Bengaluru: ರಾಜಧಾನಿಯಲ್ಲಿ ಸಿಗ್ತಿಲ್ಲ ಜಾಗ, 250 ಮೀಟರ್‌ ಎತ್ತರದ ಸ್ಕೈಡೆಕ್‌ ಸ್ಥಳ ಮತ್ತೆ ಬದಲು?

ಬ್ರ್ಯಾಂಡ್‌ ಬೆಂಗಳೂರಿನ ಮಹತ್ವಾಕಾಂಕ್ಷೆಯ ಸ್ಕೈಡೆಕ್‌ ಯೋಜನೆಗೆ ಮತ್ತೊಂದು ಹಿ setback. ಹೆಮ್ಮಿಗೆಪುರದಲ್ಲಿ ನಿರ್ಮಾಣವಾಗಬೇಕಿದ್ದ ಸ್ಕೈಡೆಕ್‌ ಸ್ಥಳ ಮೂರನೇ ಬಾರಿಗೆ ಬದಲಾಗುವ ಸಾಧ್ಯತೆ. ಕಾನೂನು ತೊಡಕುಗಳು ಮತ್ತು ಭೂಸ್ವಾಧೀನ ಸಮಸ್ಯೆಗಳು ಯೋಜನೆಗೆ ಅಡ್ಡಿಯಾಗಿವೆ.

Bengaluru 250 metre high sky deck proposed Location may change yet again san

ಬೆಂಗಳೂರು (ನ.25): ಬ್ರ್ಯಾಂಡ್‌ ಬೆಂಗಳೂರಿಗೆ ಡಿಸಿಎಂ ಡಿಕೆ ಶಿವಕುಮಾರ್‌ ತೋರಿಸಿದ್ದ ಸ್ಕೈ ಡೆಕ್‌ ಆಸೆ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ. ಮೂಲಗಳ ಪ್ರಕಾರ ಸ್ಕೈಡೆಕ್‌ ಸ್ಥಾಪನೆಗಾಗಿ ಮೀಸಲಾಗಿದ್ದ ಸ್ಥಳ ಮತ್ತೊಮ್ಮೆ ಬದಲಾವಣೆ ಆಗುವ ಸಾಧ್ಯತೆ ಇದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಹಿಂದೆ ಹೆಮ್ಮಿಗೆಪುರದಲ್ಲಿ 250 ಮೀಟರ್‌ ಎತ್ತರದ ಸ್ಕೈಡೆಕ್‌ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿತ್ತು. ಆದರೆ, ಈ ಸ್ಥಳವೀಗ ಮೂರನೇ ಬಾರಿಗೆ ಬದಲಾಗುವ ಸಾಧ್ಯತೆ ಇದೆ. ಈ ವರ್ಷದ ಜುಲೈನಲ್ಲಿ, ಹೆಮ್ಮಿಗೆಪುರದಲ್ಲಿ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್) ಒಡೆತನದ 25 ಎಕರೆ ಜಾಗವನ್ನು ಬಿಬಿಎಂಪಿ ಅಂತಿಮಗೊಳಿಸಿತ್ತು. ನವೆಂಬರ್ ಮೊದಲ ವಾರದಲ್ಲಿ ಬಿಬಿಎಂಪಿ ಈ ಸ್ಥಳಕ್ಕಾಗಿ ನಾಗರಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು.

ನಿರ್ದಿಷ್ಟ ಭೂಮಿ ವಿಚಾರವಾಗಿ ಸಮಸ್ಯೆ ತಲೆದೋರಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ಕರ್ನಾಟಕ ಸರ್ಕಾರವು ನೈಸ್‌ನೊಂದಿಗೆ ವಿನಿಮಯ ಪದ್ಧತಿಯಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಂತೆ ಸೂಚಿಸಿತ್ತು. ನಿರ್ದಿಷ್ಟ ಭೂಮಿಗೆ ಬದಲಾಗಿ ಮತ್ತೊಂದು ಸರ್ಕಾರಿ ಭೂಮಿಯನ್ನು ನೀಡಲು ಮುಂದಾಗಿತ್ತು. ಹಾಗಿದ್ದರೂ ಕೂಡ ಈ ಜಾಗದ ವಿಚಾರವಾಗಿ ಅಡೆತಡೆ ಎದುರಿಸಿದೆ.

ನಿರ್ದಿಷ್ಟ ಸ್ಥಳಕ್ಕೆ ಕರ್ನಾಟಕ ಸರ್ಕಾರವು ಇನ್ನೂ ಅನುಮೋದನೆ ನೀಡಬೇಕಾಗಿದೆ ಮತ್ತು ಈಗ ಶಿಫಾರಸು ಮಾಡಿರುವ ಸ್ಥಳವು ಬದಲಾಗಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಹೇಳಿದ್ದಾರೆ. ಈ ಪ್ರದೇಶದಲ್ಲಿ ಸ್ಕೈ ಡೆಕ್ ನಿರ್ಮಿಸಲು ಈ ನಿರ್ದಿಷ್ಟ 25 ಎಕರೆ ಪ್ಲಾಟ್ ಅತ್ಯಂತ ಸೂಕ್ತವಾಗಿದೆ ಎಂದು ನಾಗರಿಕ ಸಂಸ್ಥೆ ಭಾವಿಸಿದೆ. ಆದರೆ,ಕಾನೂನು ಸಮಸ್ಯೆಗಳಿಂದಾಗಿ ಸ್ಥಳವನ್ನು ಬದಲಾಯಿಸುವ ಅನಿವಾರ್ಯತೆಗೆ ಸಿಲುಕಬಹುದು ಎಂದು ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಸ್ಲಿಂ ಹುಡುಗರು ಬೇಡವೇ ಬೇಡ; ಡಿವೋರ್ಸ್ ಆದ್ಮೇಲೆ ಸಾನಿಯಾಗೆ ಬುದ್ಧಿ ಹೇಳಿದ ನೆಟ್ಟಿಗರು!

ಹಾಗೇನಾದರೂ ಸ್ಕೈಡೆಕ್‌ನ ಸ್ಥಳ ಚೇಂಜ್‌ ಆದಲ್ಲಿ ಮೂರನೇ ಬಾರಿಗೆ ಸ್ಕೈಡೆಕ್‌ ನಿರ್ಮಾಣಕ್ಕೆ ಪ್ರಸ್ತಾಪ ಮಾಡಲಾದ ಸ್ಥಳವನ್ನು ಬದಲಾವಣೆ ಮಾಡಿದಂತೆ ಆಗಲಿದೆ. ಈ ಹಿಂದೆ, ನ್ಯೂ ಗವರ್ನಮೆಂಟ್‌ ಎಲೆಕ್ಟ್ರಿಕ್ ಫ್ಯಾಕ್ಟರಿ (ಎನ್‌ಜಿಇಎಫ್) ಆವರಣದಲ್ಲಿ 10 ಎಕರೆ ಜಾಗವನ್ನು ಬಿಬಿಎಂಪಿ ಗುರುತಿಸಿತ್ತು.  ಮತ್ತೊಂದು ಆಯ್ಕೆಯು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ಲಿಮಿಟೆಡ್ (KSDL) ಆವರಣವಾಗಿತ್ತು. ಆದರೆ, ಭದ್ರತಾ ಕಾರಣಗಳಿಗಾಗಿ 250 ಮೀಟರ್ ಎತ್ತರದ ಸ್ಕೈಡೆಕ್‌ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಭಾರತೀಯ ವಾಯುಪಡೆ ಅನುಮತಿ ನಿರಾಕರಿಸುವ ಸಾಧ್ಯತೆ ಇದ್ದಿದ್ದರಿಂದ ಸ್ಥಳ ಬದಲಾವಣೆ ಮಾಡಲಾಗಿತ್ತು.

ಬೆವರು, ಮೂತ್ರ ಸಂಸ್ಕರಿಸಿದ ನೀರಿನಿಂದ ಮಾಡಿದ ಸೂಪ್‌ ಕುಡಿದು ದಿನ ಕಳೆಯುತ್ತಿರುವ ಸುನೀತಾ ವಿಲಿಯಮ್ಸ್‌!

Latest Videos
Follow Us:
Download App:
  • android
  • ios