ಮೈಸೂರು(ಜ.04): ಮಕ್ಕಳಿಲ್ಲದೆ ಮರುಗುವ ಬಹಳಷ್ಟು ಜನರಿರುವಾಗ ಮೈಸೂರಿನಲ್ಲಿ ಮಾತ್ರ ನವಜಾತ ಶಿಶುವನ್ನು ನದಿಗೆಸೆಯಲಾಗಿದೆ. ಮೈಸೂರಿನ ಕಪಿಲಾ ನದಿಯಲ್ಲಿ ಹಸುಗೂಸಿನ ಮೃತದೇಹ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

ನವಜಾತ ಶಿಶುವನ್ನು ನದಿಗೆ ಬಿಸಾಡಿದ ಪಾಪಿ ತಾಯಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ತಿ.ನರಸೀಪುರ ಪಟ್ಟಣದ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯ ಬಳಿ ಕಪಿಲಾ ನದಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ.

ತುಮಕೂರಲ್ಲಿ ಭೀಕರ ರಸ್ತೆ ಅಪಘಾತ: ಮೂವರು ಸಜೀವ ದಹನ

ಜನಿಸಿದ ಕೆಲ ಗಂಟೆಗಳಲ್ಲೇ ಮಗುವನ್ನು ನದಿಗೆ ಎಸೆಯಲಾಗಿದೆ ಎನ್ನಲಾಗುತ್ತಿದೆ. ಕಪಿಲಾ ನದಿಯಲ್ಲಿ ತೇಲುತ್ತಿರುವ ಎಳೆ ಹಸುಗೂಸಿನ ಮೃತದೇಹವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರವಾಸಕ್ಕೆ ಆಗಮಿಸಿದ್ದ ಬಸ್ ಅಪಘಾತ : ವಿದ್ಯಾರ್ಥಿ ಸಾವು, 12 ಜನರು ಗಂಭೀರ