Asianet Suvarna News Asianet Suvarna News

Karnataka Election Results 2023 ಎಲ್ಲಾ ನೋವುಂಡ ಡಿಕೆಶಿಗೆ ನಮ್ಮ ಬೆಂಬಲ: ನಂಜಾವಧೂತ ಸ್ವಾಮೀಜಿ

ದೇವೇಗೌಡರಿಗೆ ಹಾಗೂ ಕುಮಾರಸ್ವಾಮಿ ಹೇಗೆ ಬೆಂಬಲವಾಗಿ ನಿಂತಿದ್ದೇವೋ ಹಾಗೇ ಡಿಕೆ ಶಿವಕುಮಾರ್‌ಗೂ ಕೂಡ ನಾವು ಬೆಂಬಲವಾಗಿ ನಿಲ್ಲಬೇಕಿದೆ ಎಂದು   ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ.

karnataka election results 2023  Our support to DK Shivakumar says Nanjavadutha swamiji  gow
Author
First Published May 14, 2023, 6:08 PM IST

ಬೆಂಗಳೂರು (ಮೇ.14): ದೇವೇಗೌಡರಿಗೆ ಹಾಗೂ ಕುಮಾರಸ್ವಾಮಿ ಹೇಗೆ ಬೆಂಬಲವಾಗಿ ನಿಂತಿದ್ದೇವೋ ಹಾಗೇ ಡಿಕೆ ಶಿವಕುಮಾರ್‌ಗೂ ಕೂಡ ನಾವು ಬೆಂಬಲವಾಗಿ ನಿಲ್ಲಬೇಕಿದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ (Nanjavadutha swamiji)ಹೇಳಿದ್ದಾರೆ. ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ನಡೆದ ಒಕ್ಕಲಿಗ ಸಮುದಾಯವರ ಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ವಿಜಯನಗರ ಆದಿಚುಂಚನಗಿರಿ ಮಠದಲ್ಲಿ  ನಡೆದ ಸಭೆಯಲ್ಲಿ ನಿರ್ಮಾಲಾನಂದನಾಥ ಸ್ವಾಮೀಜಿ ,ನಂಜಾವಧೂತ ಸ್ವಾಮೀಜಿ ಭಾಗಿ‌ಯಾಗಿದ್ದರು.

ನಮ್ಮ ಸಮುದಾಯಕ್ಕೆ ದೊಡ್ಡ ಆಡಳಿತಾವಧಿ ಸಿಗಲಿಲ್ಲ. ಹೆಚ್ ಡಿ ಕುಮಾರಸ್ವಾಮಿ, ಎಸ್ ಎಂ ಕೃಷ್ಣ, ಡಿವಿ ಸದಾನಂದಗೌಡ ಕೇವಲ ಅಲ್ಪ ಪ್ರಮಾಣದ ಸಮಯ ಮಾತ್ರ ಸಿಕ್ಕಿದೆ. ಕುಮಾರಸ್ವಾಮಿ ಎರಡು ಅವಕಾಶದಲ್ಲಿ ಜನರ ಮೇಲೆ ಯಾವುದೇ ತೆರಿಗೆ ಹೇರದೆ ರೈತರ ಸಾಲವನ್ನ ಮನ್ನ ಮಾಡಿದ್ದರು.

ಕೆಂಗಲ್ ಹನುಮಂತಯ್ಯ ಏಕೀಕರಣಕ್ಕಾಗಿ ಹೋರಾಟ ನಡೆಸಿದ್ದರು. ಬೆಂಗಳೂರಿಗೆ ಕಾವೇರಿ ನೀರು ತಂದಿದ್ದು ದೇವೇಗೌಡರು. ಬೆಂಗಳೂರು ಅಭಿವೃದ್ಧಿಗೆ  ಎಸ್ ಎಂ ಕೃಷ್ಣ ಸಾಕಷ್ಟು ಕೊಡಗೆ ನೀಡಿದ್ದಾರೆ. ಸದಾನಂದ ಗೌಡ ಸಕಾಲ ಮತ್ತು ಎತ್ತಿನಹೊಳೆ ಯೋಜನೆ ಕೊಟ್ಟಿದ್ದಾರೆ. ಇಂತಹ ಶ್ರೇಷ್ಠ ಸಮುದಾಯದಲ್ಲಿ ನಾವು ಹುಟ್ಟಿದ್ದೇವೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಸಮಯದಲ್ಲಿ ಕಾರ್ಯಕರ್ತರ ರೀತಿ ಡಿಕೆಶಿ ಕೆಲಸ ಮಾಡಿದ್ದಾರೆ. ಎಲ್ಲಾ ಶಾಸಕರನ್ನ ಒಟ್ಟಿಗೆ  ಕರೆದುಕೊಂಡು ವಿಶ್ಚಾಸಮತ ಯಾಚನೆ ಮಾಡಿದ್ದರು. ಡಿಕೆಶಿ ಗೆ ನೋವು ಕೊಟ್ಟಷ್ಟು ಯಾರಿಗಾದ್ರೂ ಕೊಟ್ಟಿದ್ರೆ ಅವರು ಭೂಮಿ ಮೇಲೆ ಇರುತ್ತಿರಲಿಲ್ಲ ಅನ್ನಿಸುತ್ತೆ ಎಂದು ಸ್ವಾಮೀಜಿ ಹೇಳಿದ್ದಕ್ಕೆ ಜನರು ಚಪ್ಪಾಳೆ ತಟ್ಟಿದರು.

ಜಿದ್ದಾಜಿದ್ದಿನ ಕಣದಲ್ಲಿ ರಾಜಕೀಯ ದ್ವೇಷ, ಶರತ್ ಬಚ್ಚೇಗೌಡ ಗೆಲುವಿನ ಸಂಭ್ರಮಕ್ಕೆ ಓರ್ವನ ಹತ್ಯೆ

ಅದಕ್ಕೆ ಇದಕ್ಕೆ ಯಾಕೆ ಚಪ್ಪಾಳೆ  ಹೊಡೆಯುತ್ತಿರಾ? ಇದು ನೋವು ಅಲ್ವಾ? ಯಾವುದಕ್ಕೆ ಚಪ್ಪಾಳೆ ಹೊಡೆಯಬೇಕು ಯಾವುದಕ್ಕೆ ಹೊಡೆಯಬಾರದು. ನೀವು ಯಾವುದಕ್ಕೆ ಶಬ್ದ ಮಾಡಬೇಕು ಯಾವುದಕ್ಕೆ ಮಾಡಬಾರದು ಅನ್ನೋದು ಗೊತ್ತಿಲ್ಲ ಅನ್ನಿಸುತ್ತೆ. ಆದ್ರೆ ಈ ಬಾರಿ ಎಚ್ಚೆತ್ತು ಸ್ವಲ್ಪ ಶಬ್ದ ಮಾಡುತ್ತಿದ್ದೀರಾ ಎಂದು ಸ್ವಾಮೀಜಿ ಹೇಳಿದರು.

KARNATAKA ELECTION RESULT 2023 ಸಿಎಂ ಆಯ್ಕೆಗೆ ಸೋನಿಯಾ, ರಾಹುಲ್ ನಿರ್ಧಾರ ಕೇಳಿದ ಖರ್ಗೆ!

ಡಿಕೆಶಿ ಎಲ್ಲಾ ನೋವುಗಳನ್ನ ಉಂಡಿದ್ದಾರೆ. ಡಿಕೆಶಿ ಮುಖ್ಯಮಂತ್ರಿ ಸ್ಥಾನಕ್ಕೆ ಎಲಿಜಿಬಲ್ ಇದ್ದಾರೆ. ಡಿಕೆಶಿ ಆ ಸ್ಥಾನಕ್ಕೆ ಅರ್ಹರಿದ್ದಾರೆ. ಇಷ್ಟೆಲ್ಲ ತ್ಯಾಗ ಮಾಡಿರುವ ಡಿಕೆಶಿಗೆ ಯಾಕೆ ಅವಕಾಶ ಮಾಡಿಕೊಡಬಾರದು..? ಇದು ನಮ್ಮ ಸಮುದಾಯದ ಪ್ರಶ್ನೆ. ಈಗ ಸಿಎಲ್ ಪಿ ಸಭೆ ಕರೆದಿದ್ದಾರೆ. ಅವರ ಪಕ್ಷದ ಎಲ್ಲಾ ಶಾಸಕರಿಗೆ ನಾನು ಕೇಳ್ತಿನಿ. ನಿಮ್ಮನ್ನ ವಿಧಾನಸೌದಕ್ಕೆ ಕರೆದುಕೊಂಡು ಬರೋಲು ಡಿಕೆಶಿ ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ‌. ಅವರಿಗೆ ಒಂದು ಅವಕಾಶ ಮಾಡಿಕೊಡಿ. ಈ ನಮ್ಮ ಸಭೆಯ ಈ ನಿರ್ಣಯವನ್ನ ಬಾಲಕೃಷ್ಣ ಸಿಎಲ್ ಪಿ ಸಭೆಯಲ್ಲಿ ಹೇಳಲಿ.

ನಿರ್ಮಾಲಾನಂದ ಶ್ರೀಗಳ ಹೇಳಿಕೆ: ಇವತ್ತಿನ ಕಾರ್ಯಕ್ರಮ ಬ್ಯಾನರ್ ಇಲ್ಲದ ಕಾರ್ಯಕ್ರಮ. ಎಲ್ಲರ ಹೃದಯದಲ್ಲೇ ಇದೆ ಆ ವಿಷಯ ಏನು ಅನ್ನೋದು. ನಮ್ಮವರೆಯಾದ ವ್ಯಕ್ತಿ ಪಕ್ಷವನ್ನ ಮೇಲೆ ಎತ್ತಿ ಅಧಿಕಾರ ಹಿಡುವಂತೆ ಮಾಡಿದ್ದಾರೆ ಡಿಕೆ ಶಿವಕುಮಾರ್. ಸಂಪ್ರದಾಯದಂತೆ  ಮನೆಯ ಅಧ್ಯಕ್ಷ ಯಾರು ಇರುವರೋ ಅವರೇ ರಾಜ್ಯವನ್ನ ಮುನ್ನಡೆಸುತ್ತಾರೆ ಹಾಗೇ ಮುಂದುವರೆಸಿಕೊಂಡು ಹೋಗಿ ಅನ್ನೋದು ನಮ್ಮ ಅಶಯ 
ಎಲ್ಲಾ ಮಾನದಂಡಗಳಿಂದಲ್ಲೂ ಅರ್ಹರಿದ್ದಾರೆ ನಮ್ಮ ಡಿಕೆಶಿ. ಸೋನಿಯಾ, ಸಿದ್ದರಾಮಯ್ಯ ಖರ್ಗೆಯವರು ಡಿಕೆಶಿಯವರಿಗೆ ಕೊಡಬೇಕು ಕೊಡ್ತಾರೆ ಅಂತ ಭಾವಿಸಿದ್ದೇನೆ. ಶ್ರಮಫಟ್ಟವರಿಗೆ ಫಲ ಸಿಗಬೇಕು. ಸಹಜವಾಗಿ ಅಧ್ಯಕ್ಷರಾದರನ್ನ ಮುಖ್ಯಮಂತ್ರಿ ಮಾಡಬೇಕು ಅದು ಮಾಡ್ತಾರೆ ಅಂತ ನಾನು ಭಾವಿಸುತ್ತೇನೆ. ಸಹಜವಾಗಿ ಅವರಿಗೆ ಸಿಗುವ ಸ್ಥಾನ ಸಿಗಲಿ. ಅದನ್ನ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ನಾಳೆ ಅವರ ಹುಟ್ಟು ಹಬ್ಬ ಜೊತೆ ಇದು ಸಹ ಸಿಗಲಿ ಎಂದಿದ್ದಾರೆ.

Follow Us:
Download App:
  • android
  • ios