Asianet Suvarna News Asianet Suvarna News

ಜಿದ್ದಾಜಿದ್ದಿನ ಕಣದಲ್ಲಿ ರಾಜಕೀಯ ದ್ವೇಷ, ಶರತ್ ಬಚ್ಚೇಗೌಡ ಗೆಲುವಿನ ಸಂಭ್ರಮಕ್ಕೆ ಓರ್ವನ ಹತ್ಯೆ

ಶರತ್ ಬಚ್ಚೇಗೌಡ ಗೆದ್ದ ಸಂಭ್ರಮದಲ್ಲಿ  ಡಿ.ಶೆಟ್ಟಿಹಳ್ಳಿಯಲ್ಲಿ ಪಟಾಕಿ ಹಚ್ಚುವ ವಿಚಾರಕ್ಕೆ ಗಲಾಟೆ ನಡೆದು ಎಂಟಿಬಿ ಬೆಂಬಲಿಗ ಸಾವನ್ನಪ್ಪಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ.

Karnataka Election Results 2023  MTB supporter killed in sharath bachegowda victory celebration gow
Author
First Published May 14, 2023, 5:00 PM IST

ಹೊಸಕೋಟೆ (ಮೇ.14): ಬೆಂಗಳೂರು ಗ್ರಾಮಾಂತರದ ಹೊಸಕೋಟೆಯಲ್ಲಿ ಡಿ.ಶೆಟ್ಟಿಹಳ್ಳಿಯಲ್ಲಿ ಪಟಾಕಿ ಹಚ್ಚುವ ವಿಚಾರಕ್ಕೆ ಗಲಾಟೆ ನಡೆದಿದೆ. ಕಾಂಗ್ರೆಸ್ ನ ಶರತ್ ಬಚ್ಚೇಗೌಡ್ರು ಗೆದ್ದ ಸಂಭ್ರಮಕ್ಕೆ‌ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಗಿತ್ತು. ಸಹೋದರರಿಬ್ಬರು ಒಂದೊಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಕೃಷ್ಣಪ್ಪ ಎಂಬುವವರು ಬಿಜೆಪಿಯ ಎಂಟಿಬಿ ನಾಗರಾಜ್ ರವರನ್ನ ಬೆಂಬಲಿಸಿ ಪ್ರಚಾರ ನಡೆಸಿದ್ದರು, ಮತ್ತೋರ್ವ ಸಹೋದರ ಗಣೇಶಪ್ಪ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ್ರರನ್ನು ಬೆಂಬಲಿಸಿದ್ದರು.

ಚುನಾವಣೆ ಪ್ರಾರಂಭವಾದಾಗಿನಿಂದ ಇವರಿಬ್ಬರ ನಡುವೆ  ಹಗೆತನ‌ ಆರಂಭವಾಗಿತ್ತು. ನಿನ್ನೆ ಫಲಿತಾಂಶ ಹೊರ ಬಿದ್ದ ನಂತರ ಗಣೇಶಪ್ಪನ ಮಗ ಆದಿತ್ಯ, ಕೃಷ್ಣಪ್ಪನ ಮನೆ ಮುಂದೇಯೇ ಪಟಾಕಿ ಹಚ್ಚಲು ಮುಂದಾಗಿದ್ದ ಇದಕ್ಕೆ ಕೃಷ್ಣಪ್ಪನ ಮನೆಯವರು  ವಿರೋಧ ವ್ಯಕ್ತಪಡಿಸಿದರು. ಕೃಷ್ಣಪ್ಪನ ಮನೆಯಲ್ಲಿ ಪುಟ್ಟ ಮಗುವಿದೆಯೆಂದು ಮನವಿ ಮಾಡಿಕೊಂಡರೂ ಹಠ ಬಿಡದ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

Bengaluru: ಫುಟ್ ಪಾತ್ ರೈಡಿಂಗ್ ವಿರುದ್ಧ ಸಿಡಿದೆದ್ದ ಪಾದಚಾರಿ, ಅತಿಥಿಗಳಂತೆ ಬಂದು ಹೋದ

ಈ ವಿಚಾರವಾಗಿ ಎರಡು ಕಡೆ ಪರಸ್ಪರ ಹೊಡೆದಾಟ ನಡೆದಿದೆ.  ಆದಿತ್ಯ‌ ಕೂಡಲಿಯಲ್ಲಿ ಹೊಡೆದಾಗ ‌ಕೃಷ್ಣಪ್ಪ ಸ್ಥಳದಲ್ಲೇ ಕುಸಿದು ಮೃತಪ    ಟ್ಟಿದ್ದಾನೆ. ಎರಡು ಕಡೆ ಗಲಾಟೆ ಪ್ರಾರಂಭವಾಗಿ ಗಣೇಶಪ್ಪನ ಮಗ  ಆದಿತ್ಯ ಹಲ್ಲೆ ನಡೆಸಿ ಪರಾರಿಯಾಗಿದ್ಧಾನೆ. ಜಗಳ‌ ಬಿಡಿಸಲು ಹೋದ ಕೃಷ್ಣಪ್ಪ ಮಗನಿಗೂ ಗಂಭೀರ ಗಾಯವಾಗಿದ್ದು. ಗಾಯಾಳುಗಳನ್ನು ಎಂಟಿಬಿ. ನಾಗರಾಜ್ ಭೇಟಿ ಮಾಡಿದ್ದಾರೆ.

ಕ್ಯಾಟರ್ ಬಿಲ್ಲು ಬಳಸಿ ಅಪಹರಣಕಾರರಿಂದ ತಂಗಿಯ ಬಚಾವ್ ಮಾಡಿದ 13ರ ಬಾಲಕ!

ಈ ಮೂಲಕ ಮತ್ತೊಮ್ಮೆ ಹೊಸಕೋಟೆಯಲ್ಲಿ ರಾಜಕೀಯ ದೊಂಬಾರಟ ಪ್ರಾರಂಭವಾಗಿದೆ. ಮೊದಲನೇ ದಿನವೇ ಕ್ಷುಲ್ಲಕ ಕಾರಣಕ್ಕೆ ಪ್ರಾರಂಭವಾದ ಗಲಾಟೆ ಕೊಲೆಯಲ್ಲಿ‌‌‌ ಅಂತ್ಯವಾಗಿದೆ.

Follow Us:
Download App:
  • android
  • ios