Asianet Suvarna News Asianet Suvarna News

ಮೈಸೂರು: ತಂಬಾಕು ಬೆಳೆಗಾರರಿಗೆ ಎಫ್ ಸಿಎಚ್ 248 ತಳಿ ಮಾರುಕಟ್ಟೆಗೆ

ಮುಂಬರುವ ಸಾಲಿನಲ್ಲಿ ತಂಬಾಕು ಬೆಳೆಗಾರರಿಗೆ ಎಫ್.ಸಿಎಚ್ 248 ತಳಿಯನ್ನು ವಿತರಿಸಲು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ (ಸಿಟಿಆರ್ಐ) ನಿರ್ಧರಿಸಿದೆ ಎಂದು ಆಂಧ್ರಪ್ರದೇಶದ ರಾಜಮುಂಡ್ರಿಯ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ (ಸಿಟಿಆರ್.ಐ) ದ ನಿರ್ದೇಶಕ ಡಿ.ಎಂ. ಶೇಷು ಮಾಧವ್ ಹೇಳಿದರು.

Mysore FCH 248 breed for tobacco growers market snr
Author
First Published Mar 13, 2024, 11:26 AM IST

 ಹುಣಸೂರು :  ಮುಂಬರುವ ಸಾಲಿನಲ್ಲಿ ತಂಬಾಕು ಬೆಳೆಗಾರರಿಗೆ ಎಫ್.ಸಿಎಚ್ 248 ತಳಿಯನ್ನು ವಿತರಿಸಲು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ (ಸಿಟಿಆರ್ಐ) ನಿರ್ಧರಿಸಿದೆ ಎಂದು ಆಂಧ್ರಪ್ರದೇಶದ ರಾಜಮುಂಡ್ರಿಯ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ (ಸಿಟಿಆರ್.ಐ) ದ ನಿರ್ದೇಶಕ ಡಿ.ಎಂ. ಶೇಷು ಮಾಧವ್ ಹೇಳಿದರು.

ಹುಣಸೂರಿದ ಸಿಟಿಆರ್.ಐ ಶಾಖೆಯಲ್ಲಿ ಆಯೋಜಿಸಿದ್ದ ತಂಬಾಕು ಕೃಷಿಯಲ್ಲಿ ಅನುಸರಿಸಬೇಕಾದ ಉತ್ತಮ ಪದ್ಧತಿಗಳು ಕುರಿತಾದ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ರಾಜಮುಂಡ್ರಿಯಿಂದ ಆನ್ಲೈನ್ (ವಿಸಿ) ಮೂಲಕ ರಾಜ್ಯದ ತಂಬಾಕು ಬೆಳೆಗಾರರಿಗೆ ಉದ್ದೇಶಿಸಿ ಅವರು ಮಾತನಾಡಿದರು.

ಮೈಸೂರು ಜಿಲ್ಲೆ ವ್ಯಾಪ್ತಿಯ ತಂಬಾಕು ಬೆಳೆವ ಪ್ರದೇಶಗಳಲ್ಲಿ ರೈತರು ಸಿಟಿಆರ್. ಐ ವಿಜ್ಞಾನಿಗಳು ನೀಡಿದ ಸಲಹೆ ಸೂಚನೆಗಳನ್ನು ಅಳವಡಿಸಿಕೊಂಡ ಕಾರಣದಿಂದಾಗಿ ಈ ಬಾರಿ ಭೀಕರ ಬರಗಾಲದಲ್ಲೂ 87 ಮಿಲಿಯನ್ ಕೆಜಿ ಹೊಗೆಸೊಪ್ಪು ಬೆಳೆದಿದ್ದು ಇದು ಶ್ಲಾಘನೀಯವಾದ ಕಾರ್ಯವಾಗಿದೆ. ಈವರೆಗೆ ಎಫ್.ಸಿಎಚ್ 222 ತಳಿಯನ್ನು ರೈತರು ಬಳಸುತ್ತಿದ್ದರು. ಹುಣಸೂರು ಕೇಂದ್ರದಿಂದ ಸಂಶೋಧಿತ ಎಫ್.ಸಿಎಚ್ 222 ತಳಿ ರೈತರು ವಿಶ್ವಾಸ ಮತ್ತು ನಂಬಿಕೆ ಇಟ್ಟಿದ್ದಾರೆ. ಇದೀಗ ಇನ್ನಷ್ಟು ಸುಧಾರಿತ ತಳಿಯಾದ ಎಫ್ಸಿಎಚ್ 248 ತಳಿ ಬಳಕೆಗೆ ಸಿದ್ದವಾಗಿದ್ದು, ಈ ಸಾಲಿನಿಂದಲೇ (2024-25) ವಿತರಿಸಲು ನಿರ್ಧರಿಸಿದೆ. ಮುಂಬರುವ ವರ್ಷಗಳಲ್ಲಿ ಮತ್ತೊಂದು ಸುಧಾರಿತ ತಳಿಯಾದ ಎಫ್ಸಿಎಚ್ 1(ಹೈಬ್ರಿಡ್) ತಳಿಯನ್ನು ರೈತರಿಗೆ ಒದಗಿಸಲಾಗುವುದು ಎಂದರು.

ವಿಜ್ಞಾನಿಗಳ ಸಲಹೆ ಸೂಚನೆಗಳನ್ನು ಪಾಲಿಸಿರಿ

ತಂಬಾಕು ಕೃಷಿಯಲ್ಲಿ ಮುಖ್ಯವಾಗಿ ಸಮಯಕ್ಕೆ ಸರಿಯಾಗಿ ನರ್ಸರಿಯನ್ನು ಆರಂಭಿಸುವುದು ಅಗತ್ಯವಾಗಿದ್ದು, ಈ ಭಾಗದಲ್ಲಿ ಬಹುತೇಕ ರೈತರು ಮೇ ಮೊದಲ ವಾರದಲ್ಲಿ ನರ್ಸರಿಯನ್ನು ಆರಂಭಿಸಬೇಕು. ರಸಗೊಬ್ಬರಗಳನ್ನು ಎರಡು ಹಂತದಲ್ಲಿ ಬಳಸುವುದು, ಕ್ಯಾಲ್ಷಿಯಂ ನೈಟ್ರೇಟ್ನ ಬಳಕೆ (ಎಕರೆಗೆ ಒಂದು ಬ್ಯಾಗ್ ಪ್ರಮಾಣ), ಅಗತ್ಯವಾಗಿರುವ ಕುಡಿ ಮತ್ತು ಕಂಕುಳು ಕುಡಿ ನಿರ್ವಹಣೆ ಮುಂತಾದ ಉಪಕ್ರಮಗಳನ್ನು ವಿಜ್ಞಾನಗಳು ತಿಳಿಸಿದ್ದು ಅದನ್ನು ಅನುಸರಿಸುವುದರ ಮೂಲಕ ರೈತರು ಉತ್ತಮ ಇಳುವರಿ ಮತ್ತು ಗುಣಮಟ್ಟವನ್ನು ಪಡೆಯಬಹುದಾಗಿದೆ ಎಂದರು.

ವಿಸಿ ನಂತರ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಟಿಆರ್.ಐ ಹುಣಸೂರು ಶಾಖೆಯ ಮುಖ್ಯಸ್ಥ ಡಾ.ಎಸ್. ರಾಮಕೃಷ್ಣನ್ ಮಾತನಾಡಿ, ರೈತರು ನರ್ಸರಿ ಹಂತದಲ್ಲಿ ರೆಡೋಮಿಲ್ ಗೋಲ್ಡ್ ಅಥವಾ ಮಕ್ಟೋ ಗೋಲ್ಡ್ ಔಷಧವನ್ನು 20 ಗ್ರಾಂ.ಪುಡಿಯನ್ನು 10 ಲೀಟರ್ ನೀರಿನ ಕ್ಯಾನ್ ಗೆ ಮಿಶ್ರಣಮಾಡಿ ಬಳಸುವುದು ಮತ್ತು 10 ಎಂಎಲ್ ಗ್ಲೋ ಇಟ್ ಔಷಧವನ್ನು 15ಲೀ.ನೀರಿಗೆ ಮಿಶ್ರಣಮಾಡಿ ಸಿಂಪರಣೆ ಮಾಡುವ ಮೂಲಕ ನರ್ಸರಿಯಲ್ಲಿನ ಕಾಂಡ ಕೊಳೆತವನ್ನು ತಡೆಗಟ್ಟಲು ಸಾಧ್ಯವಿದೆ ಎಂದರು.

ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಅಧಿಕಾರಿ ಪಿ. ಸುಬ್ಬರಾವ್, ಐಟಿಸಿ ಕಂಪನಿಯ ವ್ಯವಸ್ಥಾಪಕ ಚನ್ನವೀರೇಶ್, ಹರಾಜು ಅಧೀಕ್ಷಕ ರಾಮ್ ಮೋಹನ್ ಸೂರಿ, ಹಿರಿಯ ವಿಜ್ಞಾನಿ ಎಂ. ಮಹದೇವಸ್ವಾಮಿ ಹಾಗೂ ಪ್ರಗತಿಪರ ರೈತರು ಇದ್ದರು.

Follow Us:
Download App:
  • android
  • ios