ಹಾಸನ ಅಪಘಾತ: ಬುಲೆಟ್ ಬೈಕ್‌ನಿಂದ ಬಿದ್ದು 23 ವರ್ಷದ ಯುವತಿ ಸಾವು, ಗೆಳತಿ ಸ್ವಾತಿ ಗಂಭೀರ
ಭಾನುವಾರ ರಾತ್ರಿ ನಡೆದ ಬೈಕ್ ಅಪಘಾತದಲ್ಲಿ ಪ್ರಿಯಾ (23) ಎಂಬ ಯುವತಿ ಮೃತಪಟ್ಟಿದ್ದಾರೆ. ರಸ್ತೆಯಲ್ಲಿದ್ದ ಹಂಪ್ ಕಾಣದ ಕಾರಣ ನಿಯಂತ್ರಣ ತಪ್ಪಿ ಬಿದ್ದಿದ್ದು, ಹೆಲ್ಮೆಟ್ ಧರಿಸದ ಕಾರಣ ತಲೆಗೆ ತೀವ್ರ ಪೆಟ್ಟಾಗಿ ಸಾವನ್ನಪ್ಪಿದ್ದಾರೆ. ಜೊತೆಗಿದ್ದ ಮತ್ತೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹಾಸನ ಅಪಘಾತ
ಚಲಾಯಸುತ್ತಿದ್ದ ಬೈಕ್‌ನಿಂದ ಬಿದ್ದು ಯುವತಿಯೋರ್ವಳು ಸಾವನ್ನಪ್ಪಿರು ಘಟನೆ ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದಿದೆ. ಇದೇ ಬೈಕ್‌ನಲ್ಲಿದ್ದ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಹಂಪ್ ಕಾಣದ ಹಿನ್ನೆಲೆ ಅಪಘಾತ
ಸತ್ಯಮಂಗಲ ಬಡಾವಣೆಯ ಪ್ರಿಯಾ (23) ಮೃತ ಯುವತಿ. ಗಾಯಾಳು ಸ್ವಾತಿಯನ್ನು (24) ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ರಸ್ತೆಯಲ್ಲಿದ್ದ ಹಂಪ್ ಕಾಣದ ಹಿನ್ನೆಲೆ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಹೆಲ್ಮೆಟ್ ಹಾಕಿರಲಿಲ್ಲ
ಯುವತಿಯರಿಬ್ಬರು ಹೆಲ್ಮೆಟ್ ಧರಿಸದ ಕಾರಣ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಪ್ರಿಯಾ ಮತ್ತು ಸ್ವಾತಿ ಹೆಲ್ಮೆಟ್ ಧರಿಸದೆ ಬುಲೆಟ್ ರೈಡ್ ಮಾಡುತ್ತಿದ್ದರು. ಯುವತಿಯರಿಬ್ಬರು ಎಂಸಿಎ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದರು.
ಇದನ್ನೂ ಓದಿ: ಸತ್ತಂತೆ ಕಥೆ ಕಟ್ಟಿದ್ದ ಹಾಸನದ ವಿವಾಹಿತೆ: ಪ್ರಿಯಕರ ಡೇವಿಡ್‌ಗೆ ಕೈ ಕೊಟ್ಟು ಗಂಡನ ಜೊತೆ ಹೋಗಲು ಒಪ್ಪಿದ ಪ್ರಿಯಾಂಕ!
ಹೊರವಲಯದ ರಸ್ತೆ
ಹೊರವಲಯದ ರಸ್ತೆಯ ಡಾಂಬರು ಕಿತ್ತು ಹೋಗಿದ್ದು, ಹಂಪ್ ಬಳಿಯಲ್ಲಿ ತಗ್ಗುಗಳಾಗಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಅಪಘತಗಳು ನಡೆಯುತ್ತಿರುತ್ತವೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.
ಇದನ್ನೂ ಓದಿ: ತಾನೇ ಹೆಣೆದ ಬಲೆಯಲ್ಲಿ ಸಿಲುಕಿದ್ದೇಗೆ ಐನಾತಿ ಪ್ರಿಯಾಂಕಾ ಆಂಟಿ? ನೌಟಂಕಿ ಲೇಡಿ ಎಡವಿದ್ದೆಲ್ಲಿ?

