ಗರ್ಭಿಣಿ ಆದಾಗೆಲ್ಲಾ ಗಂಡನಿಗೆ ಅನುಮಾನ; ಅಪ್ಪ-ಅಮ್ಮನೊಂದಿಗೆ ಸೇರಿ ಪತ್ನಿಗೆ ಕಿರುಕುಳ
ಬೆಂಗಳೂರಿನಲ್ಲಿ ಪತ್ನಿಯ ಮೇಲೆ ಅನುಮಾನಗೊಂಡು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ ಪತಿ ಅನುರಾಗ್ ಪಾಂಡೆ ವಿರುದ್ಧ ಜ್ಯೋತಿ ಎಂಬುವವರು ದೂರು ದಾಖಲಿಸಿದ್ದಾರೆ. ಗರ್ಭಿಣಿಯಾಗಿದ್ದಾಗ ಕಿರುಕುಳ ಹೆಚ್ಚಾಗಿದ್ದು, ಪತಿ ಹಾಗೂ ಆತನ ಪೋಷಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಅನುಮಾನ ಪಿಶಾಚಿ ಗಂಡ
ಅನುಮಾನದಿಂದ ಪತ್ನಿಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ವ್ಯಕ್ತಿ ವಿರುದ್ಧ ದಕ್ಷಿಣ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಗಂಡ ಮತ್ತು ಆತನ ತಂದೆ-ತಾಯಿ ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾರೆ.
2017ರಲ್ಲಿ ಮದುವೆ
2017ರಲ್ಲಿ ಅನುರಾಗ್ ಪಾಂಡೆ ಎಂಬಾತನೊಂದಿಗೆ ಉತ್ತರ ಪ್ರದೇಶ ಮೂಲದ ಜ್ಯೋತಿ ಎಂಬವರ ಮದುವೆಯಾಗಿತ್ತು. ಅನುರಾಗ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಪತ್ನಿಯನ್ನು ಸಹ ಇಲ್ಲಿಗೆ ಕರೆದುಕೊಂಡು ಬಂದಿದ್ದನು. ಆರಂಭದ ನಾಲ್ಕು ವರ್ಷ ಪತ್ನಿಯನ್ನು ಅನುರಾಗ್ ಚೆನ್ನಾಗಿಯೇ ನೋಡಿಕೊಂಡಿದ್ದನು.
ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ
ಮದುವೆಯಾದ ನಾಲ್ಕು ವರ್ಷಕ್ಕೆ ಜ್ಯೋತಿ ಗರ್ಭಿಣಿಯಾಗುತ್ತಾರೆ. ಗರ್ಭಿಣಿಯಾದಾಗಿನಿಂದ ಪತ್ನಿ ಮೇಲೆ ಅನುಮಾನಗೊಂಡು ವಿನಾಕಾರಣ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದಾನೆ. ಗಂಡು ಮಗು ಜನಿಸಿದ ಬಳಿಕ ಕೆಲ ದಿನಗಳವರೆಗೆ ಪತ್ನಿಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದನು.
ಅನುಮಾನಿಸಿ ಕಿರುಕುಳ
ಎರಡನೇ ಬಾರಿ ಗರ್ಭಿಣಿಯಾದಾಗ ಮತ್ತೆ ಪತ್ನಿಯನ್ನು ಅನುಮಾನಿಸಿ ಕಿರುಕುಳ ನೀಡಲಾರಂಭಿಸಿದ್ದಾನೆ. ತಮಿಳುನಾಡಿನ ಶಿವ ಕಾಶಿಯಲ್ಲಿರುವಾಗ ಅತ್ತೆ ರಾಣಿ ಪಾಂಡೆ ಮತ್ತು ಮಾವ ರಾಮಪ್ರಸಾದ್ ಪಾಂಡೆ ಸೊಸೆಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿರುವ ಆರೋಪವನ್ನು ಜ್ಯೋತಿ ಮಾಡಿದ್ದಾರೆ.
ಇದನ್ನೂ ಓದಿ: ಹಾಸನ ಅಪಘಾತ: ಬುಲೆಟ್ ಬೈಕ್‌ನಿಂದ ಬಿದ್ದು 23 ವರ್ಷದ ಯುವತಿ ಸಾವು, ಗೆಳತಿ ಸ್ವಾತಿ ಗಂಭೀರ
ಮೂವರ ವಿರುದ್ಧ ದೂರು ದಾಖಲು
9 ತಿಂಗಳು ಗರ್ಭಿಣಿ ಅಂತಾನೂ ನೋಡದೇ ಕಿರುಕುಳ ನೀಡುವುದನ್ನು ಅನುರಾಗ್ ಪಾಂಡೆ ಮುಂದುವರಿಸಿದ್ದನು. ಇದರಿಂದ ಬೇಸತ್ತ ಜ್ಯೋತಿ ಗಂಡನಾದ ಅನುರಾಗ್ ಪಾಂಡೆ, ಅತ್ತೆ ರಾಣಿ ಪಾಂಡೆ, ಮಾವ ರಾಮಪ್ರಸಾದ್ ಪಾಂಡೆರವರ ವಿರುದ್ಧ ಸೂಕ್ತ ಕಾನೂನು ರೀತ ಕ್ರಮ ಜರುಗಿಸಬೇಕೆಂದು ಎಂದು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Video: ಪೈಲಟ್ ಪತಿಯ ಕ್ಯೂಟ್ ವಿಡಿಯೋ ನೋಡಿ ಗಂಡ ಅಂದ್ರೆ ಹಿಂಗಿರಬೇಕು ಅಂದ್ರು ಮಹಿಳೆಯರು

