ಕೊರೋ​ನಾ​ತಂಕ: 15 ನಿಮಿ​ಷ​ಕ್ಕಿಂತ ಹೆಚ್ಚು ಹೊತ್ತು ನಮಾಜ್ ಮಾಡುವಂತಿಲ್ಲ

ಕೊರೋ​ನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವ ಪ್ರಯುಕ್ತ ಉಡುಪಿ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಶುಕ್ರವಾರ ಜುಮಾ ನಮಾಜ್‌ನ್ನು ಕೇವಲ 15 ನಿಮಿಷಗಳಲ್ಲಿ ಮುಗಿಸಲಾಯಿತು. ಕೊರೊನಾ ವೈರಸ್‌ ನಿಂದ ಜಗತ್ತನ್ನು ರಕ್ಷಿಸುವಂತೆ ನಮಾಜ್‌ ವೇಳೆ ವಿಶೇಷ ಪ್ರಾರ್ಥನೆ ಮಾಡಲಾಯಿತು.

Namaz should not be exceed more than 15 minutes

ಉಡು​ಪಿ(ಮಾ.21): ಕೊರೋ​ನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವ ಪ್ರಯುಕ್ತ ಉಡುಪಿ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಶುಕ್ರವಾರ ಜುಮಾ ನಮಾಜ್‌ನ್ನು ಕೇವಲ 15 ನಿಮಿಷಗಳಲ್ಲಿ ಮುಗಿಸಲಾಯಿತು. ಕೊರೊನಾ ವೈರಸ್‌ ನಿಂದ ಜಗತ್ತನ್ನು ರಕ್ಷಿಸುವಂತೆ ನಮಾಜ್‌ ವೇಳೆ ವಿಶೇಷ ಪ್ರಾರ್ಥನೆ ಮಾಡಲಾಯಿತು.

ಜಿಲ್ಲಾ ಮುಸ್ಲಿಮ್‌ ಒಕ್ಕೂಟ ಮತ್ತು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್‌ ಸಭೆಯ ನಿರ್ಧಾರದಂತೆ, ಉಡುಪಿ, ಕುಂದಾಪುರ, ಗಂಗೊಳ್ಳಿ, ಕಾಪು, ಕಾರ್ಕಳದ ಎಲ್ಲಾ ಮಸೀದಿಗಳಲ್ಲಿ ಮೊದಲೇ ನಿಗದಿಯಂತೆ 12.45ಕ್ಕೆ ನಮಾಜ್‌ ಆರಂಭವಾಯಿತು, 1 ಗಂಟೆಗೆ ಮುಗಿಯಿತು. ಮಕ್ಕಳು, ಹಿರಿಯರ ಮತ್ತು ಮಹಿಳೆಯರು ಮನೆಯಲ್ಲಿಯೇ ನಮಾಜ್‌ ನಡೆಸಿದರು.

'ಭಾನುವಾರ ಇಡೀ ದೇಶಕ್ಕೇ ಮದ್ದು ಸಿಂಪಡಿಸ್ತಾರಂತೆ ಮೋದಿ'..!

ಇದೇ ಸಂದರ್ಭದಲ್ಲಿ ಮಸೀದಿಗಳ ಧರ್ಮಗುರುಗುಳು ಕೊರೋನಾ ವೈರಸ್‌ ಹರಡದಂತೆ, ಅದನ್ನು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಸ್ಲಿಂ ಬಾಂಧವರಿಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ವಿಧಿಸಲಾಗಿರುವ 144 ಸೆಕ್ಷನ್‌ ಮತ್ತು ಭಾನುವಾರ ಜನತಾ ಕಫä್ರ್ಯವನ್ನು ಪಾಲಿಸುವಂತೆ ಸೂಚಿಸಿದರು.

ವಿಶೇಷವಾಗಿ ಉಡುಪಿಯ ಜಾಮಿಯ ಮಸೀದಿಯಲ್ಲಿ ಸ್ವಚ್ಛತೆಗೆ ವ್ಯವಸ್ಥೆ ಮಾಡಲಾಗಿತ್ತು, ನಮಾಜ್‌ ಮೊದಲು ಕೈಕಾಲು ತೊಳೆಯುವ ಸಂದರ್ಭದಲ್ಲಿ ಸಾಬೂನು ಬಳಸಲು ವ್ಯವಸ್ಥೆ ಮಾಡಲಾಗಿತ್ತು. ಮಸೀದಿಯೊಳಗೆ ಪ್ರವೇಶಿಸುವಾಗ ಕೈಗೆ ಸ್ಯಾನಿಟೈಸರ್‌ ಸಿಂಪಡಿಸಲಾಯಿತು.Namaz should not be exceed more than 15 minutes

Latest Videos
Follow Us:
Download App:
  • android
  • ios