*   2ನೇ ಡೋಸ್‌ ಪಡೆದವರ ಸಂಖ್ಯೆ ಶೇ.70ಕ್ಕೆ ಏರಿಕೆ*   ಕೋವಿಡ್‌ ಪರೀಕ್ಷೆ, ಲಸಿಕಾಕರಣ ಹೆಚ್ಚಳ*   ಸಂಪರ್ಕಿತರ ಪತ್ತೆಯಲ್ಲೂ ಉತ್ತಮ ಕಾರ್ಯ 

ಬೆಂಗಳೂರು(ಡಿ.12): ನಗರದಲ್ಲಿ ಕೊರೋನಾ(Coronavirus) ಹೊಸ ತಳಿ ಒಮಿಕ್ರೋನ್‌(Omicron) ಪತ್ತೆ ನಂತರ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಾಗಿದ್ದು, ಎರಡನೇ ಡೋಸ್‌ ಲಸಿಕೆ ಪಡೆದವರ ಸಂಖ್ಯೆ ಶೇಕಡ 70ಕ್ಕೆ ಏರಿಕೆಯಾಗಿದೆ. ಶನಿವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಬಿಬಿಎಂಪಿ(BBMP) ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gaurav Gupta), ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್‌-19(Covip-19) ಸೋಂಕು ಇಳಿಮುಖವಾಗಿದೆ. ಆದರೂ ಕಡ್ಡಾಯವಾಗಿ ಮಾಸ್ಕ್‌(Mask) ಧರಿಸಿ ಲಸಿಕೆ(Vaccine) ಪಡೆಯಲೇಬೇಕು. ಎರಡು ಡೋಸ್‌ ಲಸಿಕೆ ಹಾಕಿಸಿಕೊಳ್ಳುವುದರಿಂದ ಕೊರೋನಾ ಸೋಂಕು ತಗುಲಿದರೂ ಹೆಚ್ಚು ಪರಿಣಾಮ ಇರುವುದಿಲ್ಲ. ಕೋವಿಡ್‌ ಸೋಂಕಿನ ಗುಣಲಕ್ಷಣಗಳು ಸೌಮ್ಯವಾಗಿರಲಿವೆ ಎಂದರು.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿರುವ ಸೋಂಕಿತರ ಸಂಖ್ಯೆ ಬೆಂಗಳೂರಿನಲ್ಲಿ(Bengaluru) ಕಡಿಮೆ ಇದೆ. ಈವರೆಗೆ ಕೇವಲ 5 ಮಂದಿ ಪ್ರಯಾಣಿಕರಲ್ಲಿ(Passengers) ಮಾತ್ರ ಸೋಂಕು ದೃಢಪಟ್ಟಿದೆ. ಎಲ್ಲೆಡೆ ಕೊರೋನಾ ಪರೀಕ್ಷೆ(Covid Test) ಹೆಚ್ಚಿಸಲಾಗಿದೆ. ಲಸಿಕೆ ಪೂರೈಕೆ ಪ್ರಮಾಣವನ್ನೂ ಕೂಡ ಜಾಸ್ತಿ ಮಾಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಒಮಿಕ್ರೋನ್‌ ಹೊಸ ಪ್ರಕರಣಗಳು ಕಂಡು ಬಂದಿಲ್ಲ. ಈಗಾಗಲೇ ಕೋವಿಡ್‌ ದೃಢಪಟ್ಟವರ ಸಂಪರ್ಕಿತರನ್ನು ಪತ್ತೆ ಮಾಡಿ ಪರೀಕ್ಷೆಗೊಳಪಡಿಸುತ್ತಿದ್ದು, ಸೋಂಕು ಹರಡದಂತೆ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.

Covid-19 Death: ವೈರಸ್‌ಗೆ ಬಲಿಯಾದ ಕುಟುಂಬಗಳಿಗೆ ಇನ್ನೂ ಸಿಗದ ಪರಿಹಾರ..!

ಜನರಿಗೆ ಬೂಸ್ಟರ್‌ ಡೋಸ್‌(Booster Dose) ಕೊಡಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ಕೇಂದ್ರ ಸರ್ಕಾರದ(Central Government) ಮಟ್ಟದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಸರ್ಕಾರಗಳು ಕೈಗೊಂಡ ನಿರ್ಧಾರಗಳನ್ನು ಮಾತ್ರ ಪಾಲಿಕೆ ಅನುಷ್ಠಾನಕ್ಕೆ ತರುತ್ತದೆ. ಸದ್ಯಕ್ಕೆ ಅಂತಹ ಯಾವುದೇ ನಿರ್ಧಾರವಾಗಿಲ್ಲ ಎಂದು ಹೇಳಿದರು.

ಹೊಸ ವರ್ಷಾಚರಣೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ

ಹೊಸ ವರ್ಷ ಆಚರಣೆ(New Year Celebration) ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಕೋವಿಡ್‌ ನಮ್ಮ ಮಧ್ಯದಲ್ಲಿದ್ದು, ಆರೋಗ್ಯಕ್ಕೆ(Health) ಹೆಚ್ಚಿನ ಆದ್ಯತೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಈ ಬಾರಿ ಹೊಸ ವರ್ಷ ಆಚರಣೆ ನಿಬಂಧನೆಗಳನ್ನು ಒಳಪಟ್ಟಿರಬೇಕೋ ಬೇಡವೋ ಎನ್ನುವ ಬಗ್ಗೆ ಕೆಲವು ಅನುಮಾನಗಳು ಇವೆ. ಆದರೆ ಎಲ್ಲರೂ ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ(Social Distance) ಕಾಯ್ದುಕೊಳ್ಳುವ ಮೂಲಕ ಸೋಂಕು ಹರಡದಂತೆ ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು.

ಕ್ರಿಸ್‌ಮಸ್‌ ಆಚರಣೆಗೆ ಷರತ್ತುಬದ್ಧ ಅನುಮತಿ

ಕ್ರಿಸ್‌ಮಸ್‌(Christmas) ಆಚರಣೆಗೆ ಯಾವುದೇ ವಿಶೇಷ ಮಾರ್ಗಸೂಚಿ ಇರುವುದಿಲ್ಲ, ಆದರೆ ಕಡ್ಡಾಯವಾಗಿ ಕೊರೋನಾ ಮಾರ್ಗಸೂಚಿಗಳನ್ನು(Corona Guidelines) ಅನುಸರಿಸಲೇಬೇಕು ಎಂದು ಬಿಬಿಎಂಪಿ ತಿಳಿಸಿದೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ಮುಖ್ಯ ಆಯುಕ್ತ ಗೌರವ್‌ಗುಪ್ತಾ, ಕ್ರಿಸ್‌ಮಸ್‌ ಆಚರಣೆಗೆ ಅನುಮತಿ ನೀಡಲಾಗಿದ್ದು, ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಚರ್ಚ್‌ಗಳ ಬಳಿ ಜನದಟ್ಟಣೆ ಹೆಚ್ಚದಂತೆ ನೋಡಿಕೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

Omicron Threat: ವಿದೇಶದಿಂದ ಬಂದ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಮೇಲೆ ಒಲವು

ಚರ್ಚ್‌ಗಳಲ್ಲಿ(Chruch) ಸಾಮಾಜಿಕ ಅಂತರ, ಪ್ರಾರ್ಥನೆ ವೇಳೆ ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕು. ಎರಡು ಡೋಸ್‌ ಲಸಿಕೆ ಪಡೆದಿರಲೇಬೇಕು ಎಂಬ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಮುಖ್ಯವಾಗಿ ಸ್ಯಾನಿಟೈಸರ್‌(Sanitizer) ಬಳಕೆ ಮಾಡಬೇಕು ಎಂದು ಅವರು ಹೇಳಿದರು.

ಹೆಚ್ಚುತ್ತಿರುವ ಕೊರೋನಾ ಸೋಂಕು ಪ್ರಕರಣ ಮತ್ತು ಒಮಿಕ್ರೋನ್‌ ಭೀತಿಯಿಂದಾಗಿ ನಗರದಾದ್ಯಂತ ಕೊರೋನಾ ಪರೀಕ್ಷೆ ಹೆಚ್ಚಿಸಲಾಗಿದೆ. ಪ್ರತಿನಿತ್ಯ 40ರಿಂದ 50 ಸಾವಿರಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗುತ್ತಿದೆ. ಅವಶ್ಯಕತೆ ಬಿದ್ದರೆ ಪರೀಕ್ಷೆ ಪ್ರಮಾಣವನ್ನು ಇನ್ನೂ ಹೆಚ್ಚಿಸಲಾಗುವುದು. ರೋಗ ಲಕ್ಷಣ ಇದ್ದವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಂಡು ಹೋಂ ಐಸೋಲೇಷನ್‌ನಲ್ಲಿ ಇರಬೇಕು. ನೆಗಡಿ, ಕೆಮ್ಮು ಮತ್ತಿತರ ರೋಗ ಲಕ್ಷಣಗಳಿಂದ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಕಡ್ಡಾಯವಾಗಿ ಕೊರೋನಾ ತಪಾಸಣೆ ನಡೆಸುವಂತೆ ವೈದ್ಯರಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.