Mysuru : ಮಹಿಳಾ ಮತ್ತು ಪುರುಷರ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆ
ಶೇಷಾದ್ರಿಪುರಂ ಪದವಿ ಕಾಲೇಜಿನ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗವು ಜಿಲ್ಲಾ ಮಟ್ಟದ ಮಹಿಳಾ ಮತ್ತು ಪುರುಷರ ವ್ಹೇಟ್ಲಿಫ್ಟಿಂಗ್ ಸ್ಪರ್ಧೆಯನ್ನು ಆಯೋಜಿಸಿತ್ತು.
ಮೈಸೂರು : ಶೇಷಾದ್ರಿಪುರಂ ಪದವಿ ಕಾಲೇಜಿನ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗವು ಜಿಲ್ಲಾ ಮಟ್ಟದ ಮಹಿಳಾ ಮತ್ತು ಪುರುಷರ ವ್ಹೇಟ್ಲಿಫ್ಟಿಂಗ್ ಸ್ಪರ್ಧೆಯನ್ನು ಆಯೋಜಿಸಿತ್ತು.
ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಮತ್ತು ಮೈಸೂರು ಜಿಲ್ಲಾ ವ್ಹೇಯ್ಟ್ ಲಿಫ್ಟರ್ಸ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಬುಧವಾರ ಕಾಲೇಜಿನ ಆವರಣದ ಕುವೆಂಪು ರಂಗ ಮಂದಿರದಲ್ಲಿ ಜಿಲ್ಲಾ ಮಟ್ಟದ ಮಹಿಳಾ ಮತ್ತು ಪುರುಷರ ವ್ಹೇಟ್ಲಿಫ್ಟಿಂಗ್ ಸ್ಪರ್ಧೆ ನಡೆಸಲಾಯಿತು.
ಕಾಲೇಜಿನ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಏಕಲವ್ಯ ಪ್ರಶಸ್ತಿ ವಿಜೇತ, ಕಾಮನ್ ವೆಲ್ತ್ ಚಿನ್ನದ ಪದಕ ವಿಜೇತ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಪುಷ್ಪರಾಜ್ ಹೆಗ್ಡೆ ಮತ್ತು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಪುಷ್ಪರಾಜ್ ಹೆಗ್ಡೆ ಮಾತನಾಡಿ, ಕ್ರೀಡಾಪಟುಗಳು ಯಾವಾಗಲೂ ಕ್ರೀಡೆಯ ಮೇಲೆ ಗೌರವ ಹೊಂದಿರಬೇಕು. ಅಂತೆಯೇ ಕ್ರೀಡೆಯಲ್ಲಿ ಶಿಸ್ತು ಬಹಳ ಅಗತ್ಯ. ಸಾಧನೆಗೆ ಇವೆರಡೂ ಬಹುಮುಖ್ಯ. ಇದರೊಂದಿಗೆ ಸಾಧನೆ ಮಾಡಬೇಕಾದರೆ ಶ್ರಮ ಪಡಬೇಕು. ಶ್ರಮ ಪಡದಿದ್ದರೆ ಸಾಧನೆ ಮಾಡಲು ಎಂದಿಗೂ ಸಾಧ್ಯವಿಲ್ಲ ಎಂದರು.
ಡಾ.ಸಿ. ವೆಂಕಟೇಶ್ ಮಾತನಾಡಿ, ಇಂದಿನ ದಿನಗಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಕಡಿಮೆ ಆಗುತ್ತಿದೆ. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ. ಈ ಮೂಲಕ ಒಳ್ಳೆಯ ವೃತ್ತಿಯನ್ನು ನಿಮ್ಮದಾಗಿಸಿಕೊಳ್ಳಿ ಎಂದು ಹೇಳಿದರು.
ಸ್ಪರ್ಧೆಯಲ್ಲಿ ಮೈಸೂರು ಜಿಲ್ಲಾ ವ್ಹೇಯ್ಟ್ ಲಿಫ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಬಿ. ಸದಾಶಿವ ಭಟ್, ಕಾರ್ಯದರ್ಶಿ ಗುರುಮೂರ್ತಿ ಭಟ್, ಪ್ರಾಂಶುಪಾಲೆ ಪ್ರೊ. ಸೌಮ್ಯಾ ಕೆ. ಈರಪ್ಪ, ಡಾ.ಆರ್. ರಾಘವೇಂದ್ರ, ದೈಹಿಕ ಶಿಕ್ಷಣ ನಿರ್ದೇಶಕರು, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.
ದೈಹಿಕ ಪರೀಕ್ಷೆ ವೇಳೆ ಸ್ವತಃ ಎಸ್ಪಿಯವರೇ ಧರಿಸಿದ್ದ ಸಮವಸ್ತ್ರದಲ್ಲೇ ಹೈಜಂಪ್
ಹಾಸನ[ಮಾ.19]: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾನ್ ಸ್ಟೇಬಲ್‌ಗಳ ನೇಮಕಾತಿಯ ಅಂತಿಮ ಘಟ್ಟವಾದ ದೈಹಿಕ ಪರೀಕ್ಷೆ ವೇಳೆ ಸ್ವತಃ ಎಸ್ಪಿಯವರೇ ಧರಿಸಿದ್ದ ಸಮವಸ್ತ್ರದಲ್ಲೇ ಹೈಜಂಪ್ ಮಾಡಿದರು.
ಬೆಳಗ್ಗೆ ದೈಹಿಕ ಪರೀಕ್ಷೆಗೆ ನೂರಾರು ಮಂದಿ ಪುರುಷರು ಮತ್ತು ಮಹಿಳೆಯರು ಆಗಮಿಸಿ, ರನ್ನಿಂಗ್ ರೇಸ್, ಗುಂಡು ಎಸೆತ, ಹೈಜಂಪ್‌ನಲ್ಲಿ ಭಾಗವಹಿಸಿದ್ದರು. ಈ ವೇಳೆ ಸ್ಥಳದಲ್ಲಿ ಇದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡರು, ಕ್ರೀಡಾಂಗಣದಲ್ಲಿ ಹಾಕಲಾಗಿದ್ದ 5 ಅಡಿ ಎತ್ತರ ಜಿಗಿತವನ್ನು ತಾವೆ ಜಿಗಿಯುವ ಮೂಲಕ ಪೊಲೀಸ್ ಆಯ್ಕೆಗಾಗಿ ಪಾಲ್ಗೊಂಡಿದ್ದವರಿಗೆ ಹುರಿದುಂಬಿಸಿದರು. ಎಸ್ಪಿ ಸ್ಪೂರ್ತಿ ಫಿದಾ ಆದ ಪೊಲೀಸ್ ಅಧಿಕಾರಿಗಳು ಹಾಗೂ ದೈಹಿಕ ಪರೀಕ್ಷೆಗೆ ಬಂದವರು ಚಪ್ಪಾಳೆ ತಟ್ಟಿಅವರನ್ನು ಗೌರವ ಸಲ್ಲಿಸಿದರು.