ಪೊಲೀಸರ ಸೋಗಿನಲ್ಲಿ ಬಂದು ಚಿನ್ನಾಭರಣ ಕದ್ದು ಪರಾರಿಯಾದ ಖದೀಮರು!

ಖದೀಮರು ಕಳ್ಳತನಕ್ಕೆ ಏನೆಲ್ಲ ವೇಷ ಹಾಕುತ್ತಾರೆ ನೊಡಿ! ಪೊಲೀಸರ ವೇಷದಲ್ಲಿಯೇ ಚಿನ್ನಾಭರಣ ದೋಚುತ್ತಿದ್ದಾರೆ. ಪೊಲೀಸರನ್ನೇ ಇವರು ಪೊಲೀಸರಾ? ಕಳ್ಳರಾ? ಎಂದು ಜನರು ಅನುಮಾನದಿಂದ ನೋಡಬೇಕಾದ ಕಾಲ!

chitradurga crime thieves came guise of police and stole gold jewelry  escaped rav

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜು.20) : ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯಾದ್ಯಂತ ನಕಲಿ ಪೊಲೀಸರ ಹಾವಳಿ ಮಿತಿ ಮೀರಿದೆ. ಮೊನ್ನೆ ತಾನೆ ಮೊಳಕಾಲ್ಮೂರು ತಾಲ್ಲೂಕಿನ ಆಸುಪಾಸಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನು ಅಡ್ಡಗಟ್ಟಿ ನಾವು ಪೊಲೀಸರು ಎಂದು ಚೆಕ್ ಮಾಡುವ ನೆಪದಲ್ಲಿ ಮಾರಾಕಾಸ್ತ್ರಗಳನ್ನು ತೋರಿಸಿ ಲಕ್ಷಾಂತರ ರೂ ದರೋಡೆ ಮಾಡ್ತಿದ್ದ ಖದೀಮರ ಗ್ಯಾಂಗ್ ಅಂದರ್ ಆಗಿದೆ. ಇನ್ನೂ ಈ ಪ್ರಕರಣ ಮಾಸುವ ಮುನ್ನವೇ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಟಿ. ನುಲೇನೂರ್ ಗ್ರಾಮದ ಗೇಟ್ ಬಳಿ ಪೊಲೀಸರ ಸೋಗಿನಲ್ಲಿ ವಂದ ಖದೀಮರಿಬ್ಬರು ರೈತರಿಗೆ ಯಾಮಾರಿಸಿ ಚಿನ್ನಾಭರಣ ದೋಚಿ ಪರಾರಿ ಆಗಿರುವ ಘಟನೆ ಬೆಳಕಿಗೆ ಬಂದಿದೆ.

ಚಿತ್ರದುರ್ಗ(Chitradurga) ಜಿಲ್ಲೆ ಹೊಳಲ್ಕೆರೆ(holalkere) ತಾಲೂಕಿನ ಟಿ.ನುಲೇನೂರು(T.Nulenooru) ಗ್ರಾಮದ ಬಳಿ, ಅನ್ನೇಹಾಳ್ ಗ್ರಾಮದ ವಿಶ್ವನಾಥ ಎಂಬುವರಿಗೆ ಖದೀಮರು ಮೋಸ ಮಾಡಿ ಪರಾರಿಯಾಗಿದ್ದಾರೆ. ಚಿತ್ರದುರ್ಗ ತಾಲೂಕಿನ ಅನ್ನೇಹಾಳ್ ಗ್ರಾಮದ ರೈತ ವಿಶ್ವನಾಥ್. ಅನ್ನೇಹಾಳ್ ಗ್ರಾಮದಿಂದ ಬೈಕಿನಲ್ಲಿ ಹೊಳಲ್ಕೆರೆಗೆ ತೆರಳುತ್ತಿದ್ದ ವಿಶ್ವನಾಥ್. ಚಿನ್ನಾಭರಣ ರಿಪೇರಿಗೆ ಕೊಂಡೊಯ್ಯುತ್ತಿದ್ದನು. ಬೈಕಿನಲ್ಲಿ ವಿಶ್ವನಾಥ್ ಬೆನ್ನು ಬಿದ್ದಿದ್ದ ಇಬ್ಬರು ಖದೀಮರು. ಸುಮಾರು 2ಲಕ್ಷ 50ಸಾವಿರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು. ಟಿ.ನುಲೇನೂರು ಬಳಿ ಪೊಲೀಸರೆಂದು ಹೇಳಿಕೊಂಡು ಬೈಕ್ ಗೆ ತಡೆ ಹಿಡಿದಿದ್ದಾರೆ. ಗಾಂಜಾ ಸಾಗಣೆ(Drugs supply) ಮಾಡುತ್ತಿದ್ದೀರೆಂದು ಪರಿಶೀಲನೆ ನಾಟಕ ಮಾಡಿ ಬೈಕ್ ನಲ್ಲಿದ್ದ ಚಿನ್ನಾಭರಣ ಬಟ್ಟೆಯೊಂದರಲ್ಲಿ ಕಟ್ಟಿಡುವ ನೆಪ ಮಾಡಿದ್ದಾರೆ. ಕಳ್ಳರಿದ್ದಾರೆಂದು ಎಚ್ಚರಿಸುವ ನೆಪದಲ್ಲಿ ಚಿನ್ನಾಭರಣ ದೋಚಿದ್ದಾರೆ ಕಳ್ಳರು.

ಬೆನ್ನಟ್ಟಿದ ಐವರು ಕಾಮುಕರು : ಶಾಲಾ ಕಟ್ಟಡದಿಂದ ಹಾರಿದ ಬಾಲಕಿ

ಕೆಲ ಹೊತ್ತಿನ ಬಳಿಕ ರೈತರು(Farmers) ಎಚ್ಚೆತ್ತು ಬೈಕ್ ಅನ್ನು ಪರಿಶೀಲಿಸಿದಾಗ ಚಿನ್ನಾಭರಣ ಮಾಯವಾಗಿದೆ. ಇದನ್ನು ಕಂಡು ಗಾಬರಿಯಾದ ರೈತ ವಿಶ್ವನಾಥ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಹೊಳಲ್ಕೆರೆ ಸಿಪಿಐ ರವೀಶ್(CPI Raveesh) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಕುರಿತು ಚಿತ್ರಹಳ್ಳಿ ಪೊಲೀಸ್ ಠಾಣೆ(Chitrahalli police station) ಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೂ ಕೋಟೆನಾಡಿನಲ್ಲಿ ಈ ರೀತಿಯ ಘಟನೆಗಳು ನಿನ್ನೆ ಮೊನ್ನೆಯದಲ್ಲ. ಈ ಹಿಂದೆ ಕಳೆದ ಮೂರು ತಿಂಗಳ‌ ಹಿಂದಷ್ಟೇ ಇದೇ ಚಿತ್ರಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಓರ್ವ ನಕಲಿ ಪೊಲೀಸ್ ವೇಷ ಧರಿಸಿ, ಅನೇಕ ಗ್ರಾಮೀಣ ಭಾಗದ ರೈತರಿಗೆ ಯಾಮಾರಿಸಿ ಹಣ ಪೀಕಿದ್ದವನಿಗೆ ಪೊಲೀಸರು ಎಡೆಮುರಿಕಟ್ಟಿದ್ದರು. ಆದ್ರೂ ಮತ್ತೊಮ್ಮೆ ಇದೇ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿರೋದು ಅದೇ ಗುಂಪಿನ ಮೇಲೆ ಅನುಮಾನ ಮೂಡಿ ಬಂದಿದೆ. 

ಸಿಡಿಲು ಬಡಿದ ತಂಬಿಗೆ ಹೆಸರಿನಲ್ಲಿ ವಂಚನೆಗೆ ಯತ್ನ: ಐವರು ಆರೋಪಿಗಳ ಬಂಧನ

ಅದೇನೇ ಇರ್ಲಿ ಗ್ರಾಮೀಣ ಭಾಗಗಳಲ್ಲಿ ಜನರು ಪೊಲೀಸರು ಅಂದ್ರೆ ಸಾಕು ಸಿಕ್ಕಾಪಟ್ಟೆ ಭಯ ಪಡ್ತಾರೆ, ಖಾಕಿ ಧರಿಸಿ ಬಂದವರಿಗೆ ಗೌರವ ಕೊಡ್ತಾರೆ. ಆದ್ರೆ ಅದನ್ನೇ ತಪ್ಪಾಗಿ ಅರ್ಥೈಸಿಕೊಳ್ಳಲು ಪ್ರಯತ್ನ ಮಾಡ್ತಿರೊಕ ಕಳ್ಳ ಖದೀಮರ ಗ್ಯಾಂಗ್ ಈ ರೀತಿ ಬಡ ರೈತರಿಗೆ ಮೋಸ ಮಾಡ್ತಿರೋದು ಖಂಡನೀಯ. ಕೂಡಲೇ ಪೊಲೀಸರ ಇಂತಹ ಕತರ್ನಾಕ್ ಕಳ್ಳರಿಗೆ ಎಡೆಮುರಿಕಟ್ಟಿ ಇನ್ಮುಂದೆ ಈ ರೀತಿ ಪ್ರಕರಣಗಳು ಆಗದ ರೀತಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
 

Latest Videos
Follow Us:
Download App:
  • android
  • ios