Mysuru: ಪ್ರಧಾನಿ ಮೋದಿ ಹೆಜ್ಜೆ ಇಟ್ಟಲೆಲ್ಲ ಗಂಜಲ ಹಾಕಿ ಶುದ್ಧಿ!
ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸಿದ ಮಾರ್ಗ ಅಪವಿತ್ರವಾಗಿದೆ ಎಂದು ನಮೋ ಸಾಗಿದ ದಾರಿಯಲ್ಲಿ ಸಗಣಿ ಮತ್ತು ಗಂಜಲದಿಂದ ಕ್ಲೀನ್ ಮಾಡಿದ್ದಾರೆ.
ಮೈಸೂರು (ಮೇ.14): ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸಿದ ಮಾರ್ಗ ಅಪವಿತ್ರವಾಗಿದೆ ಎಂದು ನಮೋ ಸಾಗಿದ ದಾರಿಯಲ್ಲಿ ಸಗಣಿ ಮತ್ತು ಗಂಜಲದಿಂದ ಕ್ಲೀನ್ ಮಾಡಿದ್ದಾರೆ. ದಸರಾ ಮೆರವಣಿಗೆ ರಾಜ ಮಾರ್ಗಕ್ಕೆ ಕಳಂಕ ತಂದಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ರಸ್ತೆ ಶುದ್ಧಿಕರಣ ಮಾಡಲಾಗಿದೆ. ಗಂಜಲ, ಸಗಣಿ ನೀರಿನಿಂದ ಕೈ ಕಾರ್ಯಕರ್ತರು ರಾಜ ಮಾರ್ಗವನ್ನು ಶುಚಿಗೊಳಿಸಿದ್ದಾರೆ.
ಮೈಸೂರಿನ ಕೆ.ಆರ್ ವೃತ್ತ, ಸಯ್ಯಾಜೀರಾವ್ ರಸ್ತೆಯನ್ನು ಸಗಣಿ ಮತ್ತು ಗಂಜಲದಿಂದ ಕಾರ್ಯಕರ್ತರು ಶುದ್ಧಿ ಮಾಡಿದ್ದಾರೆ. ಮೇ 7 ರಂದು ಮೈಸೂರಿನ ಗನ್‌ಹೌಸ್ ವೃತ್ತದಿಂದ ಹೈವ್ ವೃತ್ತದ ವರೆಗೆ ಪ್ರಧಾನಿ ಮೊದಿ ಇಲ್ಲಿ ರೋಡ್ ಶೋ ನಡೆಸಿದ್ದರು. ಈ ಮೂಲಕ ಚುನಾವಣಾ ಪ್ರಚಾರ ಮಾಡಿದ್ದರು.
ಜಿದ್ದಾಜಿದ್ದಿನ ಕಣದಲ್ಲಿ ರಾಜಕೀಯ ದ್ವೇಷ, ಶರತ್ ಬಚ್ಚೇಗೌಡ ಗೆಲುವಿನ ಸಂಭ್ರಮಕ್ಕೆ ಓರ್ವನ ಹತ್ಯೆ
ಮೋದಿ ಸಾಗಿದ ಮಾರ್ಗವನ್ನ ಶುಚಿಗೊಳಿಸುವ ಮೂಲಕ ಕೈ ಕಾರ್ಯಕರ್ತರ ವ್ಯಂಗ್ಯ ಮಾಡಿದ್ದು, ನಾಡದೇವಿ ಚಾಮುಂಡೇಶ್ವರಿ ಮೆರವಣಿಗೆ ಸಾಗುವ ದಾರಿಯಲ್ಲಿ ಮೋದಿ ಬಂದಿದ್ದು ಅಪವಿತ್ರ ಎಂದು ಆರೋಪಿಸಿದ್ದಾರೆ.
Karnataka Election Results 2023 ಎಲ್ಲಾ ನೋವುಂಡ ಡಿಕೆಶಿಗೆ ನಮ್ಮ ಬೆಂಬಲ: ನಂಜಾವಧೂತ
ಚಾಮುಂಡೇಶ್ವರಿ ಶಾಪದಿಂದ ಕರ್ನಾಟಕದಲ್ಲಿ ಬಿಜೆಪಿ ನೆಲಕಚ್ಚಿದೆ ಎಂದು ಮಲೀನವಾದ ರಸ್ತೆಯನ್ನು ಕಾರ್ಯಕರ್ತರು ಪವಿತ್ರ ಮಾಡಿದ್ದಾರೆ. ರಾಜ ಮಹಾರಾಜರು ಸಾಗಿದ್ದ ಮಾರ್ಗ, ಈಗ ತಾಯಿ ಚಾಮುಂಡೇಶ್ವರಿ ಸಾಗುವ ಮಾರ್ಗ. ಅಂತಹ ಮಾರ್ಗದಲ್ಲಿ ಮೋದಿ ಸಾಗಿದ್ದು ಅಪಶಕುನ. ಇದರಿಂದಾಗಿಯೇ ಬಿಜೆಪಿ ಸೋತಿದೆ. ನಮ್ಮ ಮೈಸೂರು ಪವಿತ್ರವಾಗಿರಬೇಕು ಅದಕ್ಕೆ ಕ್ಲೀನ್ ಮಾಡಿದ್ದೇವೆಂದು ಕಾರ್ಯಕರ್ತರು ಸಮರ್ಥಿಸಿಕೊಂಡಿದ್ದಾರೆ.