ಕುರ್‌ಕುರೆ ಪಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಗಿಫ್ಟ್ ಬಾಲ್ ಕುರ್‌ಕುರೆ ಎಂದುಕೊಂಡು ನುಂಗಿ ಐದು ವರ್ಷದ ಕಂದ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ.

ಹುಣಸೂರು (ಆ.2): ಕುರ್‌ಕುರೆ ಪಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಗಿಫ್ಟ್ ಬಾಲ್ ಕುರ್‌ಕುರೆ ಎಂದುಕೊಂಡು ನುಂಗಿ ಐದು ವರ್ಷದ ಕಂದ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ.

ಮುಕುಂದ್ ಮಯೂರ್ (5) ಮೃತ ಬಾಲಕ. ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಗೌರಮ್ಮ-ಶಂಕರ್ ನಾಯಕ ಅವರ ಮೊಮ್ಮಗ, ಸಂತೋಷ್-ಐಶ್ವರ್ಯ ದಂಪತಿಯ ಏಕೈಕ ಪುತ್ರನಾಗಿ ಬಾಲಕ.

ಕುರ್‌ಕುರೆ ಪಾಕೆಟ್‌ನಲ್ಲಿತ್ತು ಪ್ಲಾಸ್ಟಿಕ್ ಗಿಫ್ಟ್ ಬಾಲ್!

ಮಾಹಿತಿಯ ಪ್ರಕಾರ, ಮಗು ಕುರ್‌ಕರೆ ಪಾಕೆಟ್ ಖರೀದಿಸಿದೆ. ಆ ಪಾಕೆಟ್‌ನೊಂದಿಗೆ ಒಳಗೆ ಗಿಫ್ಟ್ ಬಾಲ್ ಬಂದಿದೆ. ಕುರ್‌ಕುರೆ ತಿಂದ ಬಳಿಕ ಗಿಫ್ಟ್‌ ಬಾಲ್ ಬಾಯಿಗೆ ಹಾಕಿರುವ ಮಗು ಅಕಸ್ಮಿಕವಾಗಿ ನುಂಗಿದಾಗ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿ ಬಾಲಕ ಮೃತಪಟ್ಟಿದ್ದಾನೆ ಎಂದು ಎನ್ನಲಾಗುತ್ತಿದೆ.

ಈ ಆಘಾತಕಾರಿ ಘಟನೆಯಲ್ಲಿ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕುರ್‌ಕುರೆ ಪಾಕೆಟ್‌ನಲ್ಲಿ ಪ್ಲಾಸ್ಟಿಕ್ ಗಿಫ್ಟ್ ಎಷ್ಟು ಅಪಾಯಕಾರಿ!

ಕುರ್‌ಕುರೆ ಪಾಕೆಟ್ ಹೆಚ್ಚಾಗಿ ಚಿಕ್ಕ ಮಕ್ಕಳು ತಿನ್ನುತ್ತವೆ. ಕುರ್‌ಕುರೆಯಲ್ಲಿ ಪ್ಲಾಸ್ಟಿಕ್ ಗಿಫ್ಟ್ ಬಾಲ್ ಇರುತ್ತೆಂಬುದನ್ನ ತಿಳಿಯದ ಮಕ್ಕಳು ಕುರ್‌ಕುರೆ ಎಂದು ತಿಂದರೆ ಅಥವಾ ನುಂಗಿ ಮಕ್ಕಳ ಜೀವಕ್ಕೆ ಅಪಾಯವಾದರೆ ಯಾರು ಹೊಣೆ? ಈಗ ಸಾವನ್ನಪ್ಪಿರುವ ಮಗು ಕೂಡ ಅದೇ ರೀತಿ ನಡೆದಿರುವ ಸಾಧ್ಯತೆಯೂ ಇದೆ. ಮಕ್ಕಳನ್ನ ಆಕರ್ಷಿಸಲು ಈ ರೀತಿ ಅಪಾಯಕಾರಿಯಾಗಿ ಬೇಜವಾಬ್ದಾರಿತನದಿಂದ ಗಿಫ್ಟ್ ಬಾಲ್‌ಗಳನ್ನು ಹಾಕುವ ಕುರ್‌ಕುರೆ ಮಾರಾಟಗಾರರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಬೇಕು. ಮಗುವನ್ನು ಕಳೆದುಕೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.