ್ಕು ತಿಂಗಳಲ್ಲಿ 35 ಕ್ಕೂ ಹೆಚ್ಚು ಬೈಕ್ ಕಳ್ಳತನ ಮಾಡಿದ್ದು, ಇದರಲ್ಲಿ 30ಕ್ಕೂ ಹೆಚ್ಚು ಬೈಕ್ ಗಳು ಪಲ್ಸರ್(Pulsar) ಅನ್ನೋದೇ ವಿಶೇಷ. ಅಬ್ದುಲ್ ರೆಹಮಾನ್(Abdul Rehman), ಮೊಹಮ್ಮದ್ ಸುಹೇಲ್(Mohmed suhail), ಶೇಖ್ ಅಮನ್(Saikh aman), ಹೈದರ್ ಅಲಿ(Hyder ali) ಎನ್ನುವ ನಾಲ್ವರು ಬಂಧಿಸಿ ವಿಚಾರಣೆ ಮಾಡಿದಾಗ ಲೈಫ್ ಎಂಜಾಯ್(Life Enjoy) ಮಾಡಲು ಬೈಕ್ ಕಳ್ಳತನ ಮಾಡೋದಾಗಿ ಹೇಳಿಕೊಂಡಿದ್ದಾರೆ. ಮೊದಲಿಗೆ ಒಂದು ಬೈಕ್ ಟಾರ್ಗೇಟ್ ಮಾಡೋದು ಆ ಬೈಕ್ ಒಂದು ದಿನದಲ್ಲಿ ಎಲ್ಲಿಲ್ಲಿಗೆ ಹೋಗ್ತದೆ ಯಾವ ಯಾವ ಸ್ಥಳದಲ್ಲಿ ಎಷ್ಟೇಷ್ಟು ಹೊತ್ತು ನಿಲ್ಲುತ್ತದೆ ಅನ್ನುವ ಎಲ್ಲ ಮಾಹಿತಿಯನ್ನು ಓರ್ವ ಆರೋಪಿ ಫಾಲೋ ಆಪ್ ಮಾಡಿ ಮಾಹಿತಿಯನ್ನು ಪಡೆಯುತ್ತಾನೆ. ನಂತರ ನಿತ್ಯ ಇದೇ ಸಮಯಕ್ಕೆ ಇಲ್ಲಿಯೇ ಬೈಕ್ ನಿಲ್ಲುತ್ತದೆ ಅನ್ನೋದನ್ನ ಖಾತರಿ ಮಾಡಿಕೊಂಡು ಬೈಕ್ ನ್ನು ಕಳ್ಳತನ ಮಾಡುತ್ತಿದ್ರು. ಕೆಲವನ್ನು ರಾತ್ರಿ ವೇಳೆ ಕದ್ದರೇ ಬಹುತೇಕ ಬೈಕ್ ಗಳನ್ನು ಹಗಲಿನಲ್ಲಿಯೇ ಕಳ್ಳತನ ಮಾಡುತ್ತಿದ್ರು. ಇನ್ನೂ ಕೆಲವು ಕಡೆಗಳಲ್ಲಿ ಕಳ್ಳತನ ಮಾಡಿರೋ ಸಿಸಿ ಟಿವಿಯ ವಿಶುವಲ್ಸ್ ಕೂಡ ಲಭ್ಯವಾಗಿದೆ.
Bangalore Car Thieves: ಟೆಕ್ನಾಲಜಿ ಬಳಸಿ ಕಾರು ಎಗರಿಸುತ್ತಿದ್ದವ ಅಂದರ್
ನಿರಂತರ ಫಾಲೋ ಅಪ್ ಮಾಡಿ ಬಂಧಿಸಿದ ಪೊಲೀಸರು: ಇನ್ನೂ ಸಿಸಿ ಟಿವಿ(CCTV) ಆಧಾರದಲ್ಲಿ ಪೊಲೀಸರು(Police) ಈ ನಾಲ್ವರು ಆರೋಪಿಗಳ ಮೇಲೆ ನಿರಂತರವಾಗಿ ಕಣ್ಣಿಡೋ ಮೂಲಕ ಚಲನವಲನವನ್ನು ಗಮನಿಸಿ ಒಬ್ಬೊಬ್ಬರನ್ನಾಗಿ ಬಂಧಿಸಿದ್ದಾರೆ. ಇದರಲ್ಲಿ ಓರ್ವ ಆರೋಪಿ ಆಂಧ್ರದವರಾಗಿದ್ದು, ಮೂವರು ಬಳ್ಳಾರಿಯ ಕೌಲ್ ಬಜಾರ್ ನಿವಾಸಿಯಾಗಿದ್ದಾರೆಂದು ಹೆಚ್ಚುವರಿ ಎಸ್ಪಿ ಗುರು ಮೂತ್ತೂರು ಅವರು ಮಾಹಿತಿ ನೀಡಿದ್ದಾರೆ.