ಮೈಸೂರು, [ಸೆ.29]: ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕಾರು ಆಪಘಾತದಲ್ಲಿ ಕೈಮೂಳೆ ಮುರಿತಕ್ಕೊಳಗಾಗಿರುವ ದರ್ಶನ್ ಕಳೆದ 6 ದಿನಗಳಿಂದ ಮೈಸೂರಿನ ಕೋಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ದರ್ಶನ್ ಮೈಸೂರಿನಲ್ಲಿಯೇ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ. 

ನಟ ದರ್ಶನ್ ಈಗ ಹೇಗಿದ್ದಾರೆ ಗೊತ್ತಾ? ಸುವರ್ಣ ನ್ಯೂಸ್ ಬಳಿ ಎಕ್ಸ್‌ಕ್ಲೂಸಿವ್ ಫೋಟೋ!

ಮುಂದಿನ ಚಿಕಿತ್ಸೆ ದೃಷ್ಟಿಯಿಂದ ದರ್ಶನ್ ಮೈಸೂರಿನ ಸಿದ್ಧಾರ್ಥ್ ಲೇಔಟ್ ನಲ್ಲಿರುವ ತಮ್ಮ ಹಳೆ ಮನೆಯಲ್ಲಿಯೇ ಉಳಿದುಕೊಳ್ಳಲಿದ್ದಾರೆ.

ದರ್ಶನ್ ಅಪಘಾತದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ