ಅಪರೂಪದ ನಾಗಾರ್ಜುನ ಸಾಗರ ರೇಸರ್ ಹಾವು ಪತ್ತೆಯಾಗಿದೆ. ದಕ್ಷಿಣ ಭಾರತದಲ್ಲಿ ಮಾತ್ರ ಕಂಡುಬರುವ ಈ ಹಾವು, ತನ್ನ ವೇಗದ ಚಲನೆಯಿಂದ 'ರೇಸರ್' ಎಂದು ಹೆಸರುವಾಸಿಯಾಗಿದೆ. ಇದು ರಸೆಲ್ಸ್ ಕುಕ್ರಿ ಹಾವನ್ನು ಹೋಲುತ್ತದೆಯಾದರೂ, ವಿಶಿಷ್ಟ ದೈಹಿಕ ಲಕ್ಷಣಗಳಿಂದ ಭಿನ್ನವಾಗಿದೆ.

ತುಮಕೂರು: ಜಿಲ್ಲೆಯ ಮಧುಗಿರಿ ಪಟ್ಟಣದ ಬೆಟ್ಟದ ಇಳಿಜಾರಿನ ಕಲ್ಲು ಬಂಡೆಗಳಿಂದ ಕೂಡಿದ ಬಂಡೆಯ ಬುಡದಲ್ಲಿ ಅಪರೂಪದ ನಾಗಾರ್ಜುನ ಸಾಗರ ರೇಸರ್ ಹಾವು ಪತ್ತೆಯಾಗಿದ್ದು ಉರಗ ಪ್ರೇಮಿಗಳಿಗೆ ಕುತೂಹಲ ಹೆಚ್ಚಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಹಾವಿನ ಲಕ್ಷಣಗಳೇನು?

ಇದು ರಸೆಲ್ಸ್ ಕುಕ್ರಿ ಹಾವನ್ನು ಹೋಲುತ್ತದೆಯಾದರೂ ಮೊನಚಾದ ತಲೆ, ದೇಹದ ಮೇಲಿನ ಹುರುಪೆಗಳು ಹಾಗೂ ಬಣ್ಣದ ಸಹಾಯದಿಂದ ವ್ಯತ್ಯಾಸ ತಿಳಿಯಬಹುದು. ನೀಳ ದೇಹದ ಮೇಲೆ ಮೃದುವಾದ ಹುರುಪೆಗಳು, ಬೆನ್ನಿನ ಭಾಗದಲ್ಲಿ ಗಾಢವಾದ ಬೂದು ಬಣ್ಣದ ಉಂಗುರಾಕಾರದ ರಚನೆಗಳು ದೇಹದ ಅರ್ದ ಭಾಗದವರೆಗೂ ಕಂಡು ಬರುತ್ತವೆ.

ಈ ಹೆಸರು ಬಂದಿದ್ದು ಹೇಗೆ?

ದಕ್ಷಿಣ ಭಾರತದ ದಖನ್‌ ಪ್ರಸ್ಥಭೂಮಿಯಲ್ಲಿ ಮಾತ್ರ ಕಂಡು ಬರುವ ಈ ಹಾವು 1976ರಲ್ಲಿ ಆಂಧ್ರ ಪ್ರದೇಶದ ಗೂಂಟೂರು ಜಿಲ್ಲೆಯ ನಾಗಾರ್ಜುನ ಬೆಟ್ಟದಲ್ಲಿ ಕಂಡು ಬಂದಿದ್ದರಿಂದ ಈ ಹಾವಿಗೆ ಈ ಹೆಸರಿಟ್ಟಿದ್ದಾರೆ. ಈ ಹಾವುಗಳು ಶತೃಗಳಿಂದ ರಕ್ಷಸಿ ಕೊಳ್ಳಲು ಹಾಗೂ ಆಹಾರ ಜೀವಿಗಳನ್ನು ಹಿಡಿಯಲು ವೇಗ ಗತಿಯಲ್ಲಿ ಸಾಗುವುದರಿಂದ ರೇಸರ್ ಹೆಸರು ಬಂದಿದೆ. ಇದು ವಿಷ ರಹಿತ ಹಾವಾಗಿದ್ದು ಮಾನವರಿಗೆ ಯಾವುದೇ ಹಾನಿಯಿಲ್ಲ.

ಇದನ್ನೂ ಓದಿ: ಕಾರವಾರದ ಮನೆ ಅಂಗಳದಲ್ಲಿ 8-12 ಅಡಿಯ 6 ಹೆಬ್ಬಾವು ಪ್ರತ್ಯಕ್ಷ! ಒಂದೆಡೆ ಇಷ್ಟೊಂದು ಹಾವು ಬಂದಿದ್ಯಾಕೆ?

ಇದನ್ನು ಓದಿ: ಹಾವುಗಳಿಗೆ ಮೃತ್ಯು ಸಮಾನ ಈ ಗಿಡದ ವಾಸನೆ! ಮನೆ ಮುಂದೆ ಈ ಗಿಡ ಇದ್ರೆ ಯಾವ ಹಾವು ಅಪ್ಪಿ-ತಪ್ಪಿಯೂ ಬರೋದಿಲ್ಲ

Scroll to load tweet…