Mysuru : ಕೈಗಾರಿಕೆ ಸ್ಥಾಪನೆಗೆ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಕೆಲಸ ನೀಡಲು ಆಗ್ರಹ
ಮೈಸೂರು ಮತ್ತು ನಂಜನಗೂಡು ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪನೆಗೆ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಕೆಲಸ ನೀಡುವಂತೆ ಆಗ್ರಹಿಸಿ ಕೆಐಎಡಿಬಿಗೆ ಭೂಮಿ ನೀಡಿದ ರೈತರ ಹಕ್ಕುಗಳ ಹೋರಾಟ ವೇದಿಕೆಯವರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟಿಸಿದರು.
ಮೈಸೂರು : ಮೈಸೂರು ಮತ್ತು ನಂಜನಗೂಡು ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪನೆಗೆ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಕೆಲಸ ನೀಡುವಂತೆ ಆಗ್ರಹಿಸಿ ಕೆಐಎಡಿಬಿಗೆ ಭೂಮಿ ನೀಡಿದ ರೈತರ ಹಕ್ಕುಗಳ ಹೋರಾಟ ವೇದಿಕೆಯವರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟಿಸಿದರು.
ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕೈಗಾರಿಕೆಗಳ ಸ್ಥಾಪನೆ ಮತ್ತು ಪೂರಕ ಸೌಲಭ್ಯಗಳಿಗಾಗಿ ರೈತರಿಗೆ ಸೇರಿದ ಕೃಷಿ ಜಮೀನನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದೆ. ಕೈಗಾರಿಕಾ ನೀತಿ ಅನ್ವಯ ಈ ಜಮೀನುಗಳಲ್ಲಿ ಸ್ಥಾಪನೆಯಾದ ಕೈಗಾರಿಕೆಗಳು ಜಮೀನು ನೀಡಿದ ರೈತರಿಗೆ ಕಾಯಂ ಉದ್ಯೋಗ ನೀಡಬೇಕು. ಆದರೆ, ಬಹುತೇಕ ಕೈಗಾರಿಕೆಗಳು ಈ ನಿಯಮ ಪಾಲಿಸುತ್ತಿಲ್ಲ ಎಂದು ಅವರು ಕಿಡಿಕಾರಿದರು.
ಕೈಗಾರಿಕೆಗಳು ಸ್ಥಾಪನೆಯಾದರೆ ಉದ್ಯೋಗ ಸೃಷ್ಟಿಯಾಗುತ್ತದೆ, ಅಭಿವೃದ್ದಿಗೆ ಪೂರಕವಾಗಲಿದೆ ಎಂದು ಫಲವತ್ತಾದ ಭೂಮಿಯನ್ನು ನೀಡಿದ ರೈತರು, ಉದ್ಯೋಗಕ್ಕಾಗಿ ವರ್ಷಗಟ್ಟಲೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಿ 30 ವರ್ಷ ಕಳೆದರೂ ಭೂಮಿ ಕಳೆದುಕೊಂಡ ರೈತರಿಗೆ ಕಾಯಂ ಉದ್ಯೋಗ ನೀಡದೆ ಹೊರಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸರ್ಕಾರದ ಕೈಗಾರಿಕಾ ನೀತಿಯ ಅನ್ವಯ ಕೆಲಸ ಕೊಡಿಸುವ ನಿಟ್ಟಿನಲ್ಲಿ ಉದ್ಯೋಗ ನೀಡಬೇಕೆಂದು ತೀರ್ಮಾನವಾಗಿದೆ. ಆದರೆ, ಇದುವರೆಗೂ ಭೂಮಿ ಕಳೆದುಕೊಂಡ ರೈತ ಕುಟುಂಬಗಳಿಗೆ ಕೆಲಸ ಸಿಕ್ಕಿಲ್ಲ. ಈ ಕೈಗಾರಿಕೆಗಳಲ್ಲಿ ಕೆಐಎಡಿಬಿ ಮತ್ತು ವಾಣಿಜ್ಯ ಕೈಗಾರಿಕಾ ಇಲಾಖೆ ಅಧಿಕಾರಿಗಳ ಆದೇಶಕ್ಕೆ ಬೆಲೆಯೇ ಇಲ್ಲ. ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಸಭೆ ನಡೆಸಿ ಉದ್ಯೋಗ ನೀಡಬೇಕೆಂದು ಆದೇಶಿಸಿದ್ದರೂ ಕಾರ್ಖಾನೆಗಳು ಕೆಲಸ ನೀಡುತ್ತಿಲ್ಲ. ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಉದ್ಯೋಗ ಕೊಡಿಸಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ಪಿ. ಮರಂಕಯ್ಯ, ಮಂಡಕಳ್ಳಿ ಮಹೇಶ್, ಬೊಕ್ಕಳ್ಳಿ ನಂಜುಂಡಸ್ವಾಮಿ, ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಂಚಾಲಕ ಬಸವರಾಜು ಮೊದಲಾದವರು ಇದ್ದರು.
ನಾಲ್ಕು ತಿಂಗಳಲ್ಲಿ ಕಟ್ಟುನಿಟ್ಟಾಗಿ ವಸೂಲಿ ಮಾಡಬೇಕು
ಬೆಂಗಳೂರು (ಅ.13): ಉದ್ಯಮ ಸ್ಥಾಪನೆಯ ಉದ್ದೇಶಕ್ಕೆಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿ (ಕೆಐಎಡಿಬಿ) ಇದುವರೆಗೆ ಹಂಚಿರುವ ನಿವೇಶನಗಳಿಂದ 4,248 ಕೋಟಿ ರೂ.ಗಳಷ್ಟು ಬೃಹತ್ ಬಾಕಿ ಹಣ ಬರಬೇಕಿದೆ. ಇದನ್ನು ಮುಂದಿನ ನಾಲ್ಕು ತಿಂಗಳಲ್ಲಿ ಕಟ್ಟುನಿಟ್ಟಾಗಿ ವಸೂಲಿ ಮಾಡಬೇಕು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ. ಬಿ. ಪಾಟೀಲ ಗಡುವು ವಿಧಿಸಿದ್ದಾರೆ.
ಖನಿಜ ಭವನದಲ್ಲಿ ಕೆಐಎಡಿಬಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ನಾಲ್ಕು ತಿಂಗಳಲ್ಲಿ ವಸೂಲಿ ಮಾಡುವಲ್ಲಿ ವಿಫಲರಾದರೆ ಮಂಡಲಿಯ ಕಾರ್ಯದರ್ಶಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕೆಐಎಡಿಬಿ ಆರಂಭವಾದಾಗಿನಿಂದಲೂ ಈ ಸಮಸ್ಯೆ ಇದೆ. ಈಗಿನ ಅಂಕಿಅಂಶಗಳ ಪ್ರಕಾರ, ಮಂಡಲಿಯು ಸಾಮಾನ್ಯ ವರ್ಗದವರಿಗೆ ಮಂಜೂರು ಮಾಡಿರುವ 5,932 ಕೈಗಾರಿಕಾ ಘಟಕಗಳಿಂದ 2,825 ಕೋಟಿ ರೂ. ಬರಬೇಕಾಗಿದೆ. ಎಸ್ಸಿ- ಎಸ್ಟಿ ವರ್ಗಗಳ ಅಡಿಯಲ್ಲಿ 741 ಕೋಟಿ ರೂ. ಬಾಕಿ ಉಳಿದಿದೆ. ಇದರ ಜತೆಗೆ ಎಸ್ಸಿ- ಎಸ್ಟಿ ವರ್ಗಗಳಿಗೆ ನೀಡುವ ಸಬ್ಸಿಡಿ ಬಾಬ್ತಿನಲ್ಲಿ 680 ಕೋಟಿ ಇದೆ ಎಂದು ವಿವರಿಸಿದರು.
ತೊಡೆ ಕಾಣಿಸೋ ಸೀಳು ಬಟ್ಟೆ ಧರಿಸಿಕೊಂಡು, ಕೈಯಿಂದ ತೊಡೆ ಮುಚ್ಕೊಂಡ ಜಾನ್ವಿ ಕಪೂರ್!
ಕೆಐಎಡಿಬಿಯಿಂದ ನಿವೇಶನಗಳನ್ನು ಪಡೆದಿರುವವರಲ್ಲಿ ಎಷ್ಟೋ ಜನ ಈ ನಿವೇಶನಗಳನ್ನು ಹಾಗೆಯೇ ಬಿಟ್ಟುಕೊಂಡಿದ್ದಾರೆ. ಉದ್ಯಮ ಸ್ಥಾಪಿಸಿ ಇನ್ನೇನು ತಮ್ಮ ಹೆಸರಿಗೆ ನಿವೇಶನ ಮಾಡಿಸಿಕೊಳ್ಳುವ ಕೊನೆ ಹಂತದಲ್ಲಿ ಇರುವವರೇ ₹2,100 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಇಂಥವರ ವಿರುದ್ಧ ನಾಲ್ಕು ತಿಂಗಳೊಳಗೆ ಕಠಿಣ ಕ್ರಮ ಜರುಗಿಸಿ ಬಾಕಿ ಹಣ ವಸೂಲಿ ಮಾಡಲೇಬೇಕು. ಕಾನೂನು ಕ್ರಮದ ಜತೆಗೆ ನಿವೇಶನ ಮಂಜೂರಾತಿಯನ್ನೇ ರದ್ದುಪಡಿಸಬೇಕಾದ ನಿಷ್ಠುರತೆಯನ್ನು ಪ್ರದರ್ಶಿಸಲೇಬೇಕಾಗಿದೆ ಎಂದು ಹೇಳಿದರು.
ಬಿಜೆಪಿಯವರ ಮನೆ ಮೇಲೆ ಯಾಕೆ ದಾಳಿ ಆಗೋದಿಲ್ಲ? ಸಚಿವ ಶಿವರಾಜ ತಂಗಡಗಿ ಪ್ರಶ್ನೆ
ಕೆಐಎಡಿಬಿ ಮೊದಲಿನಿಂದಲೇ ಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತ ಬರಬೇಕಾಗಿತ್ತು. ಆಗ ಈ ಪರಿಸ್ಥಿತಿ ಸೃಷ್ಟಿಯಾಗುತ್ತಿರಲಿಲ್ಲ. ಈ ವಿಚಾರದಲ್ಲಿ ಮಂಡಲಿಯ ಕಾರ್ಯದರ್ಶಿಗಳು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು.ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಕೆಐಎಡಿಬಿ ಸಿಇಒ ಮಹೇಶ್, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.