Asianet Suvarna News Asianet Suvarna News

ಕಲಬುರಗಿಗೆ ಹೊಸ ಆಸ್ಪತ್ರೆ ಮಂಜೂರು ಇಲ್ಲ: ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್

ಕಲಬುರಗಿ ಜಿಮ್ಸ್‌ಗೆ ಮಂಜೂರಾದ ವೃಂದ ಎ- 987, ಬಿ- 12, ಸಿ- 362 ಹಾಗೂ ಡಿ- 395 ರ ಪೈಕಿ, ಎ- 64, ಬಿ- 7, ಸಿ- 126 ಹಾಗೂ ಡಿ- 99 ಹುದ್ದೆಗಳಲ್ಲಿ ಒಟ್ಟು 316 ಸಿಬ್ಬಂದಿ ಕೆಲಸದಲ್ಲಿದ್ದಾರೆ. ಇನ್ನುಳಿದಂತೆ 552 ಹುದ್ದೆಗಳಲು ಖಾಲಿ ಇವೆ ಎಂದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್

No New Hospital Sanction for Kalaburagi Says Minister Dinesh Gundu Rao grg
Author
First Published Dec 13, 2023, 10:30 PM IST

ಕಲಬುರಗಿ(ಡಿ.13):  ಕಲಬುರಗಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆ 2016ರಲ್ಲೇ ಜಿಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆ ಜಿಮ್ಸ್‌ಗೆ ಹಸ್ತಾಂತರಗೊಂಡಿದೆ. ಇಲ್ಲಿರುವ 868 ಅಧಿಕಾರಿ, ಸಿಬ್ಬಂದಿ ಮಂಜೂರಾದ ಹುದ್ದೆಗಳ ಪೈಕಿ 362 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ 552 ವಿವಿಧ ದರ್ಜೆಯ ಹುದ್ದೆಗಳು ಖಾಲಿ ಇವೆ ಎಂದು ರಾಜ್ಯದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಹೇಳಿದ್ದಾರೆ.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಚಲಿಗಾಲದ ಅಧಿವೇಶನದಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಂಪ್ರಭು ಪಾಟೀಲರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಹೊಸತಾಗಿ ಸರ್ಕಾರಿ ಆಸ್ಪತ್ರೆ ಕಲಬುರಗಿಗೆ ಮಂಜೂರು ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಯ ಮಣಿಕಂಠ ರಾಥೋಡ್ ಪತ್ರಿಕಾಗೋಷ್ಠಿ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ದಾಳಿ!

ಕಲಬುರಗಿ ಜಿಮ್ಸ್‌ಗೆ ಮಂಜೂರಾದ ವೃಂದ ಎ- 987, ಬಿ- 12, ಸಿ- 362 ಹಾಗೂ ಡಿ- 395 ರ ಪೈಕಿ, ಎ- 64, ಬಿ- 7, ಸಿ- 126 ಹಾಗೂ ಡಿ- 99 ಹುದ್ದೆಗಳಲ್ಲಿ ಒಟ್ಟು 316 ಸಿಬ್ಬಂದಿ ಕೆಲಸದಲ್ಲಿದ್ದಾರೆ. ಇನ್ನುಳಿದಂತೆ 552 ಹುದ್ದೆಗಳಲು ಖಾಲಿ ಇವೆ ಎಂದು ಸಚಿವರು ಹೇಳಿದ್ದಾರೆ.

ಜಿಮ್ಸ್‌ನಲ್ಲಿ ಖಾಲಿ ಇರುವ ಹುದ್ದಗಳ ಪೈಕಿ ವೃಂದ ಎ- 14, ಬಿ- 5, ಸಿ- 237, ಡಿ, 296 ಸೇರಿದಂತೆ 552 ಹುದ್ದೆಗಳು ಖಾಲಿ ಇವೆ. 1, 250 ಹಾಸಿಗೆಗಳ ಸಾಮರ್ಥ್ಯದ ಜಿಲ್ಲಾಸ್ಪತ್ರೆಯಾಗಿ ಜಿಮ್ಸ್‌ ಕೆಲಸ ಮಾಡತ್ತಲಿದೆ. ತಕ್ಷಣ ಖಾಲಿ ಹುದ್ದೆ ಭರಿಸುವ ಮೂಲಕ ಸದರಿ ಆಸ್ಪತ್ರೆ ರೋಗಿಗಳಿಗೆ ಇನ್ನೂ ಹೆಚ್ಚಿನ ಅನುಕೂಲವಾಗುವಂತೆ ಮಾಬೇಕೆಂದು ಶಾಸಕರಾದ ಅಲ್ಲಂಪ್ರಭು ಪಾಟೀಲರು ಸದನದಲ್ಲಿ ಪ್ರಶ್ನೆ ಎತ್ತುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.

Follow Us:
Download App:
  • android
  • ios