ಮೈಸೂರು, [ಸೆ. 29]:  ಮೈಸೂರಿನ ಕೋಲಂಬಿಯಾ ಏಷಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ನಟ ದರ್ಶನ್ ಕಾನೂನು ಉಲ್ಲಂಘಿಸಿದ್ದಾರೆ. ಆಸ್ಪತ್ರೆಯಿಂದ ಕಾರಿನಲ್ಲಿ ಒನ್ ವೇ ರಸ್ತೆಯಲ್ಲಿ ಪ್ರಯಾಣಿಸಿ ಕಾನೂನು ಉಲ್ಲಂಘಿಸಿದ್ದಾರೆ.

ಎದುರುಗಡೆ ಸರ್ಕಾರಿ ಬಸ್ ಗಳು ಬರುತ್ತಿದ್ದರೂ ಅದನ್ನು ಲೆಕ್ಕಿಸದೇ ದರ್ಶನ್ ಇದ್ದ ಕಪ್ಪು ಬಣ್ಣದ ಆಡಿ ಕಾರನ್ನು ಒನ್ ವೇ ನಲ್ಲಿ ಚಲಾಯಿಸಿಕೊಂಡು  ಹೋಗಿದ್ದಾರೆ. ಸೆಲೆಬ್ರಿಟಿಯಾಗಿ ಸಾಮಾನ್ಯ ಜನರಿಗೆ ತಿಳುವಳಿಕೆ ಮೂಡಿಸುವವರೇ ಈ ರೀತಿ ಮಾಡಿದರೆ ಹೇಗೆ ಎನ್ನುವುದು ಸಾರ್ವಜನಿಕರ ಪ್ರಶ್ನೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಇನ್ನು ಒನ್ ವೇ ಹೋಗುತ್ತಿದ್ದನ್ನು ಪೊಲೀಸರು ನೋಡಿಲ್ವಾ? ಅಥವಾ ಪೊಲೀಸರೇ ಒನ್ ವೇನಲ್ಲಿ ಹೋಗಲು ಅನುಕೂಲ ಮಾಡಿಕೊಟ್ಟಿದ್ದಾರಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.