ಮೈಸೂರು : ಏ. 8 ರವರೆಗೆ ಮಳೆ ಮುಂದುವರಿಕೆ ಸಾಧ್ಯತೆ

ಮುಂದಿನ ಐದು ದಿನಗಳ ಕಾಲ ಜಿಲ್ಲೆಯಲ್ಲಿ ಬಿಸಿಗಾಳಿ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ. ಮೇ 8 ರವರೆಗೆ ಹಗುರ ಮಳೆ ಬೀಳುವ ಸಂಭವವಿದೆ.

Mysore  A. Rain likely to continue till 8 snr

 ಮೈಸೂರು :  ಮುಂದಿನ ಐದು ದಿನಗಳ ಕಾಲ ಜಿಲ್ಲೆಯಲ್ಲಿ ಬಿಸಿಗಾಳಿ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ. ಮೇ 8 ರವರೆಗೆ ಹಗುರ ಮಳೆ ಬೀಳುವ ಸಂಭವವಿದೆ.

ಗರಿಷ್ಟ ಉಷ್ಣಾಂಶ 37.2 ರಿಂದ 38 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಬೇಕು, ಕಾಲ ಕಾಲಕ್ಕೆ ಸಾಕಷ್ಟು ನೀರು ಕುಡಿಯಬೇಕು, ಹಗುರವಾದ, ತಿಳಿ ಬಣ್ಣದ ಸಡಿಲ ಬಟ್ಟೆ ಧರಿಸಬೇಕು, ಪ್ರಯಾಣ ಮಾಡುವಾಗ ನೀರು ಒಯ್ಯಬೇಕು, ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು. ಜಾನುವಾರುಗಳನ್ನು ನೆರಳಿನಲ್ಲಿರಿಸಬೇಕು.

ರಾಜ್ಯದ 25 ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದ ಉಷ್ಣಾಂಶ; ರಾಯಚೂರಲ್ಲಿ 46.7 ಡಿಗ್ರಿ ದಾಖಲು

ಈ ಅವಧಿಯಲ್ಲಿ ಮೆಣಸಿನಕಾಯಿಗೆ ಥ್ರಿಪ್ಸ್‌ ಮತ್ತು ನುಸಿ, ಬೀನ್ಸ್‌ ಗೆ ಹಳದಿ ನಂಜು ರೋಗ, ಬಾಳೆಗೆ ಹುಸಿಕಾಂಡ ಕೊರಕ, ಟೊಮ್ಯಾಟೋಗೆ ಕಾಯಿ ಕೊರಕ, ಅಲಸಂದೆ ಮತ್ತು ಉದ್ದಿಗೆ ಸಸ್ಯಹೇನು, ಕಲ್ಲಂಗಡಿಗೆ ರಸಹೀರುವ ಕೀಟ ಕಾಡಬಹುದು. ರೈತರು ಹೆಚ್ಚಿನ ಮಾಹಿತಿಗೆ ದಾಮಿನಿ ಎಂಬ ತಂತ್ರಾಂಶವನ್ನು ಬಳಸಬಹುದು. ಜತೆಗೆ ಹೆಚ್ಚಿನ ಮಾಹಿತಿಗೆ ರೈತರು ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಸಿ. ರಾಮಚಂದ್ರ ಮತ್ತು ಡಾ.ಜಿ. ಸುಮಂತ್‌ ಕುಮಾರ್‌ಅವರ ದೂ. 0821- 2591267 ಅಥವಾ ಮೊ. 95353 45814 ಸಂಪರ್ಕಿಸಬಹುದು.

Latest Videos
Follow Us:
Download App:
  • android
  • ios